Advertisment

ಕರ್ನಾಟಕ ಬಂದ್! ನಾಳೆ ಏನಿರುತ್ತೆ? ಏನಿರಲ್ಲ? ಕನ್ನಡ ಪರ ಸಂಘಟನೆ ಇಟ್ಟ 20 ಬೇಡಿಕೆಗಳು ಏನೇನು?

author-image
Gopal Kulkarni
Updated On
ಕರ್ನಾಟಕ ಬಂದ್! ನಾಳೆ ಏನಿರುತ್ತೆ? ಏನಿರಲ್ಲ? ಕನ್ನಡ ಪರ ಸಂಘಟನೆ ಇಟ್ಟ 20 ಬೇಡಿಕೆಗಳು ಏನೇನು?
Advertisment
  • ನಾಳೆ ಅಖಂಡ ಕರ್ನಾಟಕ ಬಂದ್​ಗೆ ಕರೆ ನೀಡಿರುವ ವಾಟಾಳ್ ನಾಗಾರಜ್
  • ಕನ್ನಡ ಪರ ಸಂಘಟನೆಯ ಬಂದ್​​ ಕರೆಗೆ ಯಾರೆಲ್ಲಾ ಬೆಂಬಲ ನೀಡಿದ್ದಾರೆ?
  • ನಾಳೆ ರಾಜ್ಯದಲ್ಲಿ ಯಾವೆಲ್ಲಾ ಸೇವೆ ಇರಲಿವೆ? ಯಾವುದು ಇರುವುದಿಲ್ಲ?

ನಾಳೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಅಖಂಡ ಕರ್ನಾಟಕ ಬಂದ್​ಗೆ ಕರೆ ನೀಡಿದ್ದಾರೆ. ಮಹಾರಾಷ್ಟ್ರೀಗರ ಕನ್ನಡ ವಿರೋಧಿ ನೀತಿ ಹಾಗೂ ಅವರಿಂದ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಅಖಂಡ ಕರ್ನಾಟಕ ಬಂದ್​ಗೆ ಕರೆ ಕೊಟ್ಟಿದ್ದಾರೆ. ಆದರೂ ಕೂಡ ಅನೇಕ ಬಗೆಹರೆಯದ ಗೊಂದಲಗಳು ಇನ್ನೂ ಇವೆ. ಹಾಗಿದ್ರೆ ವಾಟಾಳ್ ನಾಗರಾಜ್​​ ಅಖಂಡ್ ಬಂದ್ ಕರೆಗೆ ಯಾರೆಲ್ಲಾ ನೈತಿಕ ಬೆಂಬಲ ನೀಡಿತ್ತಿದ್ದಾರೆ. ಯಾರೆಲ್ಲಾ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಯಾರು ಬಂದ್​​ಗೆ ಬೆಂಬಲ ನೀಡುವುದರಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಜ್ಯದಲ್ಲಿ ಏನಿರುತ್ತೆ, ಏನಿರಲ್ಲ? ಕನ್ನಡಪರ ಸಂಘಟನೆಯ ಆ 20 ಬೇಡಿಕೆಗಳು ಏನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

Advertisment

ನೈತಿಕ ಬೆಂಬಲ ನೀಡುವವರು

  • ಮದ್ಯ ಮಾರಾಟಗಾರರ ಸಂಘ
  • ಕೆಲ ಮಾಲ್ ಅಸೋಸಿಯೇಷನ್
  • ಹೋಲ್ ಸೆಲ್ ಬಟ್ಟೆ ವ್ಯಾಪಾರಸ್ಥರು
  • ಹೋಟೆಲ್ ಅಸೋಸಿಯೇಷನ್
  • ಬೆಂಗಳೂರು ಸಂಚಾರಿ ಆಟೋ ಸೇನೆ
  • APMC ಮಾರುಕಟ್ಟೆಗಳ ಒಕ್ಕೂಟ
  • ಸರ್ವ ಸಂಘಟನೆಗಳ ಒಕ್ಕೂಟ
  • ಖಾಸಗಿ ಸಾರಿಗೆ ಒಕ್ಕೂಟ
  • ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿ ಸಂಘ
  • ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ
  • ಪೀಣ್ಯ ಕಾರ್ಮಿಕರ ಸಂಘ
  • ಬೀದಿ ಬದಿ ವ್ಯಾಪಾರಿಗಳ ಸಂಘಟನೆ
  • ಕರ್ನಾಟಕ ರಾಜ್ಯ ರೈತ ಸಂಘಟನೆ
  • ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್
  • ಖಾಸಗಿ ಶಾಲೆಗಳ ಒಕ್ಕೂಟ ಕೃಪಾ
  • ಖಾಸಗಿ ಶಾಲೆಗಳ ಒಕ್ಕೂಟ ರುಪ್ಸ
  • ಪೋಷಕರ ಸಮನ್ವಯ ಸಮಿತಿ
  • ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ
  • ಪೀಸ್ ಆಟೋ ಸಂಘಟನೆ
  • ಕರುನಾಡು ಕಾರ್ಮಿಕ ಸೇನೆ
  • BMTC-KSRTC ನೌಕರರ ಸಂಘ
  • ನಮ್ಮ ಚಾಲಕರ ಪರಿಷತ್
  • ಏರ್ಪೋರ್ಟ್ ಟ್ಯಾಕ್ಸಿ
  • ಗಾರ್ಮೆಂಟ್ಸ್ ಅಸೋಸಿಯೇಷನ್ ನ
  • ಲಾರಿ ಚಾಲಕರ ಸಂಘ

ಇದನ್ನೂ ಓದಿ:ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸಂಚಲನ.. ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ಸಂಪೂರ್ಣ ಯಾರೆಲ್ಲ ಬೆಂಬಲ ನೀಡುವವರು

  • ಓಲಾ- ಉಬರ್ ಚಾಲಕರ ಸಂಘ
  • ಶಿವರಾಮೇಗೌಡ ಬಣ
  • ಕರವೇ ಗಜಕೇಸರಿ ಸೇನೆ
  • ಡಾ.ರಾಜ್ ಕುಮಾರ್ ಅಭಿಮಾನಿ ಸಂಘ
  • ವೀರ ಕನ್ನಡಿಗರ ಸೇನೆ
  • ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು
  • ರೂಪೇಶ್ ರಾಜಣ್ಣ ಬಣ
  • ಬೆಂಗಳೂರು ಆಟೋ ಸೇನೆ
  • ಜಯಭಾರತ್ ಚಾಲಕರ ಸಂಘ
  • ಕರ್ನಾಟಕ ಜನಪರ ವೇದಿಕೆ
  • ಆದರ್ಶ ಆಟೋ ಯೂನಿಯನ್
  • ಗೂಡ್ಸ್ ಚಾಲಕರ ಸಂಘ
Advertisment

ಯಾವುದೇ ಬೆಂಬಲ ಇಲ್ಲ

  • ಕರವೇ ನಾರಾಯಣಗೌಡರ ಬಣ
  • ಪ್ರವೀಣ್ ಶೆಟ್ಟಿ ಬಣ

ಏನಿರುತ್ತೆ?

  • ಹಾಲು, ದಿನಪತ್ರಿಕೆ,ಮೆಡಿಕಲ್
  • ವೈದ್ಯಕೀಯ ಸೇವೆ ಎಂದಿನಂತೆ ಇರಲಿದೆ
  • ಮೆಟ್ರೋ ಸಂಚಾರ, BMTC,KSRTC,ರೈಲು
  • ಶಾಲಾ ವಾಹನದ ವ್ಯವಸ್ಥೆ,ಖಾಸಗಿ ಬಸ್
  • ಆ್ಯಂಬುಲೆನ್ಸ್ ,ಹೋಲ್ ಸೆಲ್ ಬಟ್ಟೆ ಅಂಗಡಿ
  • ತರಕಾರಿ,ಹೂ, ಹಣ್ಣುಗಳು, ಸೂಪರ್ ಮಾರ್ಕೆಟ್
  • ಹೋಟೆಲ್ ಗಳ ಎಂದಿನಂತೆ ಓಪನ್ ಇರಲಿದೆ
  • ಬಾರ್ ಗಳು ಓಪನ್,ಏರ್ ಪೋರ್ಟ್ ಟ್ಯಾಕ್ಸಿ ಸೇವೆ
  • 65% ಆಟೋಗಳ ಸೇವೆ ಬಂದ್ ದಿನ ಇರಲಿದೆ

ಇದನ್ನೂ ಓದಿ:ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್​ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?

ಏನಿರಲ್ಲ?

  • ಮಧ್ಯಾಹ್ನತನಕ ಥಿಯೇಟರ್ ಗಳು ಬಂದ್
  • ಓಲಾ-ಊಬರ್ ಸೇವೆಯಲ್ಲಿ ವ್ಯತ್ಯಯ
  • 35% ಆಟೋ ಸೇವೆಯಲ್ಲಿ ತುಸು ವ್ಯತ್ಯಯ
  • ಗೂಡ್ಸ್ ವಾಹನಗಳ ಸೇವೆಯಲ್ಲಿ ವ್ಯತ್ಯಯ
Advertisment

ಕನ್ನಡ ಪರ ಸಂಘಟನೆಯ ಬೇಡಿಕೆಗಳ ಪಟ್ಟಿ

1. ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು
2. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು
3. ಇಡೀ ರಾಜ್ಯದ ಗಡಿನಾಡುಗಳು ಬೆಳವಣಿಗೆಯಾಗಬೇಕು
4.ಬೆಳಗಾವಿ ಉಳಿಸಬೇಕು, ಎಂ.ಇ.ಎಸ್. ನಿಷೇಧ ಮಾಡಬೇಕು
5.ಶಿವಸೇನೆ ಹಾಗೂ ಎಂ.ಇ.ಎಸ್. ಪುಂಡರನ್ನು ಗಡೀಪಾರು ಮಾಡಬೇಕು
6.ಬೆಳಗಾವಿ ಜಿಲ್ಲೆಯ ಅಧಿಕಾರದಲ್ಲಿರುವ ಎಲ್ಲಾ ರಾಜಕಾರಣಿಗಳು ರಾಜೀನಾಮೆ ಕೊಡಬೇಕು
7.ಸಾಂಬಾಜಿ ಪ್ರತಿಮೆಯನ್ನು ತೆಗೆಯಬೇಕು
8.ಕನ್ನಡ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು
9.ಮಹದಾಯಿ-ಕಳಾಸ ಭಂಡೂರಿ ಕಾರ್ಯಗತವಾಗಬೇಕು
10.ಮೇಕೆದಾಟು ಯೋಜನೆ ಆಗಲೇಬೇಕು
11.ಕೊಪ್ಪಳ ಸುತ್ತ ಯಾವ ಕಾರ್ಖಾನೆಗಳು ಬೇಡವೇ ಬೇಡ
12.ಕರ್ನಾಟಕದಲ್ಲಿ ಪರಭಾಷಾ ದಬ್ಬಾಳಿಕೆ ನಿಲ್ಲಬೇಕು
13.ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಹಿಷ್ಕಾರ
14.ಖಾಸಗಿ ಶಿಕ್ಷಣ ಸಂಸ್ಥೆ ಹಿಂದಿ ಬೇಡವೇ ಬೇಡ
15.ಮಹಾರಾಷ್ಟ್ರದಲ್ಲಿ ಕನ್ನಡ ಮಹಾಮಹಿಮರ ಪ್ರತಿಮೆಗಳು ಸ್ಥಾಪನೆಯಾಗಬೇಕು
16.ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಆಯ-ವ್ಯಯದಲ್ಲಿ ಕರ್ನಾಟಕ ಕಡೆಗಣನೆ ಮಾಡಲಾಗಿದೆ
17.ಮಂಗಳೂರು-ಕಾರವಾರ ಬಂದರು ಅಭಿವೃದ್ಧಿ
18.ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ಕಂಪನಿಗಳು ಬಂದು ಬೈಕ್
ಆಟೋಗಳಿಗೆ, ಕಾರ್‌ಗಳಿಗೆ ಹೊರ ರಾಜ್ಯದ ಚಾಲಕರನ್ನು ಗುತ್ತಿಗೆ ಆಧಾರದಲ್ಲಿ ಕರೆತಂದಿರುವುದರಿಂದ ನಮ್ಮ ಚಾಲಕರಿಗೆ ಅನ್ಯಾಯವಾಗಿದೆ
19.ಮೆಟ್ರೋ ದರ ಏರಿಕೆ ವಿರೋಧ
20. ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment