Advertisment

ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಜೋರಾ..? ಈ ಮುಹೂರ್ತದಲ್ಲಿ ಮಾತ್ರ ಪೂಜೆ ಮಾಡಿ.. Don't Miss

author-image
Ganesh
Updated On
ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಜೋರಾ..? ಈ ಮುಹೂರ್ತದಲ್ಲಿ ಮಾತ್ರ ಪೂಜೆ ಮಾಡಿ.. Don't Miss
Advertisment
  • ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ
  • ವರಮಹಾಲಕ್ಷ್ಮಿ ಪೂಜೆಗೆ ಒಳ್ಳೆಯ ಮುಹೂರ್ತ ಯಾವುದು?
  • ಶುಭ ಕಾಲದಲ್ಲಿ ಪೂಜೆ ಮಾಡಿದ್ರೆ ಒಳ್ಳೆದಾಗುತ್ತೆ ಎಂಬ ನಂಬಿಕೆ

ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯದಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕಾರ್ಯಗಳು ನಡೆಯುತ್ತಿವೆ. ಅಲ್ಲದೇ ಜನಸಾಮಾನ್ಯರು ಮನೆಯಲ್ಲಿ ಲಕ್ಷ್ಮೀ ಪೂಜೆಗೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

Advertisment

ಹಬ್ಬ ಹಿನ್ನೆಲೆಯಲ್ಲಿ ವಿವಿಧ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿವೆ. ಇದಕ್ಕೆ ಬೆಂಗಳೂರಿನ ಕೆ.ಆರ್​ ಮಾರ್ಕೆಟ್​ ಕೂಡ ಹೊರತಾಗಿಲ್ಲ. ಹಬ್ಬದ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ. ಹಬ್ಬಕ್ಕೆ ಬೇಕಾದ ಹೂವು-ಹಣ್ಣುಗಳನ್ನ ಖರೀದಿಸ್ತಿದ್ದಾರೆ. ಆದ್ರೆ ಜನರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿದೆ. ಹೂವು, ಹಣ್ಣುಗಳ ಬೆಲೆಯಲ್ಲಿ ಡಬಲ್, ತ್ರಿಬಲ್ ಏರಿಕೆಯಾಗಿದೆ. ಹೀಗಿದ್ರೂ ಕೂಡ ಬೆಳಗ್ಗೆಯಿಂದಲೇ ಜನರು ಹಬ್ಬಕ್ಕೆ ಬೇಕಾದ ಹೂ, ಹಣ್ಣು, ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ಇವತ್ತು ನಿಮ್ಮ ಮನೆಯಲ್ಲಿ ಲಕ್ಷ್ಮೀ ಪೂಜೆಗೆ ಒಳ್ಳೆಯ ಸಮಯ ನೋಡುತ್ತಿದ್ದರೆ ಮಾಹಿತಿ ಇಲ್ಲಿದೆ. ಇಂದು ಸೂರ್ಯೋದಯ ಬೆಳಗ್ಗೆ 6.20ಕ್ಕೆ ಆಗಿದ್ದರೆ ಸೂರ್ಯಸ್ತವು ಸಂಜೆ 7.5ಕ್ಕೆ ಆಗಲಿದೆ. ಇನ್ನು ಚಂದ್ರೋದಯ ಸಂಜೆ 4.24ಕ್ಕೆ ಆದರೆ ಚಂದ್ರಾಸ್ತ ನಾಳೆ ಮುಂಜಾನೆ 3.26ಕ್ಕೆ ಆಗಲಿದೆ.

ಇಂದು ಅಶುಭ ಕಾಲ

  • ರಾಹು ಕಾಲ: ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.43ವರೆಗೆ
  • ಯಮಗಂಡ ಕಾಲ: ಮಧ್ಯಾಹ್ನ 3.54 ರಿಂದ ಸಂಜೆ 5.30ರವರೆಗೆ
  • ಕುಲಿಕ ಕಾಲ: ಬೆಳಗ್ಗೆ 7.56 ರಿಂದ ಬೆಳಗ್ಗೆ 9.31ವರೆಗೆ
  • ದುರ್ಮುಹೂರ್ತ ಕಾಲ: ಬೆಳಗ್ಗೆ 8.53 ರಿಂದ ಬೆಳಗ್ಗೆ 9.44ರವರೆಗೆ ಮಧ್ಯಾಹ್ನ 1.8 ರಿಂದ 1.59ವರೆಗೆ
Advertisment

ಶುಭ ಸಮಯ

  • ಅಭಿಜಿತ್ ಮುಹೂರ್ತ : ಮಧ್ಯಾಹ್ನ 12.17 ರಿಂದ 1.08 ನಿಮಿಷದವರೆಗೆ
  • ಅಮೃತ ಕಾಲ: ಬೆಳಗ್ಗೆ 6.22 ರಿಂದ 7.57ರವರೆಗೆ
  • ಬ್ರಹ್ಮ ಮುಹೂರ್ತ ಕಾಲ: ಮಧ್ಯಾಹ್ನ 4.31 ರಿಂದ ಸಂಜೆ 5.19ರವರೆಗೆ ಶುಭ ಸಮಯ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment