/newsfirstlive-kannada/media/post_attachments/wp-content/uploads/2023/08/Fruits.jpg)
ಇಷ್ಟು ದಿನ ತರಕಾರಿಯಿಂದ ಸಾಂಬಾರ್ ಮಾಡುತ್ತೇವೆ ಅನ್ನೋ ಭ್ರಮೆಯಲ್ಲಿ ಬದುಕುತ್ತಿದ್ದೆವು. ಆದರೀಗ, ನಾವು ತರಕಾರಿ ಬದಲಿಗೆ ಹಣ್ಣುಗಳಿಂದ ಸಾಂಬಾರ್ ಮಾಡುತ್ತೇವೆ ಅನ್ನೋ ಸತ್ಯ ಹೊರಬಿದ್ದಿದೆ. ಇದು ನಮಗೆ ಗೊತ್ತಿಲ್ಲದೆ ನಡೆಯುತ್ತಿರೋ ಪ್ರಕ್ರಿಯೆ. ನಮಗೆ ಹಣ್ಣು ಯಾವುದು, ತರಕಾರಿ ಯಾವುದು ಎಂಬ ವ್ಯತ್ಯಾಸವೇ ಗೊತ್ತಿಲ್ಲ. ಕೆಲವನ್ನು ಹಣ್ಣು ಎಂದು ವಿಭಾಗಿಸಿದರೂ ಅವುಗಳನ್ನು ಅಡುಗೆಯಲ್ಲಿ ತರಕಾರಿ ಎಂಬಂತೆ ಕಾಮನ್ ಆಗಿ ಬಳಕೆ ಮಾಡುತ್ತಿದ್ದೇವೆ. ಅವು ಯಾವುವು ಎಂದು ತಿಳಿದುಕೊಳ್ಳಲು ಸ್ಟೋರಿ ಓದಿ!
ಸೌತೆಕಾಯಿ
ಸೌತೆಕಾಯಿಯನ್ನು ನಾವು ತರಕಾರಿ ಎಂದು ನಾವು ಭಾವಿಸಿದರೂ ಇದು ವಾಸ್ತವವಾಗಿ ಹಣ್ಣು ಎಂದು ಪರಿಗಣಿಸಲ್ಪಟ್ಟಿದೆ. ಇದರಲ್ಲಿ ಹೆಚ್ಚಿನ ಮಟ್ಟದಲ್ಲಿ ನೀರಿನ ಅಂಶ ಮತ್ತು ಗರಿಗರಿಯಾದ ವಿನ್ಯಾಸ ಹೊಂದಿದೆ. ಸೌತೆಕಾಯಿಗಳನ್ನು ಸಲಾಡ್‌ಗಳ ರೀತಿ ಬಳಸುತ್ತಾರೆ. ಅಲ್ಲದೇ ಬೇಸಿಗೆಯಲ್ಲಿ ಆರೋಗ್ಯಕ್ಕೆ ಹೆಚ್ಚು ಸೂಕ್ತವಾಗಿದೆ.
ಟೊಮ್ಯಾಟೋ
ಇದು ಮೊನ್ನೆ ಮೊನ್ನೆ ಮಾರ್ಕೆಟ್ನಲ್ಲಿ ಸಖತ್ ರೇಟ್ ಕುದುರಿಸಿಕೊಂಡಿತ್ತು. ಈಗಲೂ ಕೆಲವೊಂದು ಕಡೆ ಕೆ.ಜಿಗೆ ಶತಕದಂಚಿನಲ್ಲಿದೆ. ಟೊಮ್ಯಾಟೋ ಕೂಡ ತರಕಾರಿಯಲ್ಲ. ಇದು ಹಣ್ಣಿನ ವರ್ಗಕ್ಕೆ ಸೇರುತ್ತದೆ. ಹೂವಿನ ಅಂಡಾಶಯದಲ್ಲಿ ಬೆಳೆಯುವ ಇದು ಬೀಜಗಳನ್ನು ಒಳ ಭಾಗದಲ್ಲಿಟ್ಟುಕೊಂಡಿರುತ್ತದೆ. ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಹಣ್ಣು ಟೊಮ್ಯಾಟೋ ಆಗಿದೆ ಎನ್ನಬಹುದು.
[caption id="attachment_13454" align="aligncenter" width="800"] ಸೌತೆಕಾಯಿ ಮತ್ತು ಬದನೆ ಕಾಯಿ[/caption]
ಬದನೆ ಕಾಯಿ
ಬದನೆ ಕಾಯಿ ಸುವಾಸನೆ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆಶ್ಚರ್ಯಕರ ವಿಷಯ ಎಂದರೆ ಬದನೆ ಕೂಡ ಒಂದು ಹಣ್ಣು ಆಗಿದೆ.
ಕ್ಯಾಪ್ಸಿಕಂ (Bell Pepper)
ಕ್ಯಾಪ್ಸಿಕಂ ದಪ್ಪ ಮೆಣಸಿನಕಾಯಿ ಎಂತಲೂ ಕರೆಯುತ್ತಾರೆ. ಇದು ಕೆಂಪು, ಹಸಿರು ಅಥವಾ ಹಳದಿ ಬಣ್ಣದಲ್ಲಿ ಕಾಣಬಹುದು. ಇದನ್ನು ಅಡುಗೆಯಲ್ಲೂ ಬಳಸಿದರೂ ಇದು ಹಣ್ಣಿನ ಕುಟುಂಬಕ್ಕೆ ಸೇರುತ್ತದೆ.
ಬೆಂಡೆಕಾಯಿ (Lady's Finger)
ನೀವು ಆಶ್ಚರ್ಯ ಪಡಲೇಬೇಡಿ. ಏಕೆಂದರೆ ಬೆಂಡೆಕಾಯಿಯನ್ನು ನಾವು ತರಕಾರಿ ಎಂದುಕೊಂಡರು ಇದು ಕೂಡ ಹಣ್ಣು ಆಗಿದೆ. ನಮಗೆ ತಿಳಿಯದೇ ಅಡುಗೆಯಲ್ಲಿ ಬಳಕೆ ಮಾಡುತ್ತಿದ್ದೇವೆ.
ಅವಕಾಡೊ ಹಣ್ಣು (ಬಟರ್ ಫ್ರೂಟ್)
ಎಲ್ಲರಿಗೂ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಇದು ಚಿರಪರಿಚಿತ. ರುಚಿಕರವಾದ, ಆವಕಾಡೊಗಳು ಹಣ್ಣುಗಳ ಜಾತಿಗೆ ಸೇರುತ್ತದೆ.
ಹಸಿರು ಬಟಾಣಿ
ಬಟಾಣಿ ಹೂವಿನಿಂದ ಅಭಿವೃದ್ಧಿ ಹೊಂದುತ್ತವೆ. ಇದು ಹಸಿರು ಬಣ್ಣದಿಂದ ಇರುವುದರಿಂದ ನಮ್ಮನ್ನು ಮೋಸಗೊಳಿಸುತ್ತದೆ. ಇದು ಹಣ್ಣು ಆಗಿದೆ.
[caption id="attachment_13455" align="aligncenter" width="800"] ಕ್ಯಾಪ್ಸಿಕಂ[/caption]
ಕುಂಬಳಕಾಯಿ
ಅಗಾಧ ಗಾತ್ರ ಹೊಂದಿರುವ ಕುಂಬಳಕಾಯಿ ವಾಸ್ತವವಾಗಿ ಒಂದು ಹಣ್ಣು. ಇದು ಇತರ ಹಣ್ಣುಗಳಂತೆ ಬೀಜಗಳಿಂದ ತುಂಬಿರುತ್ತದೆ. ಇದು ಸ್ವಲ್ಪಮಟ್ಟದ ಸಿಹಿ ರುಚಿಯನ್ನು ಹೊಂದಿರುತ್ತದೆ. ಇದಲ್ಲದೇ ಕುಂಬಳಕಾಯಿಗಳು ಸಿಹಿ ಮತ್ತು ಖಾರದ ಭಕ್ಷ್ಯಗಳಲ್ಲಿ ಬಳಸುತ್ತಾರೆ.
ಆಲಿವ್‌ಗಳು
ಮೆಡಿಟರೇನಿಯನ್ ಪಾಕಪದ್ಧತಿಯಲ್ಲಿ ಆಲಿವ್‌ಗಳು ಪ್ರಧಾನ. ಇವುಗಳನ್ನು ಪಿಜ್ಜಾ ಮತ್ತು ಸಲಾಡ್‌ಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಆಲಿವ್ ಮರದ ಹಣ್ಣುಗಳಾಗಿವೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಮಹತ್ವದ ಟೆಸ್ಟ್ ಸರಣಿ; ಟೀಮ್ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ