PHOTOS: ನಮ್ರತಾ ಗೌಡ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ ಜೋರು; ಯಾರೆಲ್ಲಾ ಬಂದಿದ್ರು?

author-image
Veena Gangani
Updated On
PHOTOS: ನಮ್ರತಾ ಗೌಡ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ ಜೋರು; ಯಾರೆಲ್ಲಾ ಬಂದಿದ್ರು?
Advertisment
  • ನಾಡಿನಾದ್ಯಂತ ಬಹಳ ಅದ್ಧೂರಿಯಾಗಿ ನಡೆದ ವರಮಹಾಲಕ್ಷ್ಮಿ ಹಬ್ಬ
  • ಕಾರ್ತಿಕ್​ ಮಹೇಶ್​, ನಮ್ರತಾ ಗೌಡ ಸೇರಿದಂತೆ ಯಾರೆಲ್ಲಾ ಬಂದಿದ್ರು ಗೊತ್ತಾ?
  • ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ನಮ್ರತಾ ಗೌಡ ಮನೆಯಲ್ಲಿ ಹಬ್ಬದ ಸಂಭ್ರಮ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಫೋಟೋಶೂಟ್‌ಗೆ ಸಖತ್ ಫೇಮಸ್‌. ಹೊಸ, ಹೊಸ ಫೋಟೋಗಳಿಂದಲೇ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ಯಾವುದೇ ಪ್ರಾಜೆಕ್ಟ್ ಕೈ ಹಾಕದ ಕಿರುತೆರೆ ನಟಿ ನಮ್ರತಾ ಗೌಡ ಅವರು ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.

publive-image

ಹೌದು, ಆಗಸ್ಟ್​ 16.. ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗಿದೆ. ಪ್ರತಿ ತಾರೆಯರು ತಮ್ಮ, ತಮ್ಮ ಮನೆಗಳಲ್ಲಿ ಬಹಳ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕಾರ್ಯಗಳು ನಡೆಯುತ್ತಿವೆ.

publive-image

ಅಲ್ಲದೇ ಜನಸಾಮಾನ್ಯರು ಮನೆಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿ ವರ ಕೊಡಲು ಪ್ರಾರ್ಥಿಸಿದ್ದಾರೆ. ಸ್ಯಾಂಡಲ್​ವುಡ್​ ತಾರೆಯರ ಮನೆಯಲ್ಲೂ ಕೂಡ ವರಮಹಾಲಕ್ಷ್ಮಿ ಹಬ್ಬವನ್ನ ಆಚರಣೆ ಮಾಡಿದ್ದಾರೆ. ಅದರಲ್ಲೂ ಬಿಗ್​ಬಾಸ್​ ಸೀಸನ್​ 10ರ ಖ್ಯಾತಿಯ ನಮ್ರತಾ ಗೌಡ ಅವರ ಮನೆಯಲ್ಲಿ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬವನ್ನ ಆಚರಣೆ ಮಾಡಿದ್ದಾರೆ.

ಇದನ್ನೂ ಓದಿ: ತರುಣ್ ಸುಧೀರ್ ಪತ್ನಿ ಸೋನಲ್ ಬ್ಲೌಸ್ ಡಿಸೈನ್ ಮಾಡಿದ್ಯಾರು? ಕಾಸ್ಟ್ಯೂಮ್ ಡಿಸೈನರ್​ಗೆ ಭಾರೀ ಡಿಮ್ಯಾಂಡ್‌!

publive-image

ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ನಟಿ ನಮ್ರತಾ ಗೌಡ ಅವರು ಬಿಗ್​ಬಾಸ್​ ಮಾಜಿ ಸ್ಪರ್ಧಿಗಳಿಗೂ ಮನೆಗೆ ಆಹ್ವಾನ ನೀಡಿದ್ದಾರೆ. ಬಿಗ್​ಬಾಸ್​ ವಿನ್ನರ್​, ನಟ ಕಾರ್ತಿಕ್ ಮಹೇಶ್ ಅವರು ತಾಯಿಯ ಜೊತೆಗೆ ನಮ್ರತಾ ಗೌಡ ಅವರ ಮನೆಗೆ ಆಗಮಿಸಿದ್ದರು. ಜೊತೆಗೆ ಮುದ್ದಾದ ಅಳಿಯನನ್ನು ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು.

publive-image

ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್​ ಕೂಡ ನಮ್ರತಾ ಗೌಡ ಅವರ ಮನೆಗೆ ಬಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಮುಖ್ಯವಾಗಿ ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ಸಂಗೀತಾ ಶೃಂಗೇರಿ ಅವರು ಅತ್ತಿಗೆ ಸುಚಿತ್ರಾ ಜೊತೆಗೆ ಬಂದಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಕವಿತಾ ಗೌಡ ಕೂಡ ಬಂದಿದ್ದಾರೆ.

publive-image

ವಿಶೇಷ ಎಂದರೆ ನಮ್ರತಾ ಗೌಡ ಅವರ ಮನೆಗೆ ನಟಿ ಸಿರಿ ಅವರು ಕೂಡ ಬಂದಿದ್ದಾರೆ. ಅಷ್ಟೇ ಅಲ್ಲದೇ ಕಿರುತೆರೆ ನಟ ನಟಿಯರು ಕೂಡ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ಇದೇ ಫೋಟೋಗಳನ್ನು ನಟಿ ನಮ್ರತಾ ಗೌಡ ತಮ್ಮ ಇನ್​ಸ್ಟಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

publive-image

ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನಟಿ ನಮ್ರತಾ ಗೌಡ ಕುಟುಂಬಕ್ಕೆ, ಅವರ ಮನೆಗೆ ಬಂದ ಗೆಸ್ಟ್​ಗಳಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೊಂದು ಅನಾಚಾರ.. ಬಾಲ್ಯ ವಿವಾಹ ದಿಢೀರ್‌ ಹೆಚ್ಚಳ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment