Advertisment

ಅದೊಂದು ತಪ್ಪಿನಿಂದ ಚಿಕ್ಕ ವಯಸ್ಸಿಗೆ ದುರಂತ ಅಂತ್ಯ.. ತೇಜಸ್ ಸಾವಿನ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

author-image
Veena Gangani
Updated On
ಅದೊಂದು ತಪ್ಪಿನಿಂದ ಚಿಕ್ಕ ವಯಸ್ಸಿಗೆ ದುರಂತ ಅಂತ್ಯ.. ತೇಜಸ್ ಸಾವಿನ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ತೇಜಸ್ ನಿಧನಕ್ಕೆ ಕಿರುತೆರೆ ನಟ ವರುಣ್ ಆರಾಧ್ಯ ಸೇರಿ ಹಲವರು ಭಾವುಕ
  • ಯಾಕೆ ಇಷ್ಟು ಬೇಗ ನನ್ನ ಬಿಟ್ಟು ಹೋದೆ ದಯವಿಟ್ಟು ವಾಪಸ್ ಎಂದ ನಟ
  • ರೀಲ್ಸ್​ ಸ್ಟಾರ್​ ತೇಜಸ್ ಸಾವಿಗೆ ಕನ್ನಡ ಕಿರುತೆರೆಯ ಕಲಾವಿದರಿಂದ ಶ್ರದ್ಧಾಂಜಲಿ

ಸಾವು ಹೇಗೆಲ್ಲಾ ಬರುತ್ತೆ ಅಂತ ಯಾರು ಊಹೆ ಮಾಡೋಕೆ ಸಾಧ್ಯವಿಲ್ಲ. ಅದಕ್ಕೆ ನೈಜ ಸಾಕ್ಷಿ ಸೋಷಿಯಲ್​ ಮೀಡಿಯಾದಲ್ಲಿ ತನ್ನದೇ ಫ್ಯಾನ್​ ಫಾಲೋಯಿಂಗ್​ ಇಟ್ಕೊಂಡಿದ್ದ ತೇಜಸ್​. ಬೃಂದಾವನ ಸೀರಿಯಲ್‌ ನಟ ವರುಣ್ ಆರಾಧ್ಯ ಕುಚಿಕು ಬಾರದ ಊರಿಗೆ ತೆಳಿದ್ದು, ಕಿರುತೆರೆ ನಟರಿಗೆ ಬರ ಸಿಡಿಲು ಬಡಿದಿದೆ.

Advertisment

publive-image

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ಹೆಲ್ಮೆಟ್‌ ಧರಿಸದ ತೇಜಸ್‌! 

ಈತ ಬೃಂದಾವನ ಸೀರಿಯಲ್‌ ನಟ ವರುಣ್ ಆರಾಧ್ಯ ಅವರ ಕುಚಿಕು ಗೆಳೆಯ ತೇಜಸ್. ಇನ್ನು, 23 ವರ್ಷ. ಇನ್‌ಫ್ಲೂಯೆನ್ಸರ್‌ ಆಗಿದ್ದ. ದೊಡ್ಡಬಳ್ಳಾಪುರಕ್ಕೆ ಹೋಗಿ ವಾಪಸ್ಸು ಬೆಂಗಳೂರಿಗೆ ಬರುತಿದ್ದ ವೇಳೆ ವಿಧಿ ಇವನ ಬದುಕಲ್ಲಿ ಆಟವಾಡಿ ಬಿಟ್ಟಿದೆ. 19 ವರ್ಷದ ಆಕಾಶ್​ ಹಾಗೂ ತೇಜಸ್​ ರಾಯಲ್ ಎನ್ ಫೀಲ್ಡ್ ಬೈಕ್​ನಲ್ಲಿ ಬರ್ತಿದ್ರು. ಈ ವೇಳೆ ಮಾವಳ್ಳಿಪುರ ಕ್ರಾಸ್ ಬಳಿ ಬೀದಿ ದೀಪ ಕಂಬಕ್ಕೆ ಡಿಕ್ಕಿಯಾಗಿದ್ರಿಂದ ತೇಜಸ್​ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಮಧ್ಯರಾತ್ರಿ ಸುಮಾರು 12:30 ವೇಳೆಗೆ ಭೀಕರ ಅಪಘಾತ ಸಂಭವಿಸಿದ್ದು, ಈ ವೇಳೆ ತೇಜಸ್‌ ಹೆಲ್ಮೆಟ್‌ ಧರಿಸಿರಲಿಲ್ಲ.

publive-image

ಇದನ್ನೂ ಓದಿ: ‘ಅತ್ತಿಗೆ ನಿಮ್ಮ ಜೊತೆ ನಾವಿದ್ದೇವೆ’; ದರ್ಶನ್​ ಪತ್ನಿ ವಿಜಯಲಕ್ಷ್ಮಿಗೆ ಧೈರ್ಯ ತುಂಬಿದ ಅಭಿಮಾನಿಗಳು

Advertisment

ತೇಜಸ್ ಸಾವಿಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಕಲಾವಿದರು ಕಂಬನಿ ಮಿಡಿದಿದ್ದಾರೆ. ಇತ್ತ ಬಹುಕಾಲದ ಗೆಳೆಯನನ್ನ ಕಳೆದುಕೊಂಡ ವರುಣ್​. ಸಾಧ್ಯವಾದ್ರೆ ವಾಪಸ್​ ಬಾ ಗೆಳೆಯ. ನಿನ್ನ ಗೆಳೆತನಕ್ಕೆ ನಾನೆಂದು ಋಣಿ ಅಂತ ಪೋಸ್ಟ್​ ಹಾಕಿದ್ದಲ್ಲದೆ, ದಯವಿಟ್ಟು ಎಲ್ಲರೂ ಹೆಲ್ಮೆಟ್‌ ಧರಿಸಿ ಅಂತ ಮನವಿ ಮಾಡಿದ್ದಾರೆ. ತೇಜಸ್​ ಜೊತೆಗಿದ್ದ ಆಕಾಶ್​ ಸ್ಥಿತಿಯೂ ಗಂಭೀರವಾಗಿದೆ.

ತೇಜಸ್ ಸಾವಿಗೂ ಮುನ್ನ ಒಂದು ರೀಲ್ಸ್​ ಮಾಡಿದ್ದ. ಆ ರೀಲ್ಸ್​ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಸಾವಿಗೂ ಮುನ್ನ ತೇಜಸ್ ಶೇರ್ ಮಾಡಿರೋ ರೀಲ್ಸ್​ ಅನ್ನು ಗೆಳೆಯರಿಗೆ ಟ್ಯಾಗ್​​ ಮಾಡಿದ್ದ. ತೇಜಸ್ ಶೇರ್ ಮಾಡಿಕೊಂಡ ರೀಲ್ಸ್​ನಲ್ಲಿ ಅವರ ಶಾಲೆಯನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಆ ವಿಡಿಯೋದಲ್ಲಿ ಸ್ನೇಹಿತರನ್ನು ಮಿಸ್​ ಮಾಡಿಕೊಳ್ಳೋ ಭಯ ಅಂತ ಹೇಳಿದ್ದಾರೆ. ಅದು ಕೂಡ ಅವರ ಸ್ವಂತ ಧ್ವನಿಯಲ್ಲಿ ಈ ರೀಲ್ಸ್‌​​ ಅನ್ನು ಮಾಡಿದ್ದಾರೆ.

publive-image

ಇದೇ ತೇಜಸ್​​ ಸಾವಿಗೂ ಮುನ್ನ ಮಾಡಿರೋ ರೀಲ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು, ಜೊತೆಗಿರುವ ಜೀವ ಎಂದೆಂದಿಗೂ ಜೀವಂತ, ತುಂಬಾ ಬೇಜಾರ್ ಆಯಿತು. ಈ ವಿಷಯ ಕೇಳಿ ನಿನ್ನೆ ಇದ್ದೋರು ಇವತ್ತಿಲ್ಲ ಅಂದ್ರೆ ಇಷ್ಟೇ ಜೀವನ, ನಿಮ್ಮ ಕೊನೆ ಮಾತು ಕೂಡ ಫ್ರೆಂಡ್‌ಶಿಪ್‌ ಬಗ್ಗೆ ಹೇಳಿ ಲಾಸ್ಟ್ ಮಾಡಿ ಬಿಟ್ಟರಿ ಎಂದು ಭಾವುಕರಾಗಿ ಕಾಮೆಂಟ್​ ಮಾಡಿದ್ದಾರೆ.

Advertisment

ಇದನ್ನೂ ಓದಿ: BREAKING: ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಅಟ್ಟಿಕಾ ಬಾಬು ಬಂಧನ; ಕಾರಣವೇನು? 

ತೇಜಸ್ ಎಲ್ಲಿಗೆ ಹೋದರೂ ಫ್ರೆಂಡ್ಸ್​ಗಳ ಜೊತೆಗೆ ಹೋಗುತ್ತಿದ್ದ. ತೇಜಸ್ ಜೀವಕ್ಕಿಂತ ಜಾಸ್ತಿ ಸ್ನೇಹಿತರನ್ನು ಹಚ್ಚಿಕೊಂಡಿದ್ದ. ತೇಜಸ್​ನನ್ನು ಅಷ್ಟೇ ಹಚ್ಚಿಕೊಂಡಿದ್ದರು ಅವರ ಗೆಳೆಯರು. ವರುಣ್​​ ಆರಾಧ್ಯ, ವರ್ಷ ಕಾವೇರಿ, ಸೂರ್ಯ, ಕಾರ್ತಿಕ್​ ಗೌಡ ಹೀಗೆ ಸಾಕಷ್ಟು ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ. ಹೀಗೆ ಗೆಳೆಯರ ಜೊತೆಗೆ ಪಾರ್ಟಿ, ಟ್ರಿಪ್​ ಅಂತ ಊರು ಊರು ಸುತ್ತುತ್ತಿದ್ದ ತೇಜಸ್ ಇನ್ನೂ ನೆನೆಪು ಮಾತ್ರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment