ಕೆಕೆಆರ್​ಗೆ ಬಿಗ್​​ ಶಾಕ್​ ಕೊಟ್ಟ 23 ಕೋಟಿ ದುಬಾರಿ ಆಟಗಾರ; ಐಪಿಎಲ್​ನಿಂದ ಸ್ಟಾರ್​ ಪ್ಲೇಯರ್​ ಔಟ್​​

author-image
Ganesh Nachikethu
Updated On
KKR vs SRH; ಗಂಭೀರ್ ಚಾಣಕ್ಷತನ, ಕ್ಯಾಪ್ಟನ್ ಕಮಿನ್ಸ್​ ಬುದ್ಧಿವಂತಿಕೆ.. 2 ತಂಡದ ಬಲಾಬಲ ಏನು? ​
Advertisment
  • ಬಹುನಿರೀಕ್ಷಿ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್
  • ಈ ಮುನ್ನವೇ ಕೆಕೆಆರ್​ಗೆ ಕೈ ಕೊಟ್ಟ ದುಬಾರಿ ಆಟಗಾರ
  • ಬರೋಬ್ಬರಿ 23.75 ಕೋಟಿ ನೀಡಿ ಖರೀದಿ ಮಾಡಿದ್ದ ಕೆಕೆಆರ್​​

ಬಹುನಿರೀಕ್ಷಿ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಮುನ್ನವೇ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಸದ್ಯ ಭಾರತದಲ್ಲಿ ದೇಶೀಯ ಟೂರ್ನಿಗಳು ನಡೆಯುತ್ತಿವೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್​ ಆಟಗಾರರು ಕಣಕ್ಕಿಳಿದಿದ್ದಾರೆ. ಎಲ್ಲರೂ ದೇಶೀಯ ಫಾರ್ಮೆಟ್‌ನಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಇದರ ಮಧ್ಯೆ ಮಧ್ಯಪ್ರದೇಶ ಹಾಗೂ ಕೇರಳ ಪಂದ್ಯ ನಡೆಯುತ್ತಿದ್ದಾಗ ಸ್ಟಾರ್​ ಪ್ಲೇಯರ್​ ಒಬ್ಬರ ಗಾಯಕ್ಕೆ ತುತ್ತಾಗಿದ್ದಾರೆ. ಇದು ಕೆಕೆಆರ್‌ ಆತಂಕ ಹೆಚ್ಚಿಸಿದೆ. ಆ ಪ್ಲೇಯರ್ ಮತ್ಯಾರು ಅಲ್ಲ, ವೆಂಕಟೇಶ್‌ ಅಯ್ಯರ್.

ವೆಂಕಟೇಶ್​ ಅಯ್ಯರ್​ ಐಪಿಎಲ್​ ಆಡೋದು ಡೌಟ್​

ಇತ್ತೀಚೆಗೆ ನಡೆದ ಐಪಿಎಲ್​ ಮೆಗಾ ಹರಾಜಿನಲ್ಲಿ ಸ್ಟಾರ್​​ ಆಲ್​ರೌಂಡರ್​ ವೆಂಕಟೇಶ್‌ ಅಯ್ಯರ್‌ ಜಾಕ್‌ಪಾಟ್‌ ಹೊಡೆದಿದ್ದರು. ಇವರನ್ನು ಕೋಲ್ಕತ್ತಾ ನೈಟ್‌ ರೈಡರ್ಸ್‌ ಬರೋಬ್ಬರಿ 23.75 ಕೋಟಿ ನೀಡಿ ಖರೀದಿ ಮಾಡಿದೆ. ಇವರು ಕೇರಳ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಅಯ್ಯರ್‌ ಬಲಗಾಲು ಟ್ವಿಸ್ಟ್ ಆಗಿದೆ. ಹೀಗಾಗಿ ಇವರು ಐಪಿಎಲ್​ ಆಡೋದು ಡೌಟ್​​ ಎಂದು ತಿಳಿದು ಬಂದಿದೆ.

ಅಸಲಿಗೆ ಆಗಿದ್ದೇನು?

ಬ್ಯಾಟ್ ಬೀಸುವಾಗಲೇ ಅಯ್ಯರ್‌ ನೋವಿನಿಂದ ಮೈದಾನದಿಂದ ಹೊರ ನಡೆದರು. ರಿಟೈರ್ಡ್‌ ಹರ್ಟ್‌ ಆಗಿ ಫಿಜಿಯೋ ಸಹಾಯದಿಂದ ಮೈದಾನ ತೊರೆದರು. ವೆಂಕಟೇಶ್ ಅಯ್ಯರ್‌ ಡ್ರೆಸ್ಸಿಂಗ್‌ ರೂಮ್‌ನಲ್ಲೇ ಒಂದು ಕಾಲಿಗೆ ಪ್ಯಾಡ್ ಕಟ್ಟಿಕೊಂಡು ಚೇರ್​ ಮೇಲೆ ಕೂತಿದ್ದು, ಇದು ನಿಜಕ್ಕೂ ಕೆಕೆಆರ್ ಅಭಿಮಾನಿಗಳ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿಸಿದೆ.

ಇದನ್ನೂ ಓದಿ:ಗೋಲ್ಡ್ ಲೋನ್​​​ ಪಡೆಯೋ ಮುನ್ನ ಎಚ್ಚರ! ಯಾವುದೇ ಕಾರಣಕ್ಕೂ ಈ ತಪ್ಪು ಮಾಡಲೇಬೇಡಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment