/newsfirstlive-kannada/media/post_attachments/wp-content/uploads/2024/11/VENKATESH_IYER.jpg)
ಐಪಿಎಲ್ ಸೀಸನ್​-18ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಕಪ್ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಆರ್​ಸಿಬಿ, ಈಗಾಗಲೇ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಕೆಲ ತಂಡಗಳು ನಾಯಕನ ನೇಮಕದಲ್ಲಿ ಬ್ಯುಸಿಯಾಗಿವೆ. ಯಾರ್​ ಆಗ್ತಾರೆ ಕ್ಯಾಪ್ಟನ್ ಎಂಬ ಬಿಸಿಬಿಸಿ ಚರ್ಚೆಗಳೂ ನಡೆಯುತ್ತಿವೆ.
ಹಾಲಿ ಚಾಂಪಿಯನ್ಸ್​ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ವಿಚಾರದಲ್ಲಿ ಮಾತ್ರ, ಈತನೇ ಕ್ಯಾಪ್ಟನ್ ಆಗ್ತಾನೆ ಅನ್ನೋ ಡಿಸಿಷನ್​ಗೆ ಬರಕ್ಕೆ ಹಾಕ್ತಿರಲಿಲ್ಲ. ಆದ್ರೀಗ ಕೆಕೆಆರ್ ತಂಡದ ಕ್ಯಾಪ್ಟನ್ಸಿ ಬ್ಯಾಟಲ್​ಗೂ ಕ್ಲೈಮ್ಯಾಕ್ಸ್​ ತಲುಪಿದೆ.
ಕೆಕೆಆರ್ ಕ್ಯಾಪ್ಟನ್ ಯಾರ್ ಆಗ್ತಾರೆ? ಮೆಗಾ ಹರಾಜು ಮುಗಿದಿದ್ದೆ ತಡ ಇಂಥದೊಂದು ಪ್ರಶ್ನೆ ಕೆಕೆಆರ್ ಪಾಳಯದಲ್ಲಿ ಎದುರಾಗಿತ್ತು. ಇದಕ್ಕೆ ಫುಲ್​ ಸ್ಟಾಪ್ ಹಾಕುವ ಸಮಯ ಬಂದಂತಿದೆ. ಕ್ಯಾಪ್ಟನ್ಸಿ ಬ್ಯಾಟಲ್​ನಲ್ಲಿ ವೆಂಕಟೇಶ್​​ ಅಯ್ಯರ್​ ಗೆದ್ದಂತಿದೆ. ಈ ಬಗ್ಗೆ ಸ್ಟಾರ್​ ಆಲ್​ರೌಂಡರ್​​ ವೆಂಕಟೇಶ್​ ಅಯ್ಯರ್​ ಸ್ಫೋಟಕ ಸುಳಿವು ನೀಡಿದ್ದಾರೆ.
ಏನಂದ್ರು ಅಯ್ಯರ್​​?
ಕೆಕೆಆರ್​ ತಂಡ ನನ್ನ ನಂಬಿಕೆ ಇಟ್ಟು ಖರೀದಿ ಮಾಡಿದೆ. ಅವರು ನನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋದು ನನ್ನ ಜವಾಬ್ದಾರಿ. ನನಗೆ ಕ್ಯಾಪ್ಟನ್ಸಿ ಕೊಟ್ಟರೆ ಖಂಡಿತಾ ಮಾಡುತ್ತೇನೆ. ಅದು ನನ್ನ ಅದೃಷ್ಟ ಎಂದರು ವೆಂಕಟೇಶ್​ ಅಯ್ಯರ್​​.
ಮೆಗಾ ಹರಾಜು ಮುಗಿದಿದ್ದೆ ತಡ, ಯಾರ್​ ಯಾವ ತಂಡದ ನಾಯಕರಾಗ್ತಾರೆ ಅನ್ನೋ ಚಿತ್ರಣ ಸಿಕ್ಕಾಗಿತ್ತು. ಕ್ರಿಕೆಟ್​ ವಿಶ್ಲೇಷಕರು, ಪಂಡಿತರು ಸಹಿತ ಪ್ರತಿ ತಂಡದ ಭವಿಷ್ಯ ನುಡಿದಿದ್ದರು. ಕೊಲ್ಕತ್ತಾ ತಂಡದ ನಾಯಕತ್ವದ ವಿಚಾರದಲ್ಲಿ ಕ್ಲಾರಿಟಿಯೇ ಇರಲಿಲ್ಲ. ಇದಕ್ಕೆ ಕಾರಣ 23.75 ಕೋಟಿಯ ಒಡೆಯ ವೆಂಟಕೇಶ್​ ಅಯ್ಯರ್​​ಗೆ ನಾಯಕತ್ವದ ಸಿಗಬಹುದು ಅನ್ನೋ ಅಂದಾಜು ಒಂದಾದ್ರೆ, ಅನ್​ಸೋಲ್ಡ್​ ಟು ಸೋಲ್ಡ್​ ಆಗಿದ್ದ ಅಜಿಂಕ್ಯಾ ರಹಾನೆಗೆ ನಾಯಕತ್ವ ಯಾಕೆ ನೀಡ್ತಾರೆ ಅನ್ನೋ ಲೆಕ್ಕಾಚಾರ. ರಹಾನೆ ಲೆಕ್ಕಾಚಾರಗಳೆಲ್ಲ ಸುಳ್ಳಾಗಿದ್ದು, ಅಯ್ಯರ್​ಗೆ ಕ್ಯಾಪ್ಟನ್ಸಿ ಕನ್ಫರ್ಮ್​ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us