/newsfirstlive-kannada/media/post_attachments/wp-content/uploads/2025/05/Yashaswini-master-anand.jpg)
ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್, ನಿರೂಪಕ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ವಿನಿ ಹೊಸ ಲುಕ್ ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಇದಕ್ಕೆ ಒಂದು ಕಾರಣ ಕೂಡ ಇದೆ.
ಇದನ್ನೂ ಓದಿ:ಸೀತಾರಾಮ ತಂಡದಿಂದ ಬಿಗ್ ಶಾಕ್.. ವೀಕ್ಷಕರಿಗೆ ಗುಡ್ ಬೈ ಹೇಳಲು ಮುಂದಾದ ಟಾಪ್ ಸೀರಿಯಲ್
ಹೌದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ವಿವ್ ಆಗಿರುವ ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್, ನಿರೂಪಕ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರ ಲುಕ್ ಚೇಂಜ್ ಆಗಿದೆ. ಇವರ ಲುಕ್ ನೋಡಿದವರು ಮಗಳು ವಂಶಿಕಾ ಅಕ್ಕಾನಾ ಅಂತ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ.
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡವರಲ್ಲಿ ಯಶಸ್ವಿನಿ ಮಾಸ್ಟರ್ ಆನಂದ್ ಕೂಡ ಒಬ್ಬರು. ಇವರ ಮಗಳು ವಂಶಿಕಾ ಕೂಡ ಕಿರುತೆರೆಯಲ್ಲಿ ಸಖತ್ ಌಕ್ಟೀವ್ ಆಗಿದ್ದಾರೆ. ಇದೀಗ ಯಶಸ್ವಿನಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೊಸ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಶೇರ್ ಮಾಡಿಕೊಂಡ ಫೋಟೋದಲ್ಲಿ ಯಶಸ್ವಿನಿ ಅವರು ಸಖತ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕ್ಯೂಟ್ ಆಗಿ ಫೋಟೋಗೆ ನಟಿಯಂತೆ ಪೋಸ್ ಕೊಟ್ಟಿದ್ದಾರೆ. ಇದೇ ಪೋಟೋಸ್ ನೋಡಿದ ಸಾಕಷ್ಟು ಮಂದಿ ಅಕ್ಕ ನೀವು ಅಷ್ಟು ಸ್ಲಿಮ್ ಆಗಿದ್ದು ಹೇಗೆ? ನಮಗೂ ಟಿಪ್ಸ್ ಕೊಡಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ