CA ಪಾಸ್​​ ಮಾಡಿದ ತರಕಾರಿ ವ್ಯಾಪಾರಿ ಮಹಿಳೆ ಮಗ.. ಸುದ್ದಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಮಹಾತಾಯಿ!

author-image
Veena Gangani
Updated On
CA ಪಾಸ್​​ ಮಾಡಿದ ತರಕಾರಿ ವ್ಯಾಪಾರಿ ಮಹಿಳೆ ಮಗ.. ಸುದ್ದಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಮಹಾತಾಯಿ!
Advertisment
  • ಸಿಎಂ ಎಕ್ಸಾಂ ಪಾಸ್​ ಆದ ಮಗನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ತಾಯಿ
  • ನಿಮ್ಮ ಮುಂದಿನ ಹೆಜ್ಜೆಗೆ ಶುಭಾಶಯಗಳು ಎಂದು ಶುಭ ಹಾರೈಸಿದ ನೆಟ್ಟಿಗರು
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯ್ತು ತಾಯಿ ಮಗನ ವಿಡಿಯೋ

ಮಹಾರಾಷ್ಟ್ರ: ಬ್ಯಾಂಕಿಂಗ್, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಹುದ್ದೆಗಳಲ್ಲಿ ಚಾರ್ಟರ್ಡ್‌ ಅಕೌಂಟೆಂಟ್ (CA) ಸಹ ಒಂದು. ಉತ್ತಮ ಆದಾಯ ಗಳಿಸೋ ಹುದ್ದೆಗಳಲ್ಲಿ ಚಾರ್ಟರ್ಡ್‌ ಅಕೌಂಟೆಂಟ್ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಈ ಚಾರ್ಟರ್ಡ್‌ ಅಕೌಂಟೆಂಟ್ ಎಕ್ಸಾಂ ಪಾಸ್​ ಮಾಡುವುದು ಅಷ್ಟು ಸುಲಭವಲ್ಲ. ಇದಕ್ಕೆ ಬಹಳ ಶ್ರಮ ಅಗತ್ಯ. ಎಕ್ಸಾಮ್ ಪ್ರಿಪರೇಷನ್, ಪರೀಕ್ಷೆ ಮಾದರಿ ಹೇಗಿರುತ್ತದೆ, ಪರೀಕ್ಷೆಗೆ ಅಧ್ಯಯನ ನಡೆಸುವುದು ಹೇಗೆ ಎಂದು ತಿಳಿದುಕೊಂಡರೆ ಮಾತ್ರ ಸಿಎ ಪಾಸ್​ ಮಾಡಬಹುದು.

ಇದನ್ನೂ ಓದಿ:ಮಹಾನಟಿ ವಿನ್ನರ್​ ಪ್ರಿಯಾಂಕ ಆಚಾರ್​​ಗೆ ಅಭಿಮಾನಿಗಳಿಂದ ಸ್ಪೆಷಲ್ ವಿಶ್​​; ಏನದು?

ದೇಶದಲ್ಲಿ ಅದೆಷ್ಟೋ ಲಕ್ಷಾಂತರ ವಿದ್ಯಾರ್ಥಿಗಳೂ ಸಿಎಂ ಪರಿಕ್ಷೇ ಬರೆಯುತ್ತಾರೆ. ಆದರೆ ಬೆರಳೆಣಿಕೆಯಷ್ಟು ಜನ ಮಾತ್ರ ಈ ಸಿಎ ಎಕ್ಸಾಂ ಅನ್ನು ಪಾಸ್​ ಮಾಡಿಕೊಳ್ಳುತ್ತಾರೆ. ಕಷ್ಟಪಟ್ಟು​ ಸಿಎ ಎಕ್ಸಾಂ ಪಾಸ್​ ಮಾಡಿಕೊಂಡ ವಿದ್ಯಾರ್ಥಿಗಳ ಜೊತೆಗೆ ಪೋಷಕರ ಮುಖದಲ್ಲಿ ಖುಷಿ ನೋಡದರೇ ನಮ್ಮ ಕಣ್ಣಲ್ಲಿ ನೀರು ಬಂದು ಬಿಡುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ತಾಯಿ ಮಗನ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೌದು, ತನ್ನ ಮಗ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಪಾಸ್​ ಆದ ಬಳಿಕ ತಾಯಿ ಆತನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತಿರೋ ಘಟನೆ ನೆಟ್ಟಿಗರ ಕಣ್ಣಲ್ಲಿ ನೀರು ತರಿಸಿಬಿಟ್ಟಿದೆ. ಥಾಣೆಯ ಏರಿಯಾ ಒಂದರಲ್ಲಿ ತರಕಾರಿ ಮಾರುವ ಮಹಿಳಾ ವ್ಯಾಪರಿ ಮಗ ಯೋಗೇಶ್ ಇತ್ತೀಚೆಗೆ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಈ ವಿಚಾರವನ್ನು ಆತ ತನ್ನ ತಾಯಿಗೆ ನಾನು ಸಿಎ ಎಕ್ಸಾಂನಲ್ಲಿ ಪಾಸ್​ ಆಗಿದ್ದೀನಿ ಅಂತ ಹೇಳಿದ್ದಾನೆ. ಆಗ ಆ ಮಹಾತಾಯಿಯ ಮಗನನ್ನು ಬಿಗಿದಪ್ಪಿ ಕಣ್ಣೀರು ಹಾಕಿರೋ ವಿಡಿಯೋ ತುಣುಕು ಈಗ ನೆಟ್ಟಿಗರ ಗಮನ ಸೆಳೆದಿದೆ.

publive-image

ಇನ್ನು ಇದೇ ವಿಡಿಯೋವನ್ನು ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆ ಸಚಿವ ರವೀಂದ್ರ ಚವಾಣ್ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಯೋಗೇಶ್, ನಿಮ್ಮ ಬಗ್ಗೆ ಹೆಮ್ಮೆ ಇದೆ. ಡೊಂಬಿವಿಲಿ ಪೂರ್ವದ ಗಾಂಧಿನಗರದ ಗಿರ್ನಾರ್ ಮಿಠಾಯಿ ಅಂಗಡಿ ಬಳಿ ತರಕಾರಿ ಮಾರುವ ತೋಂಬ್ರೆ ಮಾವ್ಶಿ ಅವರ ಪುತ್ರ ಯೋಗೇಶ್ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿದ್ದಾರೆ. ಶಕ್ತಿ, ದೃಢತೆ ಮತ್ತು ಕಠಿಣ ಪರಿಶ್ರಮದಿಂದ ಯೋಗೇಶ್ ಕಠಿಣ ಪರಿಸ್ಥಿತಿಗಳ ನಡುವೆಯೂ ಈ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಅವನ ಯಶಸ್ಸಿನ ಬಗ್ಗೆ ಅವನ ತಾಯಿಯ ಸಂತೋಷದ ಕಣ್ಣೀರು ಲಕ್ಷಾಂತರ ಮೌಲ್ಯದ್ದಾಗಿದೆ. ಸಿಎಯಂತಹ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದ ಯೋಗೇಶ್ ಯಶಸ್ಸಿನ ಬಗ್ಗೆ ಡೊಂಬಿವ್ಲಿಕರ್ ಆಗಿ ನನಗೆ ಸಂತೋಷವಾಗಿದೆ. ಅಭಿನಂದನೆಗಳು ಯೋಗೇಶ್! ನಿಮ್ಮ ಮುಂದಿನ ಹೆಜ್ಜೆಗೆ ಶುಭಾಶಯಗಳು. ಇದನ್ನು ನೋಡಿದ ನೆಟ್ಟಿಗರು ವಾವ್​​ ಸೂಪರ್​ ಯೋಗೇಶ್, ನಿನ್ನ ತಾಯಿಯ ಆಸೆಯನ್ನು ಈಡೇರಿಸಿಬಿಟ್ಟೆ, ಯೋಗೇಶ್ ತಾಯಿಗೆ ತಕ್ಕ ಮಗ, ಇದೊಂದು ಭಾವನಾತ್ಮಕ ಕ್ಷಣ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ. ಅದೇನೇ ಇರಲಿ ಅಷ್ಟು ಕಷ್ಟಕರವಾದ ಎಕ್ಸಾಂ ಅನ್ನು ಪಾಸ್​ ಮಾಡಿರುವುದು ದೊಡ್ಡ ಸಾಧನೆ ಅಲ್ಲವೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment