newsfirstkannada.com

ಕೊನೆಗೂ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ವರ್ತೂರು ಸಂತೋಷ್​​; ಹಳ್ಳಿಕಾರ್ ಹೈದನ ಖದರ್ ಈಗ ಹೇಗಿದೆ?

Share :

30-10-2023

    ಯಾರು ಊಹಿಸದೆ ಇರೋ ರೀತಿಯಲ್ಲಿ ಮುಕ್ತಾಯಗೊಂಡಿದ್ದ ಮೂರನೇ ವಾರ!

    ಇದೇ ಅಕ್ಟೋಬರ್ 22ರಂದು ಬಂಧಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು

    ಆದಷ್ಟು ಬೇಗನೆ ಮುಂದಿನ ಎಪಿಸೋಡ್ಸ್​ಗಳಲ್ಲಿ ವರ್ತೂರು ಸಂತೋಷ್!

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್​ಬಾಸ್​. ಈ ಬಿಗ್​ಬಾಸ್​ ಸೀಸನ್ 10ರಲ್ಲಿ ಹಿಂದೆಂದೂ ನಡೆಯದ ಘಟನೆ ಈ ಸೀಸನ್​ನಲ್ಲಿ ನಡೆದಿದೆ. ಅದುವೇ ವರ್ತೂರು ಸಂತೋಷ್ ಅವರ ದಿಢೀರ್​ ಬಂಧನ. ಹೌದು ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ತಮ್ಮ ಕೊರಳಿನಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದಲ್ಲಿ ಅವರನ್ನು ಅರೆಸ್ಟ್​ ಮಾಡಲಾಗಿತ್ತು.

ಇದನ್ನು ಓದಿ: ಬಿಗ್​​ಬಾಸ್​​​ ಮನೆಗೆ ವರ್ತೂರು ಸಂತೋಷ್ ರೀ-ಎಂಟ್ರಿ ತಡವಾಗ್ತಿರೋದ್ಯಾಕೆ? ಅಸಲಿ ವಿಷ್ಯ ಇಲ್ಲಿದೆ!

ಬಿಗ್​ಬಾಸ್​ ಸೀಸನ್​ನ 10ನೇ ಮೂರನೇ ವಾರವಂತೂ ಯಾರು ಊಹಿಸದೆ ಇರೋ ರೀತಿಯಲ್ಲಿ ಮುಕ್ತಾಯಗೊಂಡಿತ್ತು. ಇತ್ತ ವರ್ತೂರು ಸಂತೊಷ್ ಬಿಗ್​ಬಾಸ್​ ಮನೆಯಿಂದ ಹೊರ ಬಂದು ಒಂದೇ ವಾರದಲ್ಲಿ ಜೈಲಿಗೂ ಹೋಗಿದ್ದರು. ಅಲ್ಲಿಂದ ನೇರವಾಗಿ ಬಿಗ್​ಬಾಸ್​ ಮನೆಗೆ ಹೋಗಿದ್ದರು. ಆದರೆ ಈಗ ವರ್ತೂರು ಸಂತೋಷ್ ಮತ್ತೆ ಬಿಗ್ ಮನೆಗೆ ರೀ-ಎಂಟ್ರಿ ಕೊಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಸಂತೋಷ್ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ಬಿಗ್​ಬಾಸ್​ ಸೆಟ್​ಗೆ ತೆರಳಿದ್ದಾರೆ ಅನ್ನೋ ಪಕ್ಕಾ ಮಾಹಿತಿಯೂ ಬಂದಿತ್ತು.

ಆದರೆ ಇದೀಗ ಬಿಗ್​ಬಾಸ್​ ಮನೆಯೊಳಗೆ ವರ್ತೂರು ಸಂತೋಷ್ ಅವರು ಮತ್ತೆ ಎಂಟ್ರಿ ಪಡೆದುಕೊಂಡಿದ್ದಾರೆ. ಹಳ್ಳಿ ಟಾಸ್ಕ್ ನಡೆಯುವಾಗಲೇ ಹಳ್ಳಿಕಾರ್ ಹೈದನ ಗ್ರ್ಯಾಂಡ್ ಎಂಟ್ರಿಯಾಗಿದೆ. ಹೌದು, ​ಹುಲಿ ಉಗುರು ಪೆಂಡೆಂಡ್​ ಧರಿಸಿದ ಆರೋಪ ಮೇಲೆ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ವರ್ತೂರು ಸಂತೋಷ್​ರನ್ನು ಅರಣ್ಯಾಧಿಕಾರಿಗಳು ಅರೆಸ್ಟ್​​ ಮಾಡಿದ್ದರು. ಬಳಿಕ ಸಂತೋಷ್​ಗೆ ಜಾಮೀನು ದೊರೆಯಿತು. ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದ್ದು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಬಿಗ್​ಬಾಸ್​ ಮನೆಯೊಳಗೆ ಹೋಗುವ ಮೊದಲು ಎಸಿಜೆಎಂ ಕೋರ್ಟ್​ನ ಒಂದಷ್ಟು ಷರತ್ತುಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸಿ ಹೋಗಬೇಕಿತ್ತು. ಇದರ ಜೊತೆಗೆ ವರ್ತೂರು ಸಂತೋಷ್​ಗೆ ಇನ್ನೂ ಜಾಮೀನಿನ ಆರ್ಡರ್ ಕಾಪಿ ಸಿಗದ ಕಾರಣಕ್ಕೆ ಬಿಗ್​ಬಾಸ್​ ಮನೆಗೆ ಅಧಿಕೃತವಾಗಿ ಎಂಟ್ರಿಯಾಗಿರಲಿಲ್ಲ. ಇದೀಗ ಸಂತೋಷ್ ಅವರನ್ನು ಬಿಗ್​ಬಾಸ್​ ಮನೆಗೆ ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ವರ್ತೂರು ಸಂತೋಷ್​​; ಹಳ್ಳಿಕಾರ್ ಹೈದನ ಖದರ್ ಈಗ ಹೇಗಿದೆ?

https://newsfirstlive.com/wp-content/uploads/2023/10/bigg-boss-4.jpg

Load More