/newsfirstlive-kannada/media/post_attachments/wp-content/uploads/2025/02/Karnataka-bundh-SSLC-Exam-2025.jpg)
ಬೆಂಗಳೂರು: ಬೆಳಗಾವಿಯಲ್ಲಿ ಕನ್ನಡ ಭಾಷೆ, ಕನ್ನಡಿಗರ ಮೇಲೆ ನಡೆದಿರುವ ಎಂಇಎಸ್ ಪುಂಡಾಟಕ್ಕೆ ಕನ್ನಡ ಹೋರಾಟಗಾರರು ಸಿಡಿದೆದ್ದಿದ್ದಾರೆ. ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆಸಿದ ಕನ್ನಡ ಪರ ಸಂಘಟನೆಗಳು ಮಾರ್ಚ್ 22 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ.
ಮಾರ್ಚ್ 22ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ವಿವಿಧ ಸಂಘಟನೆಗಳು ಕರೆ ನೀಡಿವೆ. ಸಭೆಯ ಒಕ್ಕೊರಲ ನಿರ್ಧಾರಗಳ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್ ಮಾಡೇ ಮಾಡ್ತೀವಿ. ಸಿಎಂ ಸಿದ್ದರಾಮಯ್ಯ ನಮಗೆ ಸಂಪೂರ್ಣ ಬೆಂಬಲ ಕೊಡಬೇಕು. ಕರೆದು ಮಾತಾಡಿದ್ರೂ ಬಂದ್ ವಾಪಸ್ ಪಡೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ವಾಟಾಳ್ ನಾಗರಾಜ್, ನನ್ನ ಜೀವನದಲ್ಲಿ ಒಮ್ಮೆ ಜಾರಿದ್ದೇನೆ. ಇನ್ನು ಮುಂದೆ ಯಾರೇ ಹೇಳಿದ್ರು ಇಟ್ಟ ಹೆಜ್ಜೆ ಹಿಂದೆ ಹಿಡೋದಿಲ್ಲ. ಮಾರ್ಚ್ 22 ರಂದು ಬೆಳಗ್ಗೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಮೆರವಣಿಗೆ ಮಾಡುತ್ತೇವೆ. ಎಲ್ಲರೂ ಕನ್ನಡಪರ ನಿಲ್ಲಬೇಕು. ಇಂದಿನಿಂದ ಎಲ್ಲಿ ನೋಡಿದ್ರೂ ಸಂಪೂರ್ಣವಾಗಿ ಬಂದ್, ಬಂದ್, ಬಂದ್ ಬಗ್ಗೆನೇ ಇರಬೇಕು ಎಂದು ಎಚ್ಚರಿಸಿದ್ದಾರೆ.
ವಾಟಾಳ್ ನಾಗರಾಜ್ 10 ಎಚ್ಚರಿಕೆಗಳು!
1. ಕರ್ನಾಟಕ ಬಂದ್‌ಗೆ ಸಿಎಂ ಸಂಪೂರ್ಣ ಬೆಂಬಲ ಕೊಡಬೇಕು
2. ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆ ಎಲ್ಲಾ ಬಸ್ ನಿಲ್ಲಿಸಬೇಕು
3. ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ಬೆಂಬಲ ನೀಡಬೇಕು
4. ಮಾರ್ಚ್ 22ಕ್ಕೆ ಸಿನಿಮಾ ರಂಗ ಸಂಪೂರ್ಣ ಬಂದ್ ಮಾಡಬೇಕು
5. ಹೋಟೆಲ್ ಮಾಲೀಕರು ಹೋಟೆಲ್ ಸಂಪೂರ್ಣ ಮುಚ್ಚಬೇಕು
6. ಸರ್ಕಾರಿ ನೌಕರರ ಸಂಘದವರು ಬಂದ್‌ಗೆ ಬೆಂಬಲ ಕೊಡಬೇಕು
7. ಕಾರು, ಲಾರಿ ಮಾಲೀಕರು ಕೂಡ ಬಂದ್‌ಗೆ ಬೆಂಬಲ ಕೊಡಬೇಕು
8. ಮಾರ್ಚ್ 22 ರಂದು ಬಂದ್ ದಿನ ಖಾಸಗಿ ಶಾಲೆ ರಜೆ ಕೊಡಬೇಕು
9. ಔಷಧಿ ಅಂಗಡಿ, ಆಸ್ಪತ್ರೆ, ಮಾಧ್ಯಮದವರಿಗೆ ಮಾತ್ರ ವಿನಾಯಿತಿ
10. ಸಿಎಂ ಕರೆದು ಮಾತನಾಡಿದ್ರೂ ಬಂದ್ ವಾಪಸ್ ಪಡೆಯೋದಿಲ್ಲ
ಕನ್ನಡಿಗರ ಹೋರಾಟ ಯಾವತ್ತು? ಹೇಗೆ?
ಮಾರ್ಚ್ 03 ರಾಜಭವನ ಮುತ್ತಿಗೆ
ಮಾರ್ಚ್ 07 ಬೆಳಗಾವಿ ಚಲೋ
ಮಾರ್ಚ್ 11 ಅತ್ತಿಬೆಲೆ ತಮಿಳುನಾಡು ಗಡಿ ಬಂದ್
ಮಾರ್ಚ್ 14 ರಾಮನಗರ ಮಂಡ್ಯ ಮೈಸೂರಲ್ಲಿ ಪ್ರತಿಭಟನೆ
ಮಾರ್ಚ್ 17 ಹೊಸಕೋಟೆ ಚೆನ್ನೈ ಹೆದ್ದಾರಿ ತಡೆ
ಮಾರ್ಚ್ 18 ಕನ್ನಡಪರ ಸಂಘಟನೆಗಳ ಸಭೆ
ಮಾರ್ಚ್ 22 ಕರ್ನಾಟಕ ಬಂದ್
SSLC ವಿದ್ಯಾರ್ಥಿಗಳಿಗೆ ಆತಂಕ!
ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕನ್ನಡ ಸಂಘಟನೆಗಳಿಂದ SSLC ಪರೀಕ್ಷೆಗೆ ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಮಾರ್ಚ್ 21ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಆರಂಭವಾಗುತ್ತಿದೆ. ಮಾರ್ಚ್ 21ರಂದು ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಿಗದಿಯಾಗಿದೆ.
ಮಾರ್ಚ್ 21ರಂದು ಪರೀಕ್ಷೆ ನಡೆಯುತ್ತಿದ್ದು, ಮಾರ್ಚ್ 22ರ ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. SSLC ಪರೀಕ್ಷಾ ವೇಳಾಪಟ್ಟಿಯಲ್ಲಿ ಮಾರ್ಚ್ 22ರಂದು ಶನಿವಾರ ಪರೀಕ್ಷೆ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಮಾರ್ಚ್ 23ರಂದು ಭಾನುವಾರ ರಜಾ ದಿನ. ಮಾರ್ಚ್ 24ರಂದು ಕೋರ್ ಸಬ್ಜೆಕ್ಟ್ ಗಣಿತ, ಸಮಾಜಶಾಸ್ತ್ರ ಪರೀಕ್ಷೆ ನಡೆಯುತ್ತಿದೆ.
ಇದನ್ನೂ ಓದಿ: ಮಾರ್ಚ್ 22 ರಂದು ಕರ್ನಾಟಕ ಬಂದ್; ಅಂದು ಏನಿರುತ್ತೆ?, ಏನಿರಲ್ಲ?.. ವಾಟಾಳ್ ನಾಗರಾಜ್ ಕೊಟ್ಟ ಎಚ್ಚರಿಕೆ ಏನು?
ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಮಾರ್ಚ್ 22ರಂದು SSLC ಪರೀಕ್ಷೆ ನಿಗದಿಯಾಗಿಲ್ಲ. ಆದರೆ ಮಾರ್ಚ್ 21ರ ಸಂಜೆಯೇ ಕರ್ನಾಟಕ ಬಂದ್ ಬಿಸಿ ಪ್ರಯಾಣಿಕರಿಗೆ ತಟ್ಟುವ ಸಾಧ್ಯತೆ ಇದೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಲಿದ್ದು, SSLC ಪರೀಕ್ಷೆಯ ಸಂದರ್ಭದಲ್ಲಿ ಬಂದ್‌ಗೆ ಕರೆ ನೀಡಿರೋದು ವಿದ್ಯಾರ್ಥಿಗಳು, ಪೋಷಕರನ್ನು ಚಿಂತೆಗೀಡು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ