Advertisment

ಅತಿ ವೇಗವಾಗಿ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನ ಡಿಕ್ಕಿ.. ಬೈಕ್​ ಸವಾರ ಸಾವು

author-image
AS Harshith
Updated On
ಅತಿ ವೇಗವಾಗಿ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನ ಡಿಕ್ಕಿ.. ಬೈಕ್​ ಸವಾರ ಸಾವು
Advertisment
  • ಜಿಲೆಟಿನ್ ತುಂಬಿಕೊಂಡು ಸಾಗುತ್ತಿದ್ದ ಬುಲೆರೋ ವಾಹನ
  • ಅತಿ ವೇಗವಾಗಿ ಬಂದು ಬೈಕ್​ ಸವಾರನಿಗೆ ಗುದ್ದಿದ ಬುಲೆರೋ
  • ಬೈಕ್​ ಸವಾರ ಸಾವು, ವಾಹನ ಚಾಲಕ ಸ್ಥಳದಿಂದ ಪರಾರಿ

ಚಿಕ್ಕಬಳ್ಳಾಪುರ: ಜಿಲೆಟಿನ್ ವಾಹನ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಗುಡಿಬಂಡೆ-ಪೆರೇಸಂದ್ರ ಮಾರ್ಗದ ಕಮ್ಮಗುಟ್ಟಹಳ್ಳಿ ಕ್ರಾಸ್​​ನಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್​ ಸವಾರ ಬಲಿಯಾಗಿದ್ದಾನೆ.

Advertisment

ಮೃತ ಬೈಕ್ ಸವಾರ ಗುಡಿಬಂಡೆ ತಾಲ್ಲೂಕು ಗರುಡಾಚಾರ್ಲಹಳ್ಳಿ ಗ್ರಾಮದ ನಾಗೇಶ್(21) ಎಂದು ಗುರುತಿಸಲಾಗಿದೆ. ಜಿಲೆಟಿನ್​​ ತುಂಬಿದ್ದ ವಾಹನ ಅತಿ ವೇಗದಿಂದ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸೇತುವೆ ಶಿಥಿಲ, ನದಿಗೆ ಬಿದ್ದ ಕಾರು, ಗೋಡೆ ಬಿದ್ದು ವೃದ್ಧೆ ಸಾವು.. ರಾಜ್ಯದಲ್ಲಿ ಮಳೆಯ ಅವಾಂತರ ಒಂದಾ.. ಎರಡಾ..

ಬೊಲೆರೋ ವಾಹನದಲ್ಲಿ ಜಿಲಿಟಿನ್ ಸ್ಫೋಟಕ ತುಂಬಿ ಕೊಂಡೊಯ್ಯಲಾಗುತ್ತಿತ್ತು. ಚಾಲಕನ ಅತಿ ವೇಗದಿಂದ ಬೈಕ್​ ಸವಾರನಿಗೆ ಗುದ್ದಿದೆ. ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದುರ್ಘಟನೆ ಎದುರಾದಂತೆ ಬೊಲೆರೋ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

Advertisment

ಇದನ್ನೂ ಓದಿ: ಅಯ್ಯೋ.. ತಾಂತ್ರಿಕ ದೋಷ, ಬಾಹ್ಯಾಕಾಶದಲ್ಲಿ ಸಿಲುಕಿದ ಸುನಿತಾ ವಿಲಿಯಮ್ಸ್; ಮುಂದೇನು ಕತೆ?

ಬುಲೆರೋ ವಾಹನದಲ್ಲಿ ಹಿರೇನಾಗವಲ್ಲಿ ಬೆಟ್ಟದ ಸುತ್ತಮುತ್ತ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನ ಸಾಗಿಸಲಾಗುತ್ತಿತ್ತು. ಇತ್ತೀಚೆಗೆ ಟಿಪ್ಪರ್ ಗಳು ಜಿಲೆಟಿನ್ ವಾಹನಗಳಿಗೆ ಹತ್ತಾರು ಜನ ಬಲಿಯಾಗಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತಿವೆ. ಅತಿ ವೇಗದಿಂದ ಸಂಚರಿಸುವ ವಾಹನಗಳಿಂದ ಜನರು ಭಯಭೀತರಾಗಿ ಓಡಾಡುವಂತಾಗಿದೆ.

ಘಟನಾ ಸ್ಥಳಕ್ಕೆ ಪೆರೇಸಂದ್ರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment