/newsfirstlive-kannada/media/post_attachments/wp-content/uploads/2024/10/SUDEEP.jpg)
ಬಿಗ್​​ಬಾಸ್​ ಸೀಸನ್​-11 ಮೂರು ವಾರ ಪೂರೈಸಿದ್ದು, ಇಂದು ಕಿಚ್ಚ ಸುದೀಪ್ ಎಂಟ್ರಿ ಆಗಲಿದ್ದಾರೆ. ಕಳೆದ ಒಂದು ವಾರದಿಂದ ಬಿಗ್​ಬಾಸ್ ಮನೆಯಲ್ಲಿ, ನಡೆದ ಅನೇಕ ವಿಚಾರಗಳು ದೊಡ್ಡ ಮೊಟ್ಟದಲ್ಲಿ ಸದ್ದು ಮಾಡಿವೆ. ಹೀಗಾಗಿ ಇವತ್ತಿನ ಕಿಚ್ಚನ ಎಪಿಸೋಡ್​​ ತುಂಬಾನೇ ಕುತೂಹಲ ಮೂಡಿಸಿದೆ.
ಭಾರೀ ಹೈಡ್ರಾಮಾ..!
ದಸರಾ ಹಿನ್ನೆಲೆಯಲ್ಲಿ ಕಳೆದ ವಾರ ಎಲಿಮಿನೇಷನ್​ ಪ್ರಕ್ರಿಯೆ ನಡೆದಿರಲಿಲ್ಲ. ಈ ವಾರ ನಡೆದ ಕೆಲವು ಅಹಿತಕರ ಘಟನೆಗಳಿಂದಾಗಿ ಸ್ಪರ್ಧಿಗಳಾದ ಲಾಯರ್ ಜಗದೀಶ್ ಹಾಗೂ ರಂಜಿತ್ ಅವರನ್ನು ಮನೆಯಿಂದ ಆಚೆ ಹಾಕಲಾಗಿದೆ. ಅಂದರೆ ಇಬ್ಬರು ಸ್ಪರ್ಧಿಗಳು ಬ್ಯಾಗ್ ಹಿಡಿದು ಮನೆಗೆ ವಾಪಸ್ ಆಗಿದ್ದಾರೆ. ಈ ವಿಚಾರಗಳಿಗೆ ಸುದೀಪ್ ಪ್ರತಿಕ್ರಿಯೆ ಹೇಗಿರುತ್ತದೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.
ಆಕ್ಷೇಪಾರ್ಹ ಪದ ಬಳಕೆ
ಕೆಲವು ಸ್ಪರ್ಧಿಗಳು ಮನೆಯಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡ್ತಿದ್ದಾರೆ. ಇದು ವೀಕ್ಷಕರ ಸಮಾಧಾನಕ್ಕೆ ಕಾರಣವಾಗಿದೆ. ಟಾಸ್ಕ್​ ವೇಳೆ, ವಾದ-ಪ್ರತಿವಾದ ವೇಳೆ ಅತಿರೇಕಕ್ಕೆ ಹೋಗುವ ಸ್ಪರ್ಧಿಗಳು ಮನಸೋ ಇಚ್ಛೆ ನಿಂದನೆ ಮಾಡಿಕೊಳ್ತಿದ್ದಾರೆ. ಇಂಥ ವಿಚಾರಗಳ ಬಗ್ಗೆ ಸ್ಪರ್ಧಿಗಳಿಗೆ ಸುದೀಪ್ ಹೇಗೆ ಕ್ಲಾಸ್ ತೆಗೆದುಕೊಳ್ತಾರೆ ಅನ್ನೋ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಕನ್ನಡ ಮಾಯ
ಸ್ಪರ್ಧಿಗಳು ಕನ್ನಡ ಪದ ಬಳಕೆಯನ್ನು ಕಡಿಮೆ ಮಾಡಿದ್ದಾರೆ ಅನ್ನೋ ಆರೋಪ ಇದೆ. ಪದೇ ಪದೇ ಇಂಗ್ಲಿಷ್​​ನಲ್ಲಿ ಮಾತನಾಡುತ್ತಿರುವ ಸಂಬಂಧ ಈಗಾಗಲೇ ಸ್ಪರ್ಧಿಗಳಿಗೆ ಬಿಗ್​ಬಾಸ್​ ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಿದ್ದೂ ಸ್ಪರ್ಧಿಗಳು ಇಂಗ್ಲಿಷ್​​ನಲ್ಲಿ ಮಾತನಾಡ್ತಿದ್ದಾರೆ.
ಎಲಿಮಿನೇಷನ್ ಇರುತ್ತಾ..?
ಈಗಾಗಲೇ ಬಿಗ್​​ಬಾಸ್​ ಮನೆಯಿಂದ ಜಗದೀಶ್ ಹಾಗೂ ರಂಜಿತ್​ರನ್ನು ಹೊರಹಾಕಲಾಗಿದೆ. ಹೀಗಾಗಿ, ಈ ವಾರ ಎಲಿಮಿನೇಷನ್ ನಡೆಯೋದು ಡೌಟ್. ಆದರೂ ಸುದೀಪ್ ಯಾರೆಲ್ಲ ಸೇವ್ ಮಾಡುತ್ತಾರೆ? ಮೊದಲು ಸೇವ್ ಆಗೋದು ಯಾರು ಅನ್ನೋದ್ರ ಬಗ್ಗೆ ವೀಕ್ಷಕರಲ್ಲಿ ಎಕ್ಸೈಟ್​ಮೆಂಟ್ ಹೆಚ್ಚಾಗಿದೆ.
ಬಿಗ್​ಬಾಸ್​ಗೆ ಸುದೀಪ್ ಗುಡ್​ಬೈ
ಕಳೆದ ಭಾನುವಾರ ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್, ಬಿಗ್​ಬಾಸ್​ಗೆ ಗುಡ್​ಬೈ ಹೇಳಿದ್ದಾರೆ. ಮುಂದಿನ ವರ್ಷದಿಂದ ಸುದೀಪ್, ಬಿಗ್​​ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲ್ಲ. ಇದು ಅಭಿಮಾನಿಗಳಿಗೆ ಭಾರೀ ಬೇಸರವುಂಟು ಮಾಡಿದೆ. ಸುದೀಪ್ ಈ ನಿರ್ಧಾರ ಪ್ರಕಟಿಸಿದ ಬಳಿಕ ಮೊದಲ ಬಾರಿಗೆ ಬಿಗ್​ಬಾಸ್​ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us