/newsfirstlive-kannada/media/post_attachments/wp-content/uploads/2025/02/Dhananjay_Vasishta_Simha.jpg)
ಮೈಸೂರು: ಸ್ಯಾಂಡಲ್​ವುಡ್​ನ ನಟ ಡಾಲಿ ಧನಂಜಯ ಹಾಗೂ ಧನ್ಯತಾ ವಿವಾಹ ಸಮಾರಂಭ ಅದ್ಧೂರಿಯಾಗಿ ಮೈಸೂರಿನಲ್ಲಿ ನೆರವೇರಿದೆ. ನಿನ್ನೆ ಆರತಕ್ಷತೆ ಕಾರ್ಯಕ್ರಮ ನಡೆದರೆ ಇಂದು ಮಾಂಗಲ್ಯ ಧಾರಣೆ ಸಡಗರ, ಸಂಭ್ರಮದಿಂದ ನಡೆಯಿತು. ಗುರುಹಿರಿಯರು, ಕುಟುಂಬಸ್ಥರ ಸಮ್ಮುಖದಲ್ಲಿ ಧನ್ಯತಾ ಅವರ ಜೊತೆ ಧನಂಜಯ ಸಪ್ತಪದಿ ತುಳಿದಿದ್ದಾರೆ. ಸ್ನೇಹಿತನ ಮದುವೆಗೆ ಆಗಮಿಸಿದ ವಸಿಷ್ಠ ಸಿಂಹ ಗಿಫ್ಟ್​ ನೀಡಿದ್ದಾರೆ.
ತುಂಬಿದ ಮದುವೆಯಲ್ಲೇ ಅಭಿಮಾನಿಗಳಿಗೆ ಥ್ಯಾಂಕ್ಸ್​ ಕೊಡುತ್ತಾ.. ಕೈ ಮುಗಿಯುತ್ತಾ, ನಮಸ್ಕಾರ ಮಾಡುತ್ತಾ ಡಾಲಿ ಧನಂಜಯ ಹಾಗೂ ಧನ್ಯತಾ ಇರುವಲ್ಲಿಗೆ ವಸಿಷ್ಠ ಸಿಂಹ ಆಗಮಿಸಿದರು. ಬಂದವರೇ ಇಬ್ಬರಿಗೂ ಮದುವೆಯ ವಿಶ್ ಮಾಡಿದರು. ಇದಾದ ಮೇಲೆ ಸ್ನೇಹಿತನಿಗಾಗಿ ತಂದಿದ್ದ ಚಿನ್ನದ ಸರವನ್ನು ಬಾಕ್ಸ್​ನಿಂದ ತೆಗೆದು ಧನಂಜಯನ ಕೊರಳಿಗೆ ವಸಿಷ್ಠ ಸಿಂಹ ಹಾಕಿ ಇಬ್ಬರಿಗೂ ವಿಶ್ ಮಾಡಿದರು.
ಇದನ್ನೂ ಓದಿ: ಫುಲ್ ಹ್ಯಾಪಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನ್ಯತಾ- ಡಾಲಿ ಧನಂಜಯ
/newsfirstlive-kannada/media/post_attachments/wp-content/uploads/2025/02/Dhananjay_Vasishta_Simha_1.jpg)
ಡಾಲಿ ಧನಂಜಯ ಹಾಗೂ ವಸಿಷ್ಠ ಸಿಂಹ ಎಂದರೆ ಸ್ಯಾಂಡಲ್​ವುಡ್​ನಲ್ಲಿ ಒಂದು ಅಭಿಮಾನಿ ಬಳಗವೇ ಇದೆ. ಸೂರಿ ನಿರ್ದೇಶನದ ಶಿವರಾಜ್​ಕುಮಾರ್ ಅಭಿನಯದ ಟಗರು ಸಿನಿಮಾದ ಮೂಲಕ ಈ ಜೋಡಿ ಸಖತ್ ಫೇಮಸ್ ಆಗಿದ್ದರು. ಯಾವುದೇ ಕಾರ್ಯಕ್ರಮದಲ್ಲಿ ಈ ಇಬ್ಬರು ಕಾಣಿಸಿದ್ರೆ ಡಾಲಿ, ಚಿಟ್ಟೆ ಎಂದೇ ಜನ ಗುರುತಿಸುತ್ತಿದ್ದರು. ಆ ಮಟ್ಟಿಗೆ ಇಬ್ಬರು ಟಗರು ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡಿದ್ದರು. ಒಂದು ಸಮಯದಲ್ಲಿ ಇಬ್ಬರು ಮೋಸ್ಟ್​ ಬ್ಯಾಚುಲರ್ಸ್ ಆಗಿದ್ದರು.
ಆದರೆ ಬ್ಯಾಚುಲರ್ಸ್ ಲೈಫ್​ಗೆ ಮೊದಲು ವಸಿಷ್ಠ ಸಿಂಹ ಗುಡ್​ಬೈ ಹೇಳಿದ್ರೆ, ಇದೀಗ ಡಾಲಿ ಧನಂಜಯ ಅವರು ಗುಡ್​ಬೈ ಹೇಳಿದ್ದಾರೆ. ಮೈಸೂರಿನ ವಸ್ತು ಸಂಗ್ರಹಾಲಯದಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಧನ್ಯತಾ ಜೊತೆ ಧನಂಜಯ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವಸಿಷ್ಠ ಸಿಂಹ ಹಾದಿಯಲ್ಲೇ ಡಾಲಿ ಕೂಡ ಸಂಸಾರವನ್ನು ಹೆಗಲಿಗೆ ಹಾಕಿಕೊಂಡಿದ್ದಾರೆ.
ವಸಿಷ್ಠ ಸಿಂಹ ಅವರು ಹರಿಪ್ರಿಯಾ ಅವರನ್ನು ಪ್ರೀತಿ ಮಾಡಿ ಮದುವೆ ಆಗಬೇಕಾದರೆ, ಯಾರಾದರೂ ನಿಮ್ಮೆ ಗೆಳೆಯನ ಬಗ್ಗೆ ಹೇಳಿ ಎಂದರೆ ನನ್ನನ್ನು ಒಂಟಿ ಮಾಡಿಬಿಟ್ಟ ಎಂದು ಧನಂಜಯ ನಗುತ್ತ ಹೇಳುತ್ತಿದ್ದರು. ಇನ್ನು ವಸಿಷ್ಠ ಸಿಂಹ ಪ್ರೀತಿ ಬಗ್ಗೆ ಯಾರಾದರೂ ಹೇಳಿದರೆ ವಸಿಷ್ಠ ಸಿಂಹನ ಲವ್, ಮದುವೆ ವಿಚಾರ ನನಗೆ ಹೇಳಬೇಡಿ, ನೋವಾಗುತ್ತದೆ ಎಂದು ಧನಂಜಯ ಕೇಳಿಕೊಳ್ಳುತ್ತಿದ್ರು. ಆದರೆ ಈಗ ಧನಂಜಯ ಮದುವೆ ಆಗಿದ್ದು ಬ್ಯಾಚುಲರ್​ ಲೈಫ್​ಗೆ ಗುಡ್​ಬೈ ಹೇಳಿದ್ದಾರೆ. ಹೆಡ್​ಬುಶ್ ಮೂವಿಯಲ್ಲಿ ಅಭಿನಯಿಸಿದ್ದ ಈ ಜೋಡಿ​ ಜಯರಾಜ್ ಪಾತ್ರದಲ್ಲಿ ಧನಂಜಯ ಆ್ಯಕ್ಟ್ ಮಾಡಿದ್ರೆ, ಕೊತ್ವಾಲ್ ಪಾತ್ರದಲ್ಲಿ ವಸಿಷ್ಠ ಸಿಂಹ ನಟನೆ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us