newsfirstkannada.com

ಚುನಾವಣಾ ಅಖಾಡಕ್ಕೆ ಎಂಟ್ರಿಕೊಟ್ಟ ವೀರಪ್ಪನ್ ಪುತ್ರಿ; ಕಳ್ಳ ಅಪ್ಪನ ಇವರ ಒಡನಾಟ ಹೇಗಿತ್ತು..?

Share :

Published March 26, 2024 at 11:39am

    ವೀರಪ್ಪನ್ ಮಗಳಿಗೆ ಟಿಕೆಟ್ ನೀಡಿದ ಪಕ್ಷ ಯಾವುದು?

    ವೀರಪ್ಪನ್ ಮಗಳ ಹೆಸರು ಏನು? ರಾಜಕೀಯಕ್ಕೆ ಬರಲು ಕಾರಣ?

    ಏಪ್ರಿಲ್ 19 ರಿಂದ ಲೋಕಸಭೆ ಚುನಾವಣೆ ನಡೆಯಲಿದೆ

ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ರಂಗೇರಿದೆ. ರಾಜಕೀಯ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಕಣಕ್ಕಿಳಿಸುವ ತಂತ್ರಗಳು ಬಹುತೇಕ ಪೂರ್ಣಗೊಳ್ಳುತ್ತಿದ್ದು, ಇನ್ನೇನು ನಾಮಿನೇಷನ್ ಆರ್ಭಟ ಜೋರಾಗಲಿದೆ. ವಿಶೇಷ ಅಂದರೆ ತಮಿಳುನಾಡು ಲೋಕಸಭೆ ಕ್ಷೇತ್ರಕ್ಕೆ ಘೋಷಣೆ ಮಾಡಿರುವ ಒಂದು ಕ್ಷೇತ್ರ ಭಾರೀ ಸುದ್ದಿಯಲ್ಲಿದೆ.

ಅದಕ್ಕೆ ಕಾರಣ ನಟೋರಿಯಸ್ ಅಡವಿಗಳ್ಳ​ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಚುನಾವಣಾ ಕಣಕ್ಕಿಳಿದಿರೋದು. ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ತಮಿಳುನಾಡು ನ್ಯಾಷನಲಿಸ್ಟ್ ಪಾರ್ಟಿ Naam Ramizhar Katchi ಪಕ್ಷದ ಅಭ್ಯರ್ಥಿಯಾಗಿ ವಿದ್ಯಾ ರಾಣಿ ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ. ನ್ಯಾಯವಾದಿಯಾಗಿರುವ ವಿದ್ಯಾ ರಾಣಿ 2020, ಜುಲೈನಲ್ಲಿ ಬಿಜೆಪಿ ಪಕ್ಷ ಸೇರಿದ್ದರು. ಬಳಿಕ ಅವರಿಗೆ ರಾಜ್ಯ ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆ ಸ್ಥಾನವನ್ನೂ ನೀಡಲಾಗಿತ್ತು. ಇತ್ತೀಚೆಗೆ ನಟ-ನಿರ್ದೇಶಕ ಸೀಮನ್ ನೇತೃತ್ವದ ಎನ್​ಟಿಕೆ ಪಕ್ಷವನ್ನು ಸೇರಿದ್ದಾರೆ. ಎನ್​​ಟಿಕೆ ಪಕ್ಷವು ತಮಿಳುನಾಡು ಮತ್ತು ಪುದುಚೆರಿ ಸೇರಿ ಒಟ್ಟು 40 ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿದೆ.

ಇದನ್ನೂ ಓದಿ: ಪ್ರವಾಸಕ್ಕೆ ಬಂದವರಿಂದ 69 ಸಾವಿರ ಹಣ ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು; ಗಳಗಳನೇ ಕಣ್ಣೀರಿಟ್ಟ ಮಹಿಳೆ..!

ಕಣಕ್ಕಿಳಿದಿರುವ 40 ಅಭ್ಯರ್ಥಿಗಳಲ್ಲಿ ಬಹುತೇಕರು ವಿವಾದಿತ ಎಲ್​ಟಿಟಿ ನಾಯಕ ಪ್ರಭಾಕರನ್ ಸಿದ್ಧಾಂತವನ್ನು ಒಪ್ಪಿಕೊಂಡವರು ಎಂದು ಹೇಳಲಾಗಿದೆ. ಇನ್ನು ವಿದ್ಯಾರಾಣಿ ಅವರು ಕೃಷ್ಣಗಿರಿಯಲ್ಲಿ ಮಕ್ಕಳಿಗಾಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ಜೊತೆ ನಿಕಟ ನಂಟು ಹೊಂದಿದ್ದಾರೆ. ಇವರು ಕಾನೂನು ಪದವಿ ಪಡೆದಿರೋದು ಕೂಡ ಬೆಂಗಳೂರಲ್ಲಿಯೇ ಎಂದು ಹೇಳಲಾಗಿದೆ.

ವೀರಪ್ಪನ ಮಗಳನ್ನು ಎತ್ತಿಕೊಂಡು ಏನ್ ಹೇಳಿದ್ದ..?

ವಿದ್ಯಾ ರಾಣಿ ತಂದೆ ವೀರಪ್ಪನ್​ನನ್ನು ಒಂದು ಬಾರಿ ಮಾತ್ರ ಭೇಟಿಯಾಗಿದ್ದರಂತೆ. ಈ ವೇಳೆ ಕಾಡುಗಳ್ಳ ವೀರಪ್ಪನ್, ಮಗಳಿಗೆ ವಕೀಲ ವೃತ್ತಿ ಮತ್ತು ರಾಜಕೀಯದಲ್ಲಿ ಗುರುತಿಸಿಕೊಳ್ಳಿವಂತೆ ಸಲಹೆ ನೀಡಿದ್ದನಂತೆ. ಅದರಂತೆ ವಿದ್ಯಾ ರಾಣಿ ರಾಜಕೀಯ ಪ್ರವೇಶ ಮಾಡಿದ್ದಾರೆ. ವರದಿಗಳ ಪ್ರಕಾರ, ವಿದ್ಯಾ ರಾಣಿ ಮೂರನೇ ತರಗತಿ ಓದುತ್ತಿದ್ದಾಗ, ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಅಜ್ಜ ಗೋಪಿನಾಥಮ್ ಮನೆಯಲ್ಲಿ ವೀರಪ್ಪನ್​​​ನನ್ನು ಭೇಟಿಯಾಗಿದ್ದರು ಎಂದು ಹೇಳಲಾಗಿದೆ.

ಅವರು ಹೇಳುವಂತೆ, ಅದೇ ಮೊದಲ ಹಾಗೂ ಕೊನೆಯ ಭೇಟಿ. ಸುಮಾರು 30 ನಿಮಿಷಗಳ ಕಾಲ ಅಪ್ಪ ವೀರಪ್ಪನ್ ಮಾತನಾಡಿದ್ದ. ನನ್ನನ್ನು ಎತ್ತಿಕೊಂಡು ಹೇಳಿದ್ದ, ಏನೆಂದರೆ ನೀನು ಜನರ ಸೇವೆಯನ್ನು ಮುಂದುವರಿಸು ಎಂದಿದ್ದ. ಅದರಂತೆ ನಾನು ಈ ಹಾದಿಯಲ್ಲಿದ್ದೇನೆ ಎಂದು ಮಾಧ್ಯವೊಂದಕ್ಕೆ ಹೇಳಿಕೊಂಡಿದ್ದಾರೆ. 2004, ಅಕ್ಟೋಬರ್ 18 ರಂದು ತಮಿಳುನಾಡು ಸ್ಪೆಷಲ್ ಟಾಸ್ಕ್​ ಫೋರ್ಸ್​ ವೀರಪ್ಪನ್​​ನನ್ನು ಎನ್​ಕೌಂಟರ್ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣಾ ಅಖಾಡಕ್ಕೆ ಎಂಟ್ರಿಕೊಟ್ಟ ವೀರಪ್ಪನ್ ಪುತ್ರಿ; ಕಳ್ಳ ಅಪ್ಪನ ಇವರ ಒಡನಾಟ ಹೇಗಿತ್ತು..?

https://newsfirstlive.com/wp-content/uploads/2024/03/VEERAPPAN.jpg

Load More