newsfirstkannada.com

ನಿಶ್ಚಿತಾರ್ಥ ಮಾಡಿಕೊಂಡ ಸ್ಟಾರ್​ ನಟ ವರುಣ್ ತೇಜ್.. ಪ್ರೇಯಸಿ ಯಾರು ಗೊತ್ತಾ..?

Share :

Published June 10, 2023 at 5:28am

    ಪ್ರೀತಿಸಿದ ಹುಡುಗಿಗೆ ಉಂಗುರ ತೊಡಿಸಿದ ವರುಣ್ ತೇಜ್

    ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಸೇರಿ ಯಾರೆಲ್ಲ ಬಂದಿದ್ದರು..?

    ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ

ಟಾಲಿವುಡ್‌ನ ಹೀರೋ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತೆಲಂಗಾಣದ ಮಣಿಕೊಂಡದಲ್ಲಿರುವ ನಾಗಬಾಬು ಅವರ ನಿವಾಸದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಎಂಗೇಜ್ಮೆಂಟ್​​ಗೆ ಹಲವಾರು ಗಣ್ಯರು ಭಾಗಿಯಾಗಿದ್ದರು. ಚಿರಂಜೀವಿ ಮತ್ತು ಕುಟುಂಬ, ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರವಿಂದ್, ಅಲ್ಲು ಅರ್ಜುನ್, ಅಲ್ಲು ಬಾಬಿ, ಅಲ್ಲು ಸಿರಿಶ್, ವೈದ್ಯ ವೆಂಕಟೇಶ್ವರ ರಾವ್, ಸಾಯಿ ಧರಮ್ ತೇಜ್, ವೈಷ್ಣವ್ ತೇಜ್, ಸುಶ್ಮಿತಾ ಕೊನಿಡೇಲ, ಶ್ರೀಜಾ ಕೊನಿಡೇಲ ಸೇರಿದಂತೆ ಹಲವರು ತಮ್ಮ ಕುಟುಂಬದ ಜತೆ ಭಾಗಿಯಾಗಿದ್ದರು. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.

ನಿಶ್ಚಿತಾರ್ಥದ ಫೋಟೋಗಳನ್ನು ನಟ ವರುಣ್ ತೇಜ್ ತಮ್ಮ ಟ್ವೀಟರ್​ ಖಾತೆಯಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಜೊತೆಗೆ ಫೋಟೋಸ್​​ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನಿಶ್ಚಿತಾರ್ಥ ಮಾಡಿಕೊಂಡ ಸ್ಟಾರ್​ ನಟ ವರುಣ್ ತೇಜ್.. ಪ್ರೇಯಸಿ ಯಾರು ಗೊತ್ತಾ..?

https://newsfirstlive.com/wp-content/uploads/2023/06/varun-tej-1.jpg

Load More