/newsfirstlive-kannada/media/post_attachments/wp-content/uploads/2025/03/vanilla-crop-1.jpg)
ರೈತರಿಗೆ ವಿಪರೀತ ಗಳಿಕೆ ತಂದುಕೊಡುವ ಕೆಲವು ಬೆಳೆಗಳು ಇವೆ. ಅವುಗಳಲ್ಲಿ ಕೇಸರಿಯೂ ಕೂಡ ಒಂದು. ಕೇಸರಿ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುವ ಮಸಾಲೆ ಪದಾರ್ಥ.ಅದನ್ನು ಹೆಚ್ಚು ಕಡಿಮೆ ಜಮ್ಮು ಕಾಶ್ಮೀರದಂತಹ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಉಳಿದ ಪ್ರದೇಶದಲ್ಲಿ ಕೇಸರಿ ಬೆಳೆಯುವುದು ಕಷ್ಟ ಮತ್ತು ಅಷ್ಟು ದುಡ್ಡು ಗಳಿಸುವುದು ಸ್ವಲ್ಪ ಕಷ್ಟ ಆದ್ರೆ ಇನ್ನೊಂದು ಬೆಳೆ ಇದೆ. ಅದೇ ವೆನಿಲಾ.
ನಿಮ್ಮ ಬಳಿ ಎರಡರಿಂದ ಮೂರು ಎಕರೆ ಕೃಷಿ ಭೂಮಿ ಇದ್ದರೆ ಸಾಕು. ವಾತಾವರಣ ಬಿಸಿ ಹಾಗೂ ಕೊಂಚ ತಂಪಾಗಿರುವಂತಹ ಪ್ರದೇಶಗಳಲ್ಲಿಯೂ ಕೂಡ ಈ ಒಂದು ಬೆಳೆಯನ್ನು ಬೆಳೆಯಬಹುದು. ಇದು ಸ್ಪಷ್ಟವಾಗಿ ರೈತರ ಆಶಾಕಿರಣ. ಮಾರುಕಟ್ಟೆಯಲ್ಲಿಯೂ ಕೂಡ ಇದಕ್ಕೆ ಬೇಡಿಕೆಯೂ ಕೂಡ ಭಾರೀ ಪ್ರಮಾಣದಲ್ಲಿದೆ. ಕೆಜಿಗೆ 40 ರಿಂದ 50 ಸಾವಿರ ರೂಪಾಯಿ ದೊರೆಯುತ್ತದೆ. ನೀವು ಒಂದು ಬಾರಿ ಈ ಬೆಳೆಯ ಮೊರೆ ಹೋದರೆ ಸಾಕು ನೀವು ಲಕ್ಷಾಧಿಪತಿಯಾಗುವುದರಲ್ಲಿ ಸಂಶಯವೇ ಇಲ್ಲ.
ಇದನ್ನೂ ಓದಿ:ಭಾರತದಲ್ಲಿ ಅತಿಹೆಚ್ಚು ದ್ರಾಕ್ಷಿ ಉತ್ಪಾದನೆ ಮಾಡುವ 2ನೇ ಅತಿದೊಡ್ಡ ರಾಜ್ಯ ಕರ್ನಾಟಕ.. ನಂಬರ್ ಒನ್ ಯಾವುದು?
ಇದಕ್ಕೆ ಕಾರಣ ಜಾಗತಿಕವಾಗಿ ವೆನಿಲಾಗೆ ಇರುವ ಭಾರೀ ಬೇಡಿಕೆ. ಇದರ ಫಲ ಮತ್ತು ಬೀಜದ ಬೇಡಿಕೆ ಹಾಗೂ ಬೆಲೆ ತುಂಬಾ ದೊಡ್ಡದಿದೆ. ಇದನ್ನು ಆಹಾರ ತಯಾರಿಕೆಗೆ, ಸೌಂದರ್ಯವರ್ಧಕ ಹಾಗೂ ಔಷಧಗಳ ತಯಾರಿಕೆಗೆ ಬಳಸಲಾಗುತ್ತದೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಲಾಭಕಾರಿ ಈ ಎಲ್ಲಾ ಅಂಶಗಳು ಇದರಲ್ಲಿ ಇರುವುದರಿಂದ ಇದರ ಬೇಡಿಕೆ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ಬೆಳೆಯುತ್ತಿದೆ.
ಹೀಗಾಗಿ ವೆನಿಲಾವನ್ನು ಎರಡು ಮೂರು ಎಕರೆ ಜಾಗಗಳಲ್ಲಿ ನೀವು ಆರಾಮವಾಗಿ ಬೆಳೆದು ಕ್ವಿಂಟಾಲ್ ಮಟ್ಟದಲ್ಲಿ ನೀವು ಬೆಳೆಯನ್ನು ತೆಗೆಯಬಹುದು. ಇದು ಹಲವು ರೀತಿ ಕಾರ್ಯಗಳಿಗೆ ಉಪಯೋಗವಾಗುವ ಹಾಗೂ ಬೇಡಿಕೆಗೆ ತಕ್ಕ ಪೂರೈಕೆ ಇಲ್ಲದ ಕಾರಣ ಅತಿಹೆಚ್ಚು ಬೇಡಿಕೆ ಹೊಂದಿರುವ ಬೆಳೆ. ಹೀಗಾಗಿ ರೈತರು ಈ ಬೆಳೆಯನ್ನು ತಮ್ಮ ಭೂಮಿಯಲ್ಲಿ ಬೆಳೆದುಕೊಂಡರೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ದುಡಿಯಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ