Advertisment

ಬರೋಬ್ಬರಿ 30 ಕೆಜಿ.. ನೀತಾ ಅಂಬಾನಿ ಮೆಚ್ಚಿದ ಈ ಐಷಾರಾಮಿ ಕೇಕ್‌ನ ವಿಶೇಷತೆಗಳು ಒಂದೆರಡಲ್ಲ! ಏನು ಗೊತ್ತಾ?

author-image
Veena Gangani
Updated On
ಬರೋಬ್ಬರಿ 30 ಕೆಜಿ.. ನೀತಾ ಅಂಬಾನಿ ಮೆಚ್ಚಿದ ಈ ಐಷಾರಾಮಿ ಕೇಕ್‌ನ ವಿಶೇಷತೆಗಳು ಒಂದೆರಡಲ್ಲ! ಏನು ಗೊತ್ತಾ?
Advertisment
  • ಮಾರ್ಚ್ 8, 1985ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದ ದಂಪತಿ
  • ಮುಖೇಶ್​ ಅಂಬಾನಿ ಹಾಗೂ ನೀತಾ ಅಂಬಾನಿಗಾಗಿ ವಿಶೇಷ ಕೇಕ್​ ತಯಾರು
  • ಮುಂಬೈನಲ್ಲಿ ಹೈ-ಎಂಡ್​ ಬೇಕರಿಯಲ್ಲಿ ತಯಾರಾದ ಈ ಕೇಕ್​ನಲ್ಲಿ ಏನೆಲ್ಲಾ ಇದೆ?

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮೊನ್ನೆಯಷ್ಟೇ ಮುಖೇಶ್​ ಅಂಬಾನಿ ಹಾಗೂ ನೀತಾ ಅಂಬಾನಿ ಅವರಿಗೆ ವಿವಾಹ ವಾರ್ಷಿಕೋತ್ಸವ ಇತ್ತು. ಸದ್ಯ ಮುಖೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ಅವರ ದಾಂಪತ್ಯಕ್ಕೆ 40  ವರ್ಷಗಳಾಗಿವೆ.

Advertisment

ಇದನ್ನೂ ಓದಿ:ಬೇವಿನ ಮರಕ್ಕೆ ಕಾರು ಭೀಕರ ಡಿಕ್ಕಿ; ವಿಜಯಪುರದಲ್ಲಿ ಮೂವರು ಸಾವು, ಓರ್ವ ಗಂಭೀರ

ಮಾರ್ಚ್ 8, 1985ರಲ್ಲಿ ಮುಖೇಶ್​ ಅಂಬಾನಿ ಹಾಗೂ ನೀತಾ ಅಂಬಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಖೇಶ್ ಮತ್ತು ನೀತಾ ಅಂಬಾನಿ 40ನೇ ವಾರ್ಷಿಕೋತ್ಸವಕ್ಕಾಗಿ ವಿಶೇಷವಾದ ಐಷಾರಾಮಿ ಕೇಕ್ ಅನ್ನು ಅನಾವರಣ ಮಾಡಲಾಗಿದೆ.

publive-image

ಹೌದು, ಮುಖೇಶ್ ಮತ್ತು ನೀತಾ ಅಂಬಾನಿ ಅವರ 40ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕಾಗಿ ಮುಂಬೈನ ಪೇಸ್ಟ್ರಿ ಬಾಣಸಿಗರೊಬ್ಬರು ಚಿನ್ನ ಮತ್ತು ಗುಲಾಬಿ ಬಣ್ಣದ ಐಷಾರಾಮಿ ಕೇಕ್ ಅನ್ನು ತಯಾರಿಸಿ ಸಖತ್ ಸುದ್ದಿಯಲ್ಲಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರ ವಿವಾಹ ವಾರ್ಷಿಕೋತ್ಸವದ ಆಚರಣೆಗಾಗಿ ಮುಂಬೈನ ಪೇಸ್ಟ್ರಿಯೊಬ್ಬರು ವಿಶೇಷ ಥೀಮ್​​ನಲ್ಲಿ ಕೇಕ್ ಅನ್ನು ತಯಾರಿಸಿ ಆ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisment

publive-image

ಮುಂಬೈನಲ್ಲಿ ಹೈ-ಎಂಡ್​ ಬೇಕರಿ ನಡೆಸುತ್ತಿರುವ ಬಂಟಿ ಮಹಾಜನ್ ಅವರು, ಬರೋಬ್ಬರಿ 30 ಕೆಜಿಗಿಂತ ಹೆಚ್ಚು ತೂಕ ಇರುವ ಮತ್ತು ರಿಲಯನ್ಸ್ ಸ್ಥಾಪಿಸಿದ ಜಾಮ್‌ನಗರದಲ್ಲಿರುವ ವನ್ಯಜೀವಿ ಸಂರಕ್ಷಣಾ ಕೇಂದ್ರವಾದ ವಂತರಾದಿಂದ ಸ್ಫೂರ್ತಿ ಪಡೆದು ಈ ಕೇಕ್ ಅನ್ನು ರಚಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಆರು ಹಂತದ ಸೊಗಸಾದ ಕೇಕ್ ಮೇಲೆ ಚಿನ್ನದ ಬಣ್ಣದಲ್ಲಿ ಚಿತ್ರಿಸಲಾದ ಪ್ರಾಣಿಗಳ ಮೂರ್ತಿಗಳನ್ನು ಇಡಲಾಗಿದೆ. ಆ ಕೇಕ್​ ಮೇಲ್ಭಾಗದಲ್ಲಿ ಚಿನ್ನದ ಎಲೆಗಳಿದ್ದು, ಆನೆ, ಜೀಬ್ರಾ, ಹುಲಿ, ಸಿಂಹಗಳು, ಜಿರಾಫೆಗಳು ಮತ್ತು ಮೊಸಳೆಗಳನ್ನು ಒಳಗೊಂಡ ಚಿನ್ನದ ಹುಲ್ಲಿನ ಮೇಲೆ ಇಡಲಾಗಿದೆ. ಕೇಕ್​ನ ಮಧ್ಯದಲ್ಲಿ ದಂಪತಿಗಳ ಮೊದಲಕ್ಷರ ಸೂಚಿಸುವ "N" ಮತ್ತು "M" ಅನ್ನು ಒಳಗೊಂಡಿತ್ತು. ವಿಶೇಷ ಎಂದರೆ ಮಹಾಜನ್ ಅವರು, ನೀತಾ ಅಂಬಾನಿ ಅವರಿಗೆ ಇಷ್ಟ ಆಗುವ ಬಿಳಿ ಮತ್ತು ಚಿನ್ನದ ಬಣ್ಣದಲ್ಲಿ ಇಡೀ ಕೇಕ್ ರಚಿಸಲಾಗಿದೆ. ಆದ್ರೆ ಬರೋಬ್ಬರಿ 30 ಕೆಜಿಗಿಂತ ಹೆಚ್ಚು ತೂಕ ಇರುವ ಈ ಕೇಕ್​ ಬೆಲೆ ಎಷ್ಟು ಅಂತ ಎಲ್ಲೂ ರಿವೀಲ್​ ಮಾಡಿಲ್ಲ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment