/newsfirstlive-kannada/media/post_attachments/wp-content/uploads/2025/03/LALIT_MODI.jpg)
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರ ಪಾಸ್ ಪೋರ್ಟ್ ರದ್ದುಪಡಿಸಲು ವನವಾಟು ದೇಶದ ಪ್ರಧಾನ ಮಂತ್ರಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಅಲ್ಲಿನ ಇಲಾಖೆಗೆ ಕೂಡಲೇ ಪ್ರಕ್ರಿಯೆ ಆರಂಭಿಸಿ ಎಂದು ಸೂಚನೆ ಕೂಡ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಲಲಿತ್ ಮೋದಿ ಅವರಿಗೆ ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರವಾದ ವನವಾಟು ದೇಶದ ಪ್ರಧಾನ ಮಂತ್ರಿ ಜೋಥಮ್ ನಾಪಟ್ ಅವರೇ ಪಾಸ್‌ಪೋರ್ಟ್ ನೀಡಲು ಈ ಮೊದಲು ಸೂಚಿಸಿದ್ದರು. ಹೀಗಾಗಿ ಅಲ್ಲಿನ ಪಾಸ್ ಪೋರ್ಟ್ ನೀಡಲಾಗಿತ್ತು. ಆದರೆ ಲಲಿತ್ ಮೋದಿ ಭಾರತದಿಂದ ಗಡಿಪಾರು ತಪ್ಪಿಸಿಕೊಳ್ಳಲು ನಮ್ಮ ದೇಶದ ಪೌರತ್ವ ಪಡೆದಿದ್ದಾರೆ ಎಂಬುದು ಗೊತ್ತಾಗಿದೆ. ಹೀಗಾಗಿ ಸಿಟಿಜನ್ಶಿಪ್ ಕಮೀಷನ್ ತಕ್ಷಣವೇ ಅವರ ಪಾಸ್ ಪೋರ್ಟ್ ಅನ್ನು ರದ್ದು ಮಾಡುವ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಿದ್ದಾರೆ.
ವನವಾಟು ದೇಶದ ಪ್ರಧಾನಿಗೆ ಲಲಿತ್ ಮೋದಿ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಇಂಟರ್ ಪೋಲ್ನಿಂದ ಅವರಿಗೆ ಶಿಕ್ಷೆ ಆಗಿರುವ ಸೂಕ್ತ ಮಾಹಿತಿ ಕೊರತೆ ಆಗಿತ್ತು. ಹೀಗಾಗಿ ಇಂಟರ್ ಪೋಲ್ ಯಾವುದೇ ಆಲರ್ಟ್ ಹೊರಡಿಸಿರಲಿಲ್ಲ. ಆದ್ದರಿಂದ ಲಲಿತ್ ಮೋದಿ ಅವರ ಈ ಹಿಂದಿನ ಹಿನ್ನೆಲೆ ಏನು ಎಂದು ಹುಡುಕಿದಾಗ ವನವಾಟು ದೇಶಕ್ಕೆ ಯಾವುದೇ ನೆಗೆಟಿವ್ ಅಂಶ ಸಿಕ್ಕಿರಲಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಜಗತ್ತಿನ ರಿಯಲ್ ಕಿಂಗ್ ಟೀಮ್ ಇಂಡಿಯಾ.. ಹಿಟ್ಮ್ಯಾನ್ ರೋಹಿತ್ ಕ್ಯಾಪ್ಟನ್ಸಿ ಹೇಗಿರುತ್ತೆ?
ಸದ್ಯ ಇದೀಗ ಮಾಧ್ಯಮಗಳ ವರದಿಯಿಂದ ಎಚ್ಚೆತ್ತುಕೊಂಡು ಲಲಿತ್ ಮೋದಿ ಅವರ ಪಾಸ್ ಪೋರ್ಟ್ ರದ್ದುಗೆ ಕ್ರಮ ಕೈಗೊಳ್ಳಲಾಗಿದೆ. ಈ ಮೊದಲು ಲಲಿತ್ ಮೋದಿ ವಿರುದ್ಧ ಆಲರ್ಟ್ ಹೊರಡಿಸುವಂತೆ ಭಾರತ 2 ಭಾರಿ ಮನವಿ ಮಾಡಿದರೂ ಇಂಟರ್ ಪೋಲ್ ತಿರಸ್ಕಾರ ಮಾಡಿತ್ತು. ಈ ಅಂಶ ಕೂಡ ಇದೀಗ ವನವಾಟು ಪ್ರಧಾನಿ ಗಮನಕ್ಕೆ ಬಂದಿದೆ. ಇದರಿಂದ ಪಾಸ್ ಪೋರ್ಟ್ ರದ್ದುಪಡಿಸಲು ಆದೇಶ ಹೊರಡಿಸಲಾಗಿದೆ. ಸದ್ಯ ಇಂಗ್ಲೆಂಡ್ನಲ್ಲಿರುವ ಲಲಿತ್ ಮೋದಿಯವರಿಗೆ ಗಡಿಪಾರು ತಪ್ಪಿಸಿಕೊಳ್ಳುವ ಮಾರ್ಗಗಳಿಲ್ಲ ಎಂದು ಹೇಳಲಾಗುತ್ತಿದೆ.
ಭಾರತದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ ಐಪಿಎಲ್‌ನ ಅಧ್ಯಕ್ಷರಾಗಿದ್ದಾಗ ಲಲಿತ್ ಮೋದಿ ಅವರು ಕೋಟ್ಯಂತರ ರೂಪಾಯಿಗಳ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿ, ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2010ರಲ್ಲಿ ಭಾರತವನ್ನು ತೊರೆದು ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಲಂಡನ್‌ನ ಭಾರತದ ಹೈಕಮಿಷನ್ ಕಚೇರಿಯಲ್ಲಿ ತಮ್ಮ ಪಾಸ್‌ಪೋರ್ಟ್ ಲಲಿತ್ ಮೋದಿ ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ