newsfirstkannada.com

BBK10: ಮುದ್ದಿನ ಮಗ ವರ್ತೂರು​ ಸಂತೋಷ್​ಗೆ ಚಿನ್ನದ ಸರ ಹಾಕಿದ ತಾಯಿ; ಅದರಲ್ಲಿ ಏನಿದೆ ಗೊತ್ತಾ? 

Share :

Published January 30, 2024 at 3:53pm

    ವರ್ತೂರು ಸಂತೋಷ್​​ರನ್ನು ಗ್ರ್ಯಾಂಡ್ ಆಗಿ ವೆಲ್​ಕಮ್ ಮಾಡಿದ ಫ್ಯಾನ್ಸ್​​​

    ಬಿಗ್​ಬಾಸ್​ ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್​​

    ವರ್ತೂರು ಸಂತೋಷ್​ ಅವರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಫ್ಯಾನ್ಸ್​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ 10 ಮುಕ್ತಾಯಗೊಂಡಿದೆ. ಬಿಗ್​ಬಾಸ್​ನಿಂದ ಆಚೆ ಬಂದ ಪ್ರತಿಯೊಬ್ಬ​ ಸ್ಪರ್ಧಿಗಳಿಗೂ ಅಭಿಮಾನಿಗಳಿಂದ ಉತ್ತಮ ಪ್ರಶಂಸೆ ದೊರೆಯುತ್ತದೆ. ಅದರಲ್ಲೂ ವರ್ತೂರು ಸಂತೋಷ್​ ಅವರಿಗೆ ಫ್ಯಾನ್ಸ್​​ಗಳು ಗ್ರ್ಯಾಂಡ್ ಆಗಿ ವೆಲ್​ಕಮ್​​ ಮಾಡಿದ್ದಾರೆ.

ಇದನ್ನು ಓದಿ: ಬಿಗ್​ ಬಾಸ್​ನಿಂದ ಬಂದಂತೆ ಗುಡ್​ ನ್ಯೂಸ್​​ ಕೊಡ್ತೀನಿ ಎಂದ ವಿನಯ್​! ನಟನ ಕೈಯಲ್ಲಿ ಪ್ರಾಜೆಕ್ಟ್ಸ್ ಎಷ್ಟಿವೆ ಗೊತ್ತಾ?

ಬಿಗ್​ಬಾಸ್​ ಮನೆಯಿಂದ 5ನೇ ಫೈನಲಿಸ್ಟ್​ ಆಗಿ ಹೊರಹೊಮ್ಮಿದ ಮಗನನ್ನು ತಾಯಿ ಮಂಜುಳಾ ಅವರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. 112 ದಿನವನ್ನು ಬಿಗ್​ಬಾಸ್​ ಮನೆಯಲ್ಲಿ ಕಳೆದು ಮರಳಿ ಮನೆಗೆ ಬಂದ ಮಗನನ್ನು ನೋಡಿ ಫುಲ್​ ಖುಷ್​ ಆಗಿದ್ದಾರೆ. ಜೊತೆಗೆ ಮಗನಿಗೆ ಚಿನ್ನದ ಸರ ಹಾಕಿದ್ದಾರೆ. ತಾಯಿ ಹಾಕಿದ ಚಿನ್ನದ ಸರದಲ್ಲಿ ಹಳ್ಳಿಕಾರ್​ ಎಂಬ ಪೆಂಡೆಂಟ್‌ ಹಾಕಲಾಗಿದೆ. ಇದರ ಜೊತೆಗೆ ಅಭಿಮಾನಿಗಳು ವರ್ತೂರು ಸಂತೋಷ್​ ಅವರನ್ನು ಭೇಟಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಬಿಗ್​ಬಾಸ್​ ಮನೆಗೆ ವರ್ತೂರು ಸಂತೋಷ್​ ಅವರು ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದರು. ದಿನ ಕಳೆದಂತೆ ಬಿಗ್​​ ಮನೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಬಳಿಕ ಹುಲಿ ಉಗುರಿನ ಪೆಂಡೆಂಟ್ ಧರಿಸಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಅದಾದ ಬಳಿಕ ವರ್ತೂರು ಸಂತೋಷ್​ ಅವರ ಆಟದ ವೈಖರಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿದ್ದವು. ಕೊನೆಗೂ ಬಿಗ್​ಬಾಸ್​ ಸೀಸನ್​ 10 ಟಾಪ್​​ 5ನೇ ಫೈನಲಿಸ್ಟ್​​ ಆಗಿ ಹೊರಹೊಮ್ಮಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BBK10: ಮುದ್ದಿನ ಮಗ ವರ್ತೂರು​ ಸಂತೋಷ್​ಗೆ ಚಿನ್ನದ ಸರ ಹಾಕಿದ ತಾಯಿ; ಅದರಲ್ಲಿ ಏನಿದೆ ಗೊತ್ತಾ? 

https://newsfirstlive.com/wp-content/uploads/2024/01/bigg-boss-2024-01-30T153238.181.jpg

Load More