Advertisment

ಕಾಂತಾರ ನಟ ರಿಷಬ್ ಶೆಟ್ಟಿ ಮೇಲೆ ವಾಟಾಳ್ ನಾಗರಾಜ್ ಫುಲ್ ಗರಂ; ಕಾರಣವೇನು?

author-image
admin
Updated On
ಕಾಂತಾರ ನಟ ರಿಷಬ್ ಶೆಟ್ಟಿ ಮೇಲೆ ವಾಟಾಳ್ ನಾಗರಾಜ್ ಫುಲ್ ಗರಂ; ಕಾರಣವೇನು?
Advertisment
  • ಬೆಳಗಾವಿಯಲ್ಲಿ ಮರಾಠಿಗರ ದಬ್ಭಾಳಿಕೆ, MES ಪುಂಡಾಟಿಕೆ
  • ಸುದ್ದಿಗೋಷ್ಠಿಯಲ್ಲಿ ರಿಷಬ್ ಶೆಟ್ಟಿ ಮೇಲೆ ವಾಟಾಳ್ ತೀವ್ರ ಬೇಸರ
  • ಯಾವುದೇ ಅನುಮತಿಯಿಲ್ಲದೇ ಸಂಭಾಜಿ ಪಾಟೀಲ್ ಪ್ರತಿಮೆಗಳು

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಮರಾಠಿಗರ ದಬ್ಭಾಳಿಕೆ, MES ಪುಂಡಾಟಿಕೆ ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ಕನ್ನಡ ನಾಡು, ನುಡಿ ಮೇಲಿನ ದೌರ್ಜನ್ಯ ಖಂಡಿಸಿ ಕನ್ನಡ ಪರ ಸಂಘಟನೆಗಳು ಮಾರ್ಚ್‌ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇಂದು ವಿವಿಧ ಕನ್ನಡ ಸಂಘಟನೆಗಳ ಜೊತೆ ಸಭೆ ನಡೆಸಿದ ವಾಟಾಳ್ ನಾಗರಾಜ್ ಅವರು ಸುದ್ದಿಗೋಷ್ಠಿಯಲ್ಲಿ ನಟ ರಿಷಬ್ ಶೆಟ್ಟಿ ಮೇಲೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Advertisment

ಇದನ್ನೂ ಓದಿ: ಕರ್ನಾಟಕ ಬಂದ್‌ನಿಂದ SSLC ವಿದ್ಯಾರ್ಥಿಗಳಿಗೆ ಆತಂಕ; ಮಾರ್ಚ್‌ 3ರಿಂದಲೇ ಹೋರಾಟ! 

ವಾಟಾಳ್ ನಾಗರಾಜ್ ಹೇಳಿದ್ದೇನು?
ರಾಜ್ಯದಲ್ಲಿ ನಾವು ಬಹಳ ಗಂಭೀರವಾದ ಪರಿಸ್ಥಿತಿಯಲ್ಲಿ ಇದ್ದೇವೆ. ಇದು ನಮ್ಮ ರಾಜ್ಯದ ಗೌರವದ ಪ್ರಶ್ನೆ. ಬೆಳಗಾವಿಯಲ್ಲಿ ನಡೆದಿರೋ ಘಟನೆ ಇಡೀ ರಾಜ್ಯದ ಜನ ತಲೆತಗ್ಗಿಸುವಂತಿದೆ. ಸಾರಿಗೆ ಬಸ್‌ ಕಂಡಕ್ಟರ್‌ನ ಬೀದಿಯಲ್ಲಿ ಹೊಡೆಯುವ ಮಟ್ಟಕ್ಕೆ ಬೆಳಗಾವಿಯಲ್ಲಿ ಮರಾಠಿಗರು ಬಂದಿದ್ದಾರೆ. ಬೆಳಗಾವಿ ಕರ್ನಾಟಕದಲ್ಲಿ ಇದೆಯಾ ಅಥವಾ ಮಹಾರಾಷ್ಟ್ರದಲ್ಲಿ ಇದೆಯಾ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದ್ದಾರೆ.

publive-image

ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆ ಬಿಟ್ರೆ ಯಾವ ರಾಜಕಾರಣಿಗಳು ಕನ್ನಡಿಗರ ಪರ ಇಲ್ಲ. ಎಲ್ಲಾ ರಾಜಕಾರಣಿಗಳು ಮರಾಠಿಗರ ಏಜೆಂಟ್ ಆಗಿದ್ದು, ಅವರಿಗೆ ಅವರ ವೋಟ್ ಬೇಕಾಗಿದೆ. ಮರಾಠಿಗರನ್ನು ಅವರು ಯಾವುದೇ ಕಾರಣಕ್ಕೂ ಕೈ ಬಿಡೋದಿಲ್ಲ. ಸೊಲ್ಲಾಪುರ ಭಾಗದಲ್ಲಿ ನೂರಕ್ಕೆ ನೂರು ಕನ್ನಡಿಗರಿದ್ದಾರೆ. ಆದರೆ ಅಲ್ಲಿ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ, ಬಸವಣ್ಣ ಸೇರಿ ಯಾರ ಪ್ರತಿಮೆಯೂ ಇಲ್ಲ. ಸರ್ಕಾರದ ಯಾವುದೇ ಅನುಮತಿಯಿಲ್ಲದೇ ಸಂಭಾಜಿ ಪಾಟೀಲ್ ಪ್ರತಿಮೆಯನ್ನು ಹಾಕಿದ್ದಾರೆ.

Advertisment

ಇತ್ತೀಚೆಗೆ ಶಿವಾಜಿ ಹೆಸರಿನಲ್ಲೂ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿ ಅವರು ಕನ್ನಡಿಗರಿಗೆ ಕೆಟ್ಟ ಸಂದೇಶ ಕೊಡಲಿಕ್ಕೆ ಹೊರಟಿದ್ದಾರೆ ಎಂದು ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment