ಸಿಲಿಕಾನ್​ ಸಿಟಿ ಮಂದಿಗೆ ಬಿಗ್​ ಶಾಕ್​​.. ತರಕಾರಿ ರೇಟ್​ ಕೇಳಿ ದಂಗಾದ ಜನ!

author-image
Veena Gangani
Updated On
ಕಳೆದ ವಾರಕ್ಕಿಂತ ಮತ್ತಷ್ಟು ಹೆಚ್ಚಿದ ತರಕಾರಿ ಬೆಲೆ; ಟೊಮ್ಯಾಟೋ, ಶುಂಠಿ ಬೆಲೆ ಎಷ್ಟು?
Advertisment
  • ತರಕಾರಿ ರೇಟ್​ ಕೇಳಿ ಬೆವರುತ್ತಿರೋ ಬೆಂಗಳೂರಿನ ಜನರು
  • ದಿನದಿಂದ ದಿನಕ್ಕೆ ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಬಿಸಿ ಉಷ್ಣಾಂಶ
  • ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ದುಬಾರಿ

ಬೆಂಗಳೂರು: ರಣಬಿಸಿಲ ಝಳ ನೆಲವನ್ನ ಬಾಯಿ ತೆರಿಸಿದೆ. ಗಿಡ ಮರಗಳೆಲ್ಲ ಒಣಗಿ ಹೋಗ್ತಿದೆ. ರೈತ ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ರೆ ಸಿಟಿಮಂದಿ ಸಪ್ಪೆ ಮೊರೆ ಹಾಕಿದ್ದಾರೆ. ದುಪ್ಪಟ್ಟಾಗಿರೋ ತರಕಾರಿ ರೇಟ್​​ ಕೇಳಿ ಸಿಟಿ ಮಂದಿ ಬೆವರಿಳಿಸ್ತಿದ್ದಾರೆ. ಗಗನಕ್ಕೇರಿರೋ ತರಕಾರಿಗಿಂತ ಕೋಳಿ ಮಾಂಸದ ರೇಟು ಎಷ್ಟೋ ವಾಸಿ ಅನ್ನುವಂತಾಗಿದೆ.

publive-image

ಗಗನಕ್ಕೇರಿರೋ ತರಕಾರಿ ದರ ಕೇಳಿ ಬೆವರುತ್ತಿರೋ ಗ್ರಾಹಕರು

ಬಿಸಿಲ ಬೇಗೆಗೆ ಜನ, ಜಾನುವಾರುಗಳು ತತ್ತರಿಸಿದೆ. ಜನರ ಗಂಟಲು ಒಣಗುತ್ತಿದೆ. ಮಳೆರಾಯನ ದರ್ಶನಕ್ಕಾಗಿ ಎದುರು ನೋಡ್ತಿರೋ ಸಿಟಿ ಮಂದಿಗೆ ಇದೀಗ ಶಾಕ್​ ಎದುರಾಗಿದೆ. ಮುಂಗಾರು ಮಳೆಯ ಕೊರತೆಯಿಂದ ತರಕಾರಿ ದರ ಹೆಚ್ಚಾಗಿದ್ದು, ಗ್ರಾಹಕರು ಕಂಗಲಾಗಿದ್ದಾರೆ.1 ಕೆಜಿ ತಗೋಬೇಕೆಂದು ಮಾರ್ಕೆಟ್​​ಗೆ ಬಂದವರು ಇದೀಗ ಕಾಲು ಕೆಜಿ ತರಕಾರಿ ಖರೀದಿಸುವಂತಾಗಿದೆ.

publive-image

ಇದನ್ನೂ ಓದಿ:6 ವರ್ಷದ ಬಾಲಕಿ ಮೇಲೆ ನಾಯಿ ಡೆಡ್ಲಿ ಅಟ್ಯಾಕ್‌; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ಧಗಧಗನೆ ಉರಿಯೋ ಸುಡೋ ಬಿಸಿಲಿಗೆ ತರಕಾರಿಗಳ ಫಸಲು ಇಳಿಕೆ ಕಂಡು ಎಲೆಗಳೆಲ್ಲಾ ಒಣಗಿ ಉದುರುತ್ತಿದೆ. ಬೇಡಿಕೆಗಿಂತ ಪೂರೈಕೆ ಕುಸಿತದ ಹಿನ್ನೆಲೆ ಬೆಲೆ ಏರಿಕೆ ಕಾಣುತ್ತಿದ್ದು, ಗ್ರಾಹಕರ ಕೈ ಸುಡ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆ ಕಂಡುಬಂದಿದ್ದು, ಬೀನ್ಸ್‌ ದರ 200ರೂ. ಗಡಿ ತಲುಪಿದೆ.

ಗಗನಕ್ಕೇರಿದ ತರಕಾರಿಗಳ ದರ

  1. ನಾಟಿಬೀನ್ಸ್‌ ₹60- ₹80 ₹170- ₹200
  2. ಬಟಾಣಿ ‌‌‌‌‌‌‌ ₹80-₹100 ₹180-₹200
  3. ಕ್ಯಾರೆಟ್ ₹30-₹40 ₹60-₹80
  4. ಸೌತೆ ಕಾಯಿ ₹ 30-₹40 ₹70-₹80
  5. ಟೊಮೆಟೊ ₹10-₹20 ‌‌‌‌‌‌‌‌‌‌‌‌ ₹30-₹40

publive-image

ಇನ್ನು, 2023ರಲ್ಲಿ ಮಳೆಯಿಲ್ಲದೆ ಬಹುತೇಕ ಕಡೆ ಕೃಷಿ ಬೆಳೆ ಹಾನಿಗೊಳಗಾಗಿತ್ತು. ಆದ್ರೆ ಈ ವರ್ಷ ಕಂಪ್ಲೀಟ್​​ ಉಲ್ಟಾ. ತರಕಾರಿ ಬೆಳೆಗಳಿಗೆ ನೀರಿನ ಅಭಾವ ಎದುರಾಗಿದೆ. ಬಿಸಿಲಿನ ಹೊಡೆತದಿಂದ ಫಸಲು ಕಡಿಮೆಯಾಗ್ತಿದ್ದು, ಬೆಲೆ ಏರಿಕೆಯಾಗಲು ಕಾರಣವಾಗಿದೆ. ಈ ರೀತಿ ರೇಟ್ ಹೆಚ್ಚಾದ್ರೆ ನಾವೆಂಗೆ ತರಕಾರಿ ತಿನ್ನೋದೆಂದು ಗ್ರಾಹಕರು ಅಸಮಾಧಾನ ಹೊರ ಹಾಕ್ತಿದ್ದಾರೆ. ಒಟ್ಟಿನಲ್ಲಿ ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್‌, ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಾಂತ್ಯದಲ್ಲಿ ದರದಲ್ಲಿ ಏರಿಕೆ ಉಂಟಾಗಿದೆ. ಮಳೆರಾಯನ ಎಂಟ್ರಿಯಾಗದೇ ಬಿಸಿ ವಾತಾವರಣ ಹೀಗೆ ಮುಂದುವರಿದ್ರೆ ಮತ್ತಷ್ಟು ತರಕಾರಿ ದುಬಾರಿಯಾಗೋದ್ರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment