/newsfirstlive-kannada/media/post_attachments/wp-content/uploads/2025/07/mahanati12.jpg)
ನಟನೆ ಮೇಲೆ ಆಸ್ತಕಿ ಇದ್ದವರಿಗೆ ಇದೊಂದು ಅದ್ಭುತ ವೇದಿಕೆ. ಸ್ಟಾರ್ ಆಗಿ ಮಿಂಚಬೇಕು ಅನ್ನೋರಿಗಾಗಿಯೇ ಈ ವೇದಿಕೆ ನಿರ್ಮಾಣವಾಗಿದೆ. ಈ ವೇದಿಕೆಗೆ ಕರ್ನಾಟಕದ ನಾನಾ ಜಿಲ್ಲೆಗಳಿಂದ ಸಾವಿರಾರು ಆಕಾಂಕ್ಷಿಗಳು ಆಡಿಷನ್ಗೆ ಬಂದಿದ್ದರು. ಆಡಿಷನ್ನಲ್ಲಿ ಜಬರ್ದಸ್ತ್ ಪರ್ಫಾರ್ಮೆನ್ಸ್ ಕೊಟ್ಟು ಒಟ್ಟು 14 ಯುವತಿಯರು ಸೆಲೆಕ್ಟ್ ಆದರು.
ಇದನ್ನೂ ಓದಿ: ಧರ್ಮಸ್ಥಳ ಕೇಸ್ ತನಿಖೆ ಚುರುಕು; ರಹಸ್ಯ ಹೇಳ್ತೀನಿ ಎಂದಿದ್ದ ದೂರುದಾರನ ವಿಚಾರಣೆ ಹೇಗಿತ್ತು..?
ಈ ಸಾಲಿನಲ್ಲಿ ಬರುತ್ತಾರೆ ಉತ್ತರ ಕರ್ನಾಟಕದ ಜವಾರಿ ಹುಡುಗಿ ವರ್ಷ ಡಿಗ್ರಜೆ. ಹೌದು, ಮಹಾನಟಿ ವೇದಿಕೆ ಮೇಲೆ ಚಿಕ್ಕೋಡಿಯ ವರ್ಷ ಡಿಗ್ರಜೆ ದೂಳೆಬ್ಬಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ವರ್ಷ ಡಿಗ್ರಜೆ ಅದ್ಭುತವಾಗಿ ಅಭಿನಯಿಸಿ ಜಡ್ಜ್‌ಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ.
ಈ ವಾರ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಹೀಗಾಗಿ ಒಟ್ಟು 12 ಮಹಾನಟಿಯರು ತಮ್ಮ ತಮ್ಮ ಕುಟುಂಬಸ್ಥರು, ಸ್ನೇಹಿತರು, ಬಂಧು ಮಿತ್ರರ ಜೊತೆಗೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಾರವಂತೂ ಮಹಾನಟಿ ವೇದಿಕೆ ತುಂಬಿ ತುಳುಕುತ್ತಿತ್ತು, ಅದೆಷ್ಟೋ ಕಷ್ಟದಿಂದ ಮೇಲೆ ಬಂದ ಕುಟುಂಬ, ಪತಿ ಇಲ್ಲದೇ ಮಕ್ಕಳನ್ನು ನೋಡಿಕೊಂಡು ಈ ಹಂತಕ್ಕೆ ತಾಯಂದಿರು ಕರೆದುಕೊಂಡು ಬಂದಿದ್ದಾರೆ.
View this post on Instagram
ಇನ್ನೂ, ಈ ಫ್ಯಾಮಿಲಿ ರೌಂಡ್ನಲ್ಲಿ ವರ್ಷ ಡಿಗ್ರಜೆ ಅವರ ಮುದ್ದಾದ ಕುಟುಂಬ ಪರ್ಫಾರ್ಮೆನ್ಸ್ ನೀಡಿದೆ. ವೇದಿಕೆ ಮೇಲೆ ಕಡುಕಷ್ಟದಿಂದ ಮಹಾನಟಿ ವೇದಿಕೆಗೆ ಬಂದ ಜರ್ನಿಗೆ ದೃಶ್ಯರೂಪ ಕೊಟ್ಟಿದ್ದಾರೆ ವರ್ಷ. ತಾನು ಮಹಾನಟಿ ವೇದಿಕೆ ಬರಬೇಕಾದರೇ ಏನೆಲ್ಲಾ ಕಷ್ಟವನ್ನು ಅನುಭವಿಸಿದ್ದೆ ಅಂತ ಪರ್ಫಾರ್ಮೆನ್ಸ್ ಮೂಲಕ ತೋರಿಸಿದ್ದಾರೆ. ವಿಶೇಷ ಎಂದರೆ, ತನ್ನ ತಾಯಿಗೆ ಚಿಕ್ಕ ಮಯಸ್ಸಿದ್ದಾಗಲೇ ಮದುವೆ ಆಗಿತ್ತು, ಈಗ ನಾನು ಅವರಿಗೆ ಏನೂ ಕೊಡೋದಕ್ಕೆ ಆಗೋದಿಲ್ಲ. ಹೀಗಾಗಿ ಈ ವೇದಿಕೆ ಮೇಲೆ ಅಮ್ಮ, ಅಪ್ಪನ ಮದುವೆ ಮಾಡಿಸಬೇಕು ಅಂತ ಅಂದುಕೊಂಡಿದ್ದೇನೆ. ಅದಕ್ಕಾಗಿ ತಾಳಿ ಕೂಡ ತಂದಿದ್ದೇನೆ ಎಂದು ವೇದಿಕೆ ಮೇಲೆ ಮತ್ತೆ ಮದುವೆ ಮಾಡಿಸಿ ಖುಷಿ ಪಟ್ಟಿದ್ದಾರೆ.
ಈ ದೃಶ್ಯ ಕಂಡ ಜಡ್ಜ್, ಈ ಸಂಚಿಕೆ ನೋಡಿದ ವೀಕ್ಷಕರ ಕಣ್ಣುಗಳಲ್ಲಿ ನೀರು ತರಿಸುವಂತಿತ್ತು. ಆಗ ವರ್ಷ ಅವರ ಕಣ್ಣಲ್ಲಿ ಕಂಡಿದ್ದು, ಆ ಭರವಸೆ. ಸಾಧನೆ ಮಾಡಿದ್ದೇನೆ ಎನ್ನುವಷ್ಟು ಖುಷಿ ತುಂಬಿ ತುಳುಕುತ್ತಿತ್ತು. ಮುಂದಿನ ದಿನಗಳಲ್ಲಿ ವರ್ಷ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಅನ್ನೋದೆ ನೋಡುಗರ ಆಸೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ