newsfirstkannada.com

EXCLUSIVE: ವಾಲ್ಮೀಕಿ ನಿಗಮ ಅಕ್ರಮ; ₹89.62 ಕೋಟಿ ಹಣ ಹೋಗಿದ್ದು ಯಾರ ಖಾತೆಗೆ? 

Share :

Published May 31, 2024 at 11:02pm

Update May 31, 2024 at 11:27pm

    ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ

    ₹89.62 ಕೋಟಿ ಅಕ್ರಮ ವರ್ಗಾವಣೆ ಪ್ರಕರಣ ತನಿಖೆ ಸಿಬಿಐಗೆ!

    ಭಷ್ಟಾಚಾರದ ದುಡ್ಡು ಹೋಗಿದ್ದು ಯಾರ ಖಾತೆಗೆ ಅನ್ನೋ ಮಾಹಿತಿ

ಬೆಂಗಳೂರು: ಇಡೀ ರಾಜ್ಯಾದ್ಯಂತ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ್ದೇ ಭಾರೀ ಸದ್ದು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕೃತ ಬ್ಯಾಂಕ್​ ಖಾತೆಯಿಂದ ಬರೋಬ್ಬರಿ ₹89.62 ಕೋಟಿ ಅಕ್ರಮ ವರ್ಗಾವಣೆ ಆಗಿರೋ ಕೇಸ್​ ಈಗ ಸಿಬಿಐಗೆ ವರ್ಗಾವಣೆ ಮಾಡಲಾಗಿದೆ.

ಇತ್ತೀಚೆಗಷ್ಟೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಕೇಸ್​ ಕೂಡ ದಾಖಲಾಗಿದೆ. ನಿಗಮದ ಅಧಿಕಾರಿಗಳ ನೀಡಿರೋ ದೂರಿನ ಆಧಾರದ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ಕೇಸ್​ ಮಾಡಲಾಗಿದೆ.

ಇತ್ತ ಕೇಸ್​​ ದಾಖಲಾಗುತ್ತಿದ್ದಂತೆ ಯಾವುದೇ ಕಾರಣಕ್ಕೆ ತನಿಖೆ ತೀವ್ರಗೊಳಿಸಬೇಡಿ ಎಂದು ಯೂನಿಯನ್‌ ಬ್ಯಾಂಕ್‌ ಆಡಳಿತ ಮಂಡಳಿ ಸಿಬಿಐಗೆ ಮನವಿ ಮಾಡಿದೆ. ₹3 ಕೋಟಿಗೂ ಹೆಚ್ಚು ಹಣದ ಅಕ್ರಮ ಕೇಸ್​ ಆಗಿರೋ ಕಾರಣ ಸಿಬಿಐಗೆ ವರ್ಗಾವಣೆ ಮಾಡಲಾಗಿದೆ.

₹89.62 ಕೋಟಿ ವರ್ಗಾವಣೆ ಆಗಿದ್ದು ಯಾರಿಗೆ?

ಸದ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕೃತ ಬ್ಯಾಂಕ್​ ಖಾತೆಯಿಂದ ಆರ್‌ಬಿಎಲ್‌ ಬ್ಯಾಂಕ್‌ನಲ್ಲಿರೋ ಹತ್ತು ಖಾಸಗಿ ಕಂಪನಿಗಳು ಮತ್ತು ಎಂಟು ವ್ಯಕ್ತಿಗಳ ಖಾತೆಗಳಿಗೆ ₹89.62 ಕೋಟಿ ಅಕ್ರಮವಾಗಿ ವರ್ಗಾವಣೆ ಆಗಿದೆ. ಅದು ಎಂ.ಜಿ ರೋಡನ್​ನಲ್ಲಿರೋ ಯೂನಿಯನ್​ ಬ್ಯಾಂಕ್​ನಿಂದ ಹೈದರಾಬಾದ್‌ ಬಂಜಾರಾ ಹಿಲ್ಸ್‌ ಶಾಖೆಯಲ್ಲಿರೋ ಖಾತೆಗಳಿಗೆ ಹಣ ವರ್ಗಾವಣೆ ಆಗಿರೋದು ಗಮನಾರ್ಹ.

ಭದ್ರತಾ ಏಜೆನ್ಸಿ, ವಾಣಿಜ್ಯ ವಹಿವಾಟು ಸಂಸ್ಥೆ, ತರಬೇತಿ ಸಂಸ್ಥೆಗಳು, ಮಾನವ ಸಂಪನ್ಮೂಲ ನಿರ್ವಹಣೆ, ಸಾಫ್ಟ್‌ವೇರ್‌ ಕಂಪನಿಗಳ ಹೆಸರಿನಲ್ಲಿರೋ ಖಾತೆಗಳಿಗೆ ₹49.52 ಕೋಟಿ ವರ್ಗಾವಣೆ ಆಗಿದೆ. ವ್ಯಕ್ತಿಗಳ ಬ್ಯಾಂಕ್​ ಖಾತೆಗಳಿಗೆ ಚೆಕ್‌ ಬಳಸಿ ₹40.10 ಕೋಟಿ ವರ್ಗಾಯಿಸಿರುವುದು ಪತ್ತೆಯಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಆಗಿರುವುದು ಬೆಂಗಳೂರು ಮೂಲದ ಕಂಪನಿಗಳಿಗೆ. ಆದರೆ, ಈ ಕಂಪನಿಗಳು ಖಾತೆಗಳು ಮಾತ್ರ ಹೈದರಾಬಾದ್​​​ ಬ್ಯಾಂಕ್​ ಒಂದರಲ್ಲಿ ಇವೆ. ಈ ವಿಷಯ ತಿಳಿದ ಕೂಡಲೇ ಈ ಹಣ ಸೀಜ್​ ಮಾಡಿ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ಆರ್‌ಬಿಎಲ್‌ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌. ಸುಬ್ರಮಣಿಯಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ವಾಲ್ಮೀಕಿ ನಿಗಮದ ಹಣ ಹೋಗಿದ್ದೆಲ್ಲಿಗೆ?

  1. ಪಿಫ್‌ಮಸ್‌ ಮ್ಯಾನೇಜ್‌ಮೆಂಟ್‌ ಪ್ರೈ.ಲಿ.; ₹5.35 ಕೋಟಿ
  2. ಝೆಲಿಯಂಟ್‌ ಟ್ರೈನಿಂಗ್‌ ಆ್ಯಂಡ್ ಕನ್ಸಲ್ಟಿಂಗ್‌ ಸರ್ವೀಸ್‌;₹4.97 ಕೋಟಿ
  3. ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಲಿ.;₹4.53 ಕೋಟಿ
  4. ವೈಎಂ ಎಂಟರ್‌ಪ್ರೈಸಸ್‌;₹4.98 ಕೋಟಿ
  5. ಮನ್ಹು ಎಂಟರ್‌ಪ್ರೈಸಸ್‌;₹5.01 ಕೋಟಿ
  6. ಅಕಾರ್ಡ್‌ ಬ್ಯುಸಿನೆಸ್‌ ಸರ್ವೀಸಸ್‌;₹ 5.46 ಕೋಟಿ
  7. ಮೆ. ಟ್ಯಾಲೆಂಕ್‌ ಸಾಫ್ಟ್‌ವೇರ್‌ ಇಂಡಿಯಾ ಪ್ರೈ.ಲಿ.; ₹5.10 ಕೋಟಿ
  8. ನಿತ್ಯ ಸೆಕ್ಯುರಿಟಿ ಸರ್ವೀಸಸ್‌;₹4.47 ಕೋಟಿ
  9. ವೋಲ್ಟಾ ಟೆಕ್ನಾಲಜಿ ಸರ್ವೀಸಸ್‌;₹5.12 ಕೋಟಿ
  10. ವಿ6 ಬ್ಯುಸಿನೆಸ್‌ ಸಲ್ಯೂಷನ್ಸ್‌;₹4.50 ಕೋಟಿ
  11. ಎಂಟು ವೈಯಕ್ತಿಕ ಖಾತೆಗಳಿಗೆ;₹40.10 ಕೋಟಿ

ಇದನ್ನೂ ಓದಿ: ವಾಲ್ಮೀಕಿ ನಿಗಮ ಅಕ್ರಮ; ಸರ್ಕಾರ ಮೊದಲ ವಿಕೆಟ್ ಪತನ ನಿಶ್ಚಿತ; ಬಿ. ನಾಗೇಂದ್ರ ರಾಜೀನಾಮೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXCLUSIVE: ವಾಲ್ಮೀಕಿ ನಿಗಮ ಅಕ್ರಮ; ₹89.62 ಕೋಟಿ ಹಣ ಹೋಗಿದ್ದು ಯಾರ ಖಾತೆಗೆ? 

https://newsfirstlive.com/wp-content/uploads/2024/05/Minister-B-Nagendra-1.jpg

Load More