/newsfirstlive-kannada/media/post_attachments/wp-content/uploads/2023/07/veg.jpg)
ಬೆಂಗಳೂರು: ಅಬ್ಬಬ್ಬಾ.. ಯಾವ ಸೊಪ್ಪು ಮುಟ್ಟಂಗೇ ಇಲ್ಲ. ಹಣ್ಣುಗಳ ಕಥೆ ಕೇಳೋದೇ ಬೇಡ. ತರಕಾರಿಯಂತೂ ಸೆಂಚುರಿ ಬಾರಿಸಿ ಓಡ್ತಿದೆ. ಹೌದು, ‘ಬೆಂದ’ಕಾಳೂರು ಆಗ್ಬಿಟ್ಟಿದ್ದ ಸಿಲಿಕಾನ್​ ಸಿಟಿಗೆ ಮಳೆಯ ಎಂಟ್ರಿಯೇನೋ ಆಗಿದೆ. ಆದ್ರೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಬೆಂದ ಕಾವಲಿಯಂತಿದ್ದ ವಾತವರಣ ತರಕಾರಿ ಬೆಲೆಯನ್ನ ಮತ್ತಷ್ಟು ದುಪ್ಪಟ್ಟು ಮಾಡ್ಬಿಟ್ಟಿದೆ.
/newsfirstlive-kannada/media/post_attachments/wp-content/uploads/2023/07/veg-1.jpg)
ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್
ಸೊಪ್ಪು, ತರಕಾರಿ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಮದುವೆ ಸೀಸನ್‍ನಿಂದಾಗಿ ಬೇಡಿಕೆ ಹೆಚ್ಚಿದೆ, ಕಳೆದ ವಾರದಿಂದಲೇ ಬೆಲೆ ಏರಿ ಕೆಜಿ 100ರೂ ನಂತೆ ಮಾರಾಟವಾಗ್ತಿದೆ ಬೀನ್ಸ್​, ಹಸಿಮೆಣಸು, ಹಿರೇಕಾಯಿ ನಿಂಬೆ ಹಣ್ಣು. ಇತ್ತ, ಬಿಸಿ ಎಫೆಕ್ಟ್​​ ಹೂವಿನ ಮೇಲೂ ಬಿದಿದ್ದು, ಉದುರಿ ಬೀಳ್ತಿದೆ. ಇಳುವರಿ ಕಡಿಮೆಯಾಗಿದೆ. ಹೀಗಾಗಿ ಹೂವಿನ ರೇಟ್​​ ಕೂಡ ದುಪ್ಪಟ್ಟಾಗಿದೆ. ಕಳೆದ ತಿಂಗಳು ಕೆಜಿಗೆ 30 ರೂಪಾಯಿ ಇರುವ ತರಕಾರಿ, ಈ ತಿಂಗಳು 60 ರೂಪಾಯಿ ಆಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.
/newsfirstlive-kannada/media/post_attachments/wp-content/uploads/2023/08/VEGITABLE.jpg)
‘ಸೊಪ್ಪು’ ಬೆಲೆ ಏರಿಕೆ
ಸಬ್ಬಸಿಗೆ ಸೊಪ್ಪು ಪ್ರತಿ ಕಟ್ಟಿಗೆ 20ರೂಪಾಯಿ ಆಗಿದೆ. ಕೊತ್ತಂಬರಿ ಸೊಪ್ಪು 15ರಿಂದ 20 ರೂಪಾಯಿ ಆದ್ರೆ ಮೆಂತ್ಯೆ ಸೊಪ್ಪು ಪ್ರತಿ ಕಟ್ಟಿಗೆ 10 ರಿಂದ 20 ರೂಪಾಯಿ ಆಗಿದೆ. ಪುದೀನಾ ಮತ್ತು ಪಾಲಕ್​ ಸೊಪ್ಪು 10ಕ್ಕೆ ಏರಿದ್ದು ದುಪ್ಪಟ್ಟಾಗಿದೆ.
/newsfirstlive-kannada/media/post_attachments/wp-content/uploads/2023/06/Vegetables-1-1.jpg)
ತರಕಾರಿ ದುಬಾರಿ
ಬೀನ್ಸ್ ₹160
ನಿಂಬೆ ಹಣ್ಣು ₹150-₹200
ನುಗ್ಗೆ ಕಾಯಿ ₹100
ಹಸಿ ಮೆಣಸಿನಕಾಯಿ ₹100
ಅವರೆಕಾಯಿ ₹84 ರೂ.
ಹೀರೆ ಕಾಯಿ ₹80 -₹100
ಹಾಗಲಕಾಯಿ 80 ರೂ.
ಬದನೆಕಾಯಿ ₹60
ಒಟ್ಟಿನಲ್ಲಿ ತರಕಾರಿ, ಸೊಪ್ಪು ಎಲ್ಲಾ ಬೆಲೆಗಳು ಏರಿದ್ದು, ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಮಳೆಯ ಸಿಂಚವಾಗ್ತಿರೋದ್ರಿಂದ ಇನ್ಮೇಲೆಯಾದ್ರೂ ಬೆಲೆ ಇಳಿಕೆ ಕಾಣುತ್ತಾ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us