ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ್​ಗೆ ಪದ್ಮಶ್ರೀ.. ಇವರಿಗೆ ಗೊಂದಳಿ ಭೀಷ್ಮ ಅಂತ ಕರೆಯುವುದೇಕೆ?

author-image
Gopal Kulkarni
Updated On
ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ್​ಗೆ ಪದ್ಮಶ್ರೀ.. ಇವರಿಗೆ ಗೊಂದಳಿ ಭೀಷ್ಮ ಅಂತ ಕರೆಯುವುದೇಕೆ?
Advertisment
  • ಕರ್ನಾಟಕದ ಗೊಂದಳಿ ಜಾನಪದ ಕಲಾವಿದನಿಗೆ ಪದ್ಮಶ್ರೀ ಗೌರವ
  • ಗೊಂದಳಿ ಜಾನಪದ ಕಲೆಯನ್ನು ಉಳಿಸಿಕೊಂಡು ಬಂದಿರುವ ಹಿರಿಯ
  • ವೆಂಕಪ್ಪ ಅಂಬಾಜಿ ಸುಗತೇಕರ್​ರನ್ನು ಗೊಂದಳಿ ಭೀಷ್ಮ ಎಂದೇ ಕರೆಯುತ್ತಾರೆ

ಬಾಗಲಕೋಟೆಯ ಗೊಂದಳಿ ಕಲಾವಿದನಿಗೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸತಿ ದೊರೆತಿದೆ.ಬಾಗಲಕೋಟೆಯ ಗೊಂದಳಿ ಕಲಾವಿದ ವೆಂಕಪ್ಪ ಸುಗತೇಕರ್ ಅವರಿಗೆ ಈಗಾಗಲೇ ಅನೇಕ ಪ್ರಶಸ್ತಿಗಳು ಬಂದಿವೆ. ಈ ಹಿಂದೆ ಮನ್​ ಕಿ ಬಾತ್​ನಲ್ಲಿ ಕೂಡ ಮೋದಿ ಅವರ ಬಗ್ಗೆ ಮಾತನಾಡಿದ್ದರು. ಗೊಂದಳಿ ಜಾನಪದ ಹಾಡು ಹಾಡುವುದರಲ್ಲಿ ಇವರ ಪ್ರಸಿದ್ಧಿಯನ್ನು ಪಡೆದಿದ್ದಾರೆ

ಗೋಮಾಂತು ಸಮಾಜದಲ್ಲಿ ಗುರುತಿಸಿಕೊಮಡಿರುವ ವೆಂಕಪ್ಪ ಅವರನ್ನು ಗೊಂದಳಿ ಜಾನಪದದ ಭೀಷ್ಮ ಎಂದೇ ಕರೆಯುತ್ತಾರೆ. ಇವರು ಸಾವಿರಕ್ಕೂ ಹೆಚ್ಚು ಗೊಂದಳಿ ಪದಗಳನ್ನು ಹಾಡಿದ್ದಾರೆ ಮತ್ತು ಅವುಗಳ ಬಗ್ಗೆ ಕಥೆಗಳನ್ನು ಹೇಳಿದ್ದಾರೆ. ಹೊಸ ಯುವಕರಲ್ಲಿ ಶಿಸ್ತು, ಆಧ್ಯಾತ್ಮ, ಹಿರಿಯರಿಗೆ ನೀಡಬೇಕಾದ ಗೌರವ ಗುರುವಿನ ಮೌಲ್ಯ ಇವುಗಲ ಬಗ್ಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳುತ್ತಾರೆ.
ವೆಂಕಪ್ಪ ಸುಗತೇಕರ್ ಅವರು ಇಲ್ಲಿಯವರೆಗೂ ಸುಮಾರು 1 ಸಾವಿರಕ್ಕೂ ಹೆಚ್ಚು ಜನರಿಗೆ ಗೊಂದಳಿ ಜಾಪದ ಕಲೆಯ ಬಗ್ಗೆ ಉಚಿತವಾಗಿ ಜ್ಞಾನ ನೀಡಿದ್ದಾರೆ. ಹಿಂದುಳಿದ ವರ್ಗದಿಂದ ಬಂದಿರುವ ವೆಂಕಪ್ಪ ಅವರು ಇಷ್ಟೆಲ್ಲಾ ಜನಪ್ರಿಯತೆ ಇದ್ದರೂ ಕೂಡ ತುಂಬಾ ಸರಳವಾಗಿ ಜನರೊಂದಿಗೆ ಬೆರೆಯುತ್ತಾ ಇರುತ್ತಾರೆ.

ಇದನ್ನೂ ಓದಿ:ಮೂವರು ಕನ್ನಡಿಗರು ಸೇರಿ 93 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ

ಸದ್ಯ ಇವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಸಂತಸಗೊಂಡಿದ್ದು ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದ ಹಿನ್ನೆಲೆ ಈಗಾಗಲೇ ಬೆಳಗಾವಿಯ ಮೂಲಕ ದೆಹಲಿಗೆ ತೆರಳಿದ್ದಾರೆ. ರಾತ್ರಿ 9 ಗಂಟೆಗೆ ದೆಹಲ್ಲಿರುತ್ತಾರೆ.

publive-image

ವೆಂಕಪ್ಪ ಅವರು ಆಕಾಶವಾನಿಯಲ್ಲಿ 52 ಬಾರಿ ಹಾಗೂ ದೂರದರ್ಶನದಲ್ಲಿ 18 ಬಾರಿ ಗೊಂದಳಿ ಜಾನಪದ ಗೀತೆಗಳನ್ನು ಹಾಡಿದ್ದಾರೆ ಅಂತಾರಾಷ್ಟ್ರೀಯ ಸಂಗೀತ ಸಮ್ಮೇಳನ ವಾರಂಗಲ್ಸ್​​ ಆಂಧ್ರಪ್ರದೇಶದಲ್ಲಿಯೂ ತಮ್ಮ ಪ್ರದರ್ಶನ ನೀಡಿದ್ದಾರೆ. ರಾಷ್ಟ್ರೀಯ ಯುವಜನೋತ್ಸವ ಮಂಗಳೂರು, ರಾಷ್ಟ್ರೀಯ ನಾಟಕೋತ್ಸವ ಮೈಸೂರು, ವಿಶ್ವ ಕನ್ನಡ ಸಾಹಿತ್ಯ ಸಮ್ಮೆಳನ ಬೆಳಗಾವಿ, ಅಖಿಲ್ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೋಳ, ವಿಶ್ವಜಾನಪದ ದಿನಾಚರಣೆ, ಆದಿವಾಸಿ ಬುಡಕಟ್ಟು ಜನಾಂಗದ ಕಾರ್ಯಕ್ರಮ ನವದೆಹಲಿ, ಶಿವರಾತ್ರಿ ಉತ್ಸವ ಸೋಲಾಪೂರ ಹೀಗೆ ಹಲವಾರು ಕಡೆ ತಮ್ಮ ಜಾನಪದ ಹಾಡಿನ ಸೊಗಡನ್ನು ಹರಡಿದ್ದಾರೆ.

publive-image

ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಆನೆಗೊಂದಿ ಉತ್ಸವ. ಕದಂಬ ಉತ್ಸವ, ಧಾರವಾಡ ಉತ್ಸವ, ಕಿತ್ತೂರು ಉತ್ಸವ, ಲಕ್ಕುಂಡಿ ಉತ್ಸವ, ರಾಯರ ಉತ್ಸವ ಮಂತ್ರಾಲಯ, ರನ್ನ ಉತ್ಸವ, ಚಾಲುಕ್ಯ ಉತ್ಸವ, ಕರಾವಳಿ ಉತ್ಸವ, ಸಿದ್ದೇಶ್ವರ ಕಾರ್ಯಕ್ರಮ ವಿಜಯಪೂರ, ಬೀದರ ಉತ್ಸವ. ಗಡಿನಾಡು ಉತ್ಸವ ಕಾಸರಗೂಡು ಹೀಗೆ ಹಲವಾರು ಕಾರ್ಯಕ್ರಮಗಳನ್ನು ರಾಜ್ಯ ಹಾಗೂ ಬೇರೆ ಬೇರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ನವದೆಹಲಿ, ಕೇರಳ, ಆಂಧ್ರಪ್ರದೇಶದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment