newsfirstkannada.com

BBK10: ಬಿಗ್‌ಬಾಸ್ ಫಿನಾಲೆಯಲ್ಲಿ ಕಿಚ್ಚನಿ​ಗೆ ಕೈ ಮುಗಿದ ವರ್ತೂರು ಸಂತೋಷ್; ಹೇಳಿದ್ದೇನು?

Share :

Published January 27, 2024 at 5:26pm

  ಬಿಗ್​ಬಾಸ್​ ಸೀಸನ್​ 10ರ ಟ್ರೋಫಿ ಯಾರ ಕೈಗೆ ಸೇರಲಿದೆ ಗೊತ್ತಾ?

  ಹುಲಿ ಉಗುರು ಪೆಂಡೆಂಟ್‌ ಧರಿಸಿದಕ್ಕೆ ಜೈಲಿಗೆ ಹೋಗಿದ್ದ ವರ್ತೂರು

  ತನ್ನ ಜೀವನದಲ್ಲಾದ ಕಹಿ ಘಟನೆ ನೆನೆದು ಕಣ್ಣೀರಿಟ್ಟ ಹಳ್ಳಿಕಾರ್​

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ಫೈನಲ್​ಗೆ ಕ್ಷಣಗಣನೆ ಶುರುವಾಗಿದೆ. ಇಂದು ಮತ್ತು ನಾಳೆ ಗ್ರ್ಯಾಂಡ್​ ಫಿನಾಲೆ ಇದ್ದು, ಭಾನುವಾರ ಎಪಿಸೋಡ್​ನಲ್ಲಿ​ ಬಿಗ್​ಬಾಸ್​ ಸೀಸನ್​ 10ರ ಟ್ರೋಫಿ ಯಾರ ಕೈಗೆ ಸೇರಲಿದೆ ಎಂದು ತಿಳಿಯಲಿದೆ. ಇಂದು ಮತ್ತು ನಾಳೆ ವೀಕ್ಷಕರು ಕಿಚ್ಚ ಸುದೀಪ್​ ಅವರನ್ನು ಕಾಣಬಹುದು.

ಸದ್ಯ ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ನೂತನ ಪ್ರೋಮೋವೊಂದು ರಿಲೀಸ್​ ಆಗಿದೆ. ರಿಲೀಸ್​ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಅವರು ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್​ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ವರ್ತೂರ್​ ಸಂತೋಷ್​ ಅವರ ಜೀವನದಲ್ಲಿ ಆದ ಕಹಿ ಘಟನೆ ಬಗ್ಗೆ ನೆನಪು ಮಾಡಿದ್ದಾರೆ. ಹೌದು, ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿತ್ತು. ವರ್ತೂರು ಸಂತೋಷ್ ಅವರ ಬಂಧನದ ಬಳಿಕ ಸಾಕಷ್ಟು ಬೇಸರಗೊಂಡಿದ್ದರು. ಬಳಿಕ ನನಗೆ ಬಿಗ್​ಬಾಸ್​ ಮನೆಯಲ್ಲಿ ಉಳಿಯಲು ಆಗುತ್ತಿಲ್ಲ. ದಯಮಾಡಿ ನನನ್ನು ಕಳುಹಿಸಿ ಎಂದು ಅತ್ತಿದ್ದರು. ಬಳಿಕ ಬಿಗ್​ ಮನೆಗೆ ವರ್ತೂರ್ ಅವರ ತಾಯಿಯನ್ನು ಕಳಿಸಿ ಅವರಿಗೆ ಸಮಾಧಾನ ಮಾಡಲಾಯಿತು.

ಇದೇ ವಿಚಾರವಾಗಿ ಬಿಗ್​​ಬಾಸ್​ ಮನೆಯಲ್ಲಿ ಉಳಿದುಕೊಂಡ ಸ್ಪರ್ಧಿಗಳ ಮುಂದೆ ಕಿಚ್ಚ ಸುದೀಪ್​ ಅವರು ಈ ರೀತಿ ಹೇಳಿದ್ದಾರೆ. ವರ್ತೂರು ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಆ ಸಮಯದಲ್ಲಿ ತುಂಬಾ ನೋವನ್ನು ಅನುಭವಿಸುತ್ತಾರೆ. ಆಗ ವರ್ತೂರು ಸಂತೋಷ್​ ಅವರು ‘‘ ನೀವು ಆಗ ಹೇಳಿದ್ದ ಮಾತು, ಬಿಗ್​ಬಾಸ್​​ ನನಗೆ ಕೊಟ್ಟ ಒಂದು ಅವಕಾಶ ಇಲ್ಲಿಗೆ ತಂದು ನಿಲ್ಲಿಸಿದೆ. ನಾನು ಸಾಯುವವರೆಗೂ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು ಅಣ್ಣ ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಬಿಗ್‌ಬಾಸ್ ಫಿನಾಲೆಯಲ್ಲಿ ಕಿಚ್ಚನಿ​ಗೆ ಕೈ ಮುಗಿದ ವರ್ತೂರು ಸಂತೋಷ್; ಹೇಳಿದ್ದೇನು?

https://newsfirstlive.com/wp-content/uploads/2024/01/bigg-boss-2024-01-27T170403.555.jpg

Load More