ಖ್ಯಾತ ಕನ್ನಡ​ ನಿರ್ದೇಶಕನಿಗೆ ಮಸಿ ಬಳಿದು, ಹಲ್ಲೆ.. ವಾಟಾಳ್, ಸಾರಾ ಗೋವಿಂದು ಬೆಂಬಲಿಗರ ವಿರುದ್ಧ ಆರೋಪ

author-image
Bheemappa
Updated On
ಖ್ಯಾತ ಕನ್ನಡ​ ನಿರ್ದೇಶಕನಿಗೆ ಮಸಿ ಬಳಿದು, ಹಲ್ಲೆ.. ವಾಟಾಳ್, ಸಾರಾ ಗೋವಿಂದು ಬೆಂಬಲಿಗರ ವಿರುದ್ಧ ಆರೋಪ
Advertisment
  • ವಾಟಾಳ್ ನಾಗರಾಜ್, ಸಾರಾ ಗೋವಿಂದು ಬಗ್ಗೆ ನರಸಿಂಹರಾಜು ಹೇಳಿದ್ದೇನು?
  • ಈ ಬಗ್ಗೆ ಹೈ ಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲು
  • ಸಾ.ರಾ ಗೋವಿಂದು‌ ಬೆಂಬಲಿಗರಿಂದ ನಡು ರಸ್ತೆಯಲ್ಲೇ ಮಸಿ ಬಳಿದ ಆರೋಪ

ತಮ್ಮ ನಾಯಕರ ಬಗ್ಗೆ ಯಾರಾದರೂ ಮಾತಾಡಿದ್ರೆ, ಕುಟುಂಬಸ್ಥರು ಸುಮ್ಮನೇ ಇರುತ್ತಾರೇನೋ, ಅಭಿಮಾನಿಗಳು ಸುಮ್ನೆ ಇರಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಫಿಲ್ಮ್ ಚೇಂಬರ್​ ಮಾಜಿ ಅಧ್ಯಕ್ಷರ ಬಗ್ಗೆ ಮಾತನಾಡಿದ್ದ ನಿರ್ದೇಶಕನ ಮುಖಕ್ಕೆ ಬೆಂಬಲಿಗನೊಬ್ಬ ಮಸಿ ಬಳಿದಿದ್ದಾನೆ. ಈ ಕುರಿತ ಒಂದು ವರದಿ ಇಲ್ಲಿದೆ..

ಕಲಾವಿದರನ್ನ ಬೆಳೆಸೋದು ನಿರ್ಮಾಪಕ. ಕಲಾವಿದರ ಹಣೆಬರಹ ಬರೆಯೋದು ನಿರ್ದೇಶಕ. ಆದ್ರೆ ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕರ ಬದುಕು ಕಟ್ಟಿಕೊಡುವ ಇಂಥವರಿಗೆ ನಡು ರಸ್ತೆಯಲ್ಲಿ ಮಸಿ ಬಳಿಯುವ ಘಟನೆ ಫಿಲ್ಮ್ ಚೇಂಬರ್ ಆಫೀಸ್​ ಎದುರೇ ನಡೆದಿದೆ.

publive-image

ಸಾ.ರಾ ಗೋವಿಂದು‌ ಮತ್ತು ಬೆಂಬಲಿಗರ ವಿರುದ್ಧ ದೂರು

ನರಸಿಂಹರಾಜು ಇವರು ಕನ್ನಡ ಸಿನಿರಂಗದ ನಿರ್ಮಾಪಕ, ನಿರ್ದೇಶಕರು. ಇವರ ಮೇಲೆ ನಿನ್ನೆ ಫಿಲ್ಮ್ ಚೇಂಬರ್ ಬಳಿ ಹಲ್ಲೆ ಮಾಡಿ, ಅವರ ಮುಖಕ್ಕೆ ಮಸಿ ಬಳಿದು, ರಸ್ತೆಯಲ್ಲಿ ಶರ್ಟ್​ ಹಿಡಿದು ಎಳೆದಾಡಿದ್ದಾರೆ.

ಫಿಲ್ಮ್ ಚೇಂಬರ್ ಸಸ್ಪೆಂಡೆಡ್ ಮೆಂಬರ್ ನರಸಿಂಹರಾಜು, ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದು ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ನಿರುದ್ಯೋಗಿ ವಾಟಾಳ್ ನಾಗರಾಜ್ ಹಾಗು ಸಾ. ರಾ ಗೋವಿಂದು ಇವರಿಗೆಲ್ಲಾ ಬೇರೆ ಕೆಲಸ ಇಲ್ಲ. ಅವಿವೇಕಿ ವಾಟಾಳ್ ನಾಗರಾಜ್​. ಅವಿವೇಕಿ ಸಾ ರಾ ಗೋವಿಂದು ಹೋರಾಟ ಮಾಡಲ್ಲ, ಇವರು ಲಂಚಕೋರರು. ಇವರ ವ್ಯವಹಾರ ಇಂತದ್ದೇ ಎಂದು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರಂತೆ. ಹೀಗಾಗಿ ಸಾರಾ ಗೋವಿಂದು ಬೆಂಬಲಿಗರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಸಾರಾ ಗೋವಿಂದ ಮೇಲೆ ಡಿ.ಆರ್ ಬಳಿ ಪ್ರಕರಣಗಳು ಇವೆ. ಅಧ್ಯಕ್ಷ ಆಗಿದ್ದಾಗ ಹಣಕಾಸಿನ ಕುರಿತು, ಇವಾಗ ಕಲ್ಯಾಣ ನಿಧಿಯಲ್ಲಿ ಮೆಡ್ಲಿಂಗ್ ಮಾಡುವುದು ಇದಕ್ಕೆಲ್ಲಾ ಜಿಲ್ಲಾ ಕೋಪರೇಟಿವ್ ಸೊಸೈಟಿಯಲ್ಲಿ ಕಂಪೇಟ್ ಮಾಡಿದ್ದೇನೆ. ಅಲ್ಲಿ ತನಿಖೆ ನಡೆಯುತ್ತಿದೆ. ಇದಕ್ಕಾಗಿ ಫಿಲ್ಮ್ ಚೇಂಬರ್​ಗೆ ಬಂದಾಗ ಈ ತರ ಗಲಾಟೆ ಮಾಡುತ್ತಿರುತ್ತಾನೆ.

ನರಸಿಂಹರಾಜು, ನಿರ್ಮಾಪಕ, ನಿರ್ದೇಶಕ

ಘಟನೆ ಬಳಿಕ ನರಸಿಂಹರಾಜು ಹೈ ಗ್ರೌಂಡ್ಸ್‌ ಪೊಲೀಸ್ ಠಾಣೆಗೆ ತೆರಳಿ ದೂರು‌ ನೀಡಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹುಲು ಸಾರಾ ಗೋವಿಂದು ಹಾಗೂ ಫಿಲ್ಮ್ ಚೇಂಬರ್​ನ ಪಧಾದಿಕಾರಗಳು ಕೂಡ ಪ್ರತಿದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಗೃಹಜ್ಯೋತಿಗೆ ಅನುದಾನ ಮೀಸಲಿಟ್ಟ ಸಿಎಂ ಸಿದ್ದರಾಮಯ್ಯ.. ಎಷ್ಟು ಸಾವಿರ ಕೋಟಿ?

publive-image

ಈ ತರ ದೊಡ್ಡ ಗುಂಡಾಗಿರಿ ಮಾಡಿಕೊಂಡು ತನ್ನ ಸ್ವಂತ ಪಾಪ್ರರ್ಟಿ ತರ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಸಂಬಂಧಿಸಿದ ಕೆಲವು ಜನ ಇದ್ದಾರೆ. ಮತ್ತೆ ಮತ್ತೆ ಅಲ್ಲಿಗೆ ಅವರು ಸಿಂಡಿಕೇಟ್​ ಮಾಡಿಕೊಂಡು ಬರುತ್ತಿರುತ್ತಾರೆ.

ನರಸಿಂಹರಾಜು, ನಿರ್ಮಾಪಕ, ನಿರ್ದೇಶಕ

ನಾಲ್ಕು ಗೋಡೆಗಳ ಮಧ್ಯೆ ಕೂತು ಮಾತಾಡ್ಕೊಂಡು ಬಗೆ ಹರಿಸಿಕೊಳ್ಳಬೇಕಾದ ವಿಚಾರ ಈಗ ಬೀದಿಗೆ ಬಂದು.. ಸ್ಟೇಷನ್​ ಮೆಟ್ಟಿಲೇರೋ ರೀತಿಯಾಗಿದೆ. ಈ ವಿಚಾರದಲ್ಲಿ ಯಾರದ್ದು ತಪ್ಪು ಅನ್ನೋದನ್ನ ಪೊಲೀಸ್ ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment