/newsfirstlive-kannada/media/post_attachments/wp-content/uploads/2024/12/VARTHURU-PRAKASH.jpg)
ಬೆಂಗಳೂರು: ಚಿನ್ನದ ವ್ಯಾಪಾರಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಫೇಸ್‌ಬುಕ್ ಗೆಳತಿ ಶ್ವೇತಾಗೌಡ ಎಂಬುವರು ಅರೆಸ್ಟ್ ಆಗಿದ್ದಾರೆ. ಇದು ವರ್ತೂರು ಪ್ರಕಾಶ್ಗೆ ತಲೆನೋವು ತಂದಿಟ್ಟಿದೆ. ವರ್ತೂರು ಜೊತೆ ನಂಟಿರುವ ಬಗ್ಗೆ ಶ್ವೇತಾಗೌಡ ಬಾಯ್ಬಿಟ್ಟಿದ್ದು ಇದರಿಂದ ಮಾಜಿ ಸಚಿವರಿಗೆ ಸಂಕಷ್ಟ ತಂದಿವೆ. ಇವತ್ತು ವಿಚಾರಣೆ ಎದುರಿಸಿದ ವರ್ತೂರು ಪ್ರಕಾಶ್ ನಾನವನಲ್ಲ ಎಂದಿದ್ದಾರೆ. ಶ್ವೇತಾಗೌಡ ವಿಚಾರಣೆ ವೇಳೆ ಮತ್ತಷ್ಟು ರಸಭರಿತ ಸಂಗತಿಗಳು ಬಯಲಾಗಿವೆ.
ನನಗೂ, ಆಕೆಗೂ ಸಂಬಂಧವೇ ಇಲ್ಲ ಎಂದ ಮಾಜಿ ಮಿನಿಸ್ಟರ್
ಖರೀದಿ ನೆಪದಲ್ಲಿ 2 ಕೋಟಿ ಮೌಲ್ಯದ ಚಿನ್ನ ವಂಚಿಸಿ ಲಾಕ್ ಆಗಿರುವ ಮಾಯಾ ಸುಂದರಿ ಶ್ವೇತಾಗೌಡ ವಿಚಾರಣೆ ವೇಳೆ ಕದ್ದ ಚಿನ್ನದಲ್ಲಿ ವರ್ತೂರು ಪ್ರಕಾಶ್ಗೂ ಷೇರು ಕೊಟ್ಟಿದ್ದೀನಿ ಎಂದಿದ್ದಾರೆ. ಇದೇ ಆಧಾರದ ಮೇಲೆ ಇಂದು ವರ್ತೂರು ಪ್ರಕಾಶ್ಗೆ ಪುಲಕೇಶಿನಗರ ಠಾಣೆ ಎಸಿಪಿ ಗೀತಾ ಅವರ ಮುಂದೆ 4 ಗಂಟೆ ವಿಚಾರಣೆಗೆ ಹಾಜರಾಗಿದ್ರು.
ವಿಚಾರಣೆ ವೇಳೆ ಆಗಿದ್ದೇನು?
ACP ಗೀತಾ: ಶ್ವೇತಾಗೌಡಳಿಗೂ, ನಿಮಗೂ ಏನು ಸಂಬಂಧ?
ವರ್ತೂರ್ ಪ್ರಕಾಶ್: ನನಗೂ, ಆಕೆಗೂ ಯಾವುದೇ ರೀತಿ ಸಂಬಂಧವಿಲ್ಲ
ACP ಗೀತಾ: ನಿಮಗೆ ಶ್ವೇತಾಗೌಡ ಸಂಪರ್ಕ ಆಗಿದ್ದು ಹೇಗೆ?
ವರ್ತೂರ್ ಪ್ರಕಾಶ್: ನನಗೂ, ಆಕೆಗೂ ಯಾವ ಸಂಪರ್ಕವೂ ಇರಲಿಲ್ಲ
ACP ಗೀತಾ: ಶ್ವೇತಾ ಬಳಿ ನೀವು ಹಣ, ಒಡವೆ ಯಾಕೆ ತಗೊಂಡಿದ್ರಿ?
ವರ್ತೂರ್ ಪ್ರಕಾಶ್: ನಾನು ತೆಗೆದುಕೊಂಡಿಲ್ಲ, ಆಕೆಯೇ ಗಿಫ್ಟ್ ಅಂತ ಕೊಟ್ಟಿದ್ದು
ACP ಗೀತಾ: ಆಕೆ ಬಳಿ ತೆಗೆದುಕೊಂಡ ಹಣ, ಒಡವೆ ಏನು ಮಾಡಿದ್ರಿ?
ವರ್ತೂರ್ ಪ್ರಕಾಶ್: ಎಲ್ಲವೂ ಇದೆ, ಎಲ್ಲವನ್ನೂ ಈಗ ವಾಪಸ್ ಕೊಡುತ್ತೇನೆ
ACP ಗೀತಾ: ಶ್ವೇತಾಗೌಡ ಬಳಿ ನೀವು ಏನೇನು ತಗೊಂಡಿದ್ದೀರಿ?
ವರ್ತೂರ್ ಪ್ರಕಾಶ್: 12.50 ಲಕ್ಷ ಹಣ, 3 ಬ್ರಾಸ್ಲೇಟ್, 1 ರಿಂಗ್ ವಾಪಸ್ ಕೊಡ್ತೀನಿ
ಪೊಲೀಸರ ವಿಚಾರಣೆ ಎದುರಿಸಿ ಹೊರಬಂದ ವರ್ತೂರು ಪ್ರಕಾಶ್ ಆಕೆ ನನ್ನ ಸ್ನೇಹಿತೆಯೇ ಅಲ್ಲ, ಐದಾರು ತಿಂಗಳ ಪರಿಚಯ ಅಷ್ಟೇ ಅಂದ್ರು. ನಾನು ರಾಜಕಾರಣಿ, ನನ್ನ ಹೆಸರೇಳಿಕೊಂಡು ವಂಚಿಸಿದ್ದಾರೆ ಅಂತ ದಾಳ ಉರುಳಿಸಿದ್ದಾರೆ.
ವರ್ತೂರು ಪ್ರಕಾಶ್ ಪುತ್ರ ನಿತಿನ್ಗೂ ಪೊಲೀಸ್ ನೋಟಿಸ್
ಪ್ರಕರಣದಲ್ಲಿ ವರ್ತೂರು ಪ್ರಕಾಶ್ ಪುತ್ರ ನಿತಿನ್ ಹೆಸರು ಕೂಡ ಸಂಬಂಧ ಬೆಸೆದಿದೆ. ಆರೋಪಿ ಶ್ವೇತಾಗೌಡ ನಿತಿನ್ ಹೆಸರು ಬಾಯ್ಬಿಟ್ಟಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಶಾಪಿಂಗ್ ಮಾಡಿದ್ದಾಳಂತೆ. ಹೀಗಾಗಿ ಪೊಲೀಸರು ವಿಚಾರಣೆಗೆ ಬರುವಂತೆ ನಿತಿನ್ಗೂ ನೋಟಿಸ್ ಕಳುಹಿಸಿದ್ದಾರೆ.
ಈ ಮಧ್ಯೆ ಚಿನ್ನದ ಅಂಗಡಿ ಮಾಲೀಕ ಸಂಜಯ್ ಭಾಪ್ನಾರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾನೂ ಕೂಡ ಚಿನ್ನದ ವ್ಯಾಪಾರ ಮಾಡ್ತಿದ್ದೀನಿ ಅಂತ 2 ಕೆಜಿ 945 ಗ್ರಾಂ ಚಿನ್ನಾಭರಣೆ ಪಡೆದಿದ್ದರು. ವರ್ತೂರು ಪ್ರಕಾಶ್ ಫೋನ್ ಮಾಡಿ ಆಕೆಯ ಪರಿಚಯ ಮಾಡಿದ್ದರು, ಇದರ ಕಾಲ್ ರೆಕಾರ್ಡ್ ಇದೆ ಎಂದಿದ್ದಾರೆ.
ಇನ್ನು ಶ್ವೇತಾಗೌಡ ತಾನು ಕದ್ದಿದ್ದ 2 ಚಿನ್ನಾಭರಣಗಳನ್ನು ಬಾಗಲಗುಂಟೆಯ ರಾಮ್ದೇವ್ ಜ್ಯೂವೆಲ್ಲರಿ ಮಾಲೀಕ ಚಿನ್ನಾರಾಮ್ಗೆ ಕೊಟ್ಟಿದ್ದು, ಆತ ಚಿನ್ನ ಕರಗಿಸಿ ಬಿಸ್ಕೆಟ್ ಮಾಡಿ ಮಾರಾಟ ಮಾಡ್ತಿದ್ದಂತೆ ವಿಚಾರವೂ ಬಯಲಾಗಿದೆ. ಒಟ್ಟಾರೆ, ಪ್ರಕರಣದಲ್ಲಿ ಇನ್ನೂ ಯಾಱರಿದ್ದಾರೆ ಅನ್ನೋದು ಮುಂದಿನ ತನಿಖೆಯಿಂದಷ್ಟೇ ಹೊರಬರಬೇಕಿದೆ.
ಇದನ್ನೂ ಓದಿ:ನಾಳೆಯಿಂದ ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೋರು ಮಳೆ; ಹಲವೆಡೆ ಹೈ ಅಲರ್ಟ್ ಘೋಷಣೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ