newsfirstkannada.com

VIDEO: 6 ಬಾಲ್​​ಗೆ 6 ಸಿಕ್ಸರ್​​ ಸಿಡಿಸಿ ಹೊಸ ದಾಖಲೆ ಬರೆದ ಭಾರತದ ಬ್ಯಾಟ್ಸ್​​ಮನ್​​!

Share :

Published February 22, 2024 at 8:29pm

    ಈ ಹಿಂದೆ 6 ಬಾಲ್​ಗೆ 6 ಸಿಕ್ಸರ್​ ಸಿಡಿಸಿ ದಾಖಲೆ ಬರೆದಿದ್ದ ದಿಗ್ಗಜರು

    ರವಿಶಾಸ್ತ್ರಿ, ಯುವಿ​​​, ಗಾಯಕ್ವಾಡ್​ ಬೆನ್ನಲ್ಲೇ ಮತ್ತೋರ್ವನಿಂದ ಸಾಧನೆ

    ಹೊಸ ದಾಖಲೆ ಬರೆದ ಆಂಧ್ರ ಪ್ರದೇಶದ ಬ್ಯಾಟ್ಸ್​ಮನ್​ ವಂಶಿ ಕೃಷ್ಣ!

ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲಿ ಆಂಧ್ರ ಪ್ರದೇಶದ ಬ್ಯಾಟ್ಸ್​ಮನ್​ ವಂಶಿ ಕೃಷ್ಣ ಹೊಸ ದಾಖಲೆ ಬರೆದಿದ್ದಾರೆ. ಸಿಕೆ ನಾಯ್ಡು ಟ್ರೋಫಿಯಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್​ ಸಿಡಿಸಿ ಮಿಂಚಿದ್ದಾರೆ.

ರೈಲ್ವೇಸ್​ ವಿರುದ್ಧ ಕಡಪಾದಲ್ಲಿ ನಡೆದ ಪಂದ್ಯದಲ್ಲಿ ವಂಶಿ ಕೃಷ್ಣ ಈ ಸಾಧನೆ ಮಾಡಿದ್ದಾರೆ. ದಮನ್​ದೀಪ್​ ಸಿಂಗ್​ ಬೌಲಿಂಗ್​ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್​ ಬಾರಿಸಿ 64 ಎಸೆತಗಳಲ್ಲಿ 110 ರನ್​ ಸಿಡಿಸಿದ್ದಾರೆ.

ಈ ಹಿಂದೆ ರವಿಶಾಸ್ತ್ರಿ (1985), ಯುವರಾಜ್ ಸಿಂಗ್ (2007) ಮತ್ತು ಋತುರಾಜ್ ಗಾಯಕ್ವಾಡ್ (2022)​ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸಿ ದಾಖಲೆ ಬರೆದಿದ್ದರು. ಈ ದಿಗ್ಗಜರ ಪಟ್ಟಿಗೆ ವಂಶಿ ಕೃಷ್ಣ ಕೂಡ ಸೇರ್ಪಡೆಗೊಂಡಿದ್ದಾರೆ.

ಈಗಲೂ ಯುವರಾಜ್​ ಸಿಂಗ್​ 6 ಸಿಕ್ಸರ್​ದೇ ಹವಾ!​​

ಅದು 2007ರ ಟಿ20 ವಿಶ್ವಕಪ್. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್​ನಲ್ಲಿ ಯುವರಾಜ್ ಸಿಂಗ್, 6 ಎಸೆತಗಳಿಗೆ ಆರು ಸಿಕ್ಸರ್​ ಸಿಡಿಸಿದ್ದರು. ಆ ಮೂಲಕ ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಈ ಸಾಧನೆಗೈದ ಮೊದಲ ಆಟಗಾರ ಎನಿಸಿಕೊಂಡಿದ್ದರು.

VIDEO: 6 ಬಾಲ್​​ಗೆ 6 ಸಿಕ್ಸರ್​​ ಸಿಡಿಸಿ ಹೊಸ ದಾಖಲೆ ಬರೆದ ಭಾರತದ ಬ್ಯಾಟ್ಸ್​​ಮನ್​​!

https://newsfirstlive.com/wp-content/uploads/2024/02/6-sixes.jpg

Load More