/newsfirstlive-kannada/media/post_attachments/wp-content/uploads/2024/12/Varthur-Prakash-Aide-1.jpg)
ಬೆಂಗಳೂರು: ವರ್ತೂರ್ ಪ್ರಕಾಶ್ ಹೆಸರಲ್ಲಿ ಜ್ಯುವೆಲರಿ ಶಾಪ್​ಗೆ ವಂಚಿಸಿದ ಕೇಸ್​ನಲ್ಲಿ ಆರೋಪಿ ಶ್ವೇತಾ ಗೌಡ ಬಂಧನ ಆಗಿದೆ. ಇದೀಗ ಬಂಧನದ ಭೀತಿಯಲ್ಲಿರುವ ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆಗೆ ಬರುವಂತೆ ಪುಲಿಕೇಶಿನಗರ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದರು. ಇಂದು ಬೆಳಗ್ಗೆ ಪೊಲೀಸ್​ ವಿಚಾರಣೆಗೆ ಹಾಜರಾಗಿದ್ದಾರೆ. ಮತ್ತೊಂದು ಕಡೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿರಿಯ ಪುತ್ರ ನಿತಿನ್​ಗೂ ಪೊಲೀಸ್ ಅಧಿಕಾರಿಗಳು​ ನೋಟಿಸ್​ ಜಾರಿ ಮಾಡಿದ್ದಾರೆ.
ಬಂಧಿತ ಆರೋಪಿತೆ ಶ್ವೇತಗೌಡ ನೀಡಿರುವ ಹೇಳಿಕೆ ಆಧರಿಸಿ ನೋಟಿಸ್ ನೀಡಲಾಗಿದೆ. ಶ್ವೇತಾ ಕೇವಲ ವರ್ತೂರ್ ಪ್ರಕಾಶ್​ ಮಾತ್ರವಲ್ಲದೇ ಕಿರಿಯ ಪುತ್ರ ನಿತಿನ್ ಜೊತೆಯೂ ಸತತ ಸಂಪರ್ಕದಲ್ಲಿದ್ದಾಳೆ. ಹಾಗಾಗಿ ಪ್ರಕರಣದಲ್ಲಿ ನಿತಿನ್ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ