newsfirstkannada.com

4 ವರ್ಷದಲ್ಲಿ ಹಂತ ಹಂತವಾಗಿ ತಲೆ ಎತ್ತಿದ ರಾಮ ಮಂದಿರ; ಪೂರ್ಣಗೊಳ್ಳಲು ಎಷ್ಟು ವರ್ಷ ಬೇಕು?

Share :

Published January 23, 2024 at 6:00am

    ಮಂದಿರ ನಿರ್ಮಾಣಕ್ಕೆ ಕಬ್ಬಿಣ, ಉಕ್ಕು ಬಳಸಿಲ್ಲ ಗೊತ್ತಾ?

    2.7 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿದ ರಾಮ ಮಂದಿರ

    57 ಸಾವಿರ ಚ. ಅಡಿಯಲ್ಲಿ 3 ಮಹಡಿ ಮಂದಿರ ನಿರ್ಮಾಣ

ಭರತ ಖಂಡದಲ್ಲಿ ಭವ್ಯವಾದ ರಾಮ ಮಂದಿರ 500 ವರ್ಷಗಳ ಬಳಿಕ ತಲೆ ಎತ್ತಿ ನಿಂತಿದೆ. ಹೊಸ ರಾಮ ಮಂದಿರದ ನಿರ್ಮಾಣ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಕೇವಲ 4 ವರ್ಷಗಳಲ್ಲಿ ಹಂತ ಹಂತವಾಗಿ ತಲೆ ಎತ್ತಿದ ಮಂದಿರ ನಿರ್ಮಾಣದ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

4 ವರ್ಷ.. ಹಂತ ಹಂತವಾಗಿ ತಲೆ ಎತ್ತಿತು ರಾಮಾಲಯ

2021 ರಿಂದ 2024 ಕೇವಲ 4 ವರ್ಷಗಳಲ್ಲಿ ಇಂದ್ರಲೋಕವನ್ನೇ ನಾಚಿಸುವಂಥ ಅದ್ಭುತವಾದ ಮಂದಿರ ತಲೆ ಎತ್ತಿದ್ದು ಸಾಮಾನ್ಯದ ಮಾತಾಲ್ಲ. ಸಿಡಿಲಿಗೂ ಬೆಚ್ಚದ ಭೂಕಂಪಕ್ಕೂ ನಡುಗದ ಶತಮಾನಗಳು ಉರುಳಿದರೂ ಗಟ್ಟಿಯಾಗಿ ನಿಲ್ಲುವಂಥ ಮಂದಿರವನ್ನು ಕಟ್ಟಲಾಗಿದೆ. 4 ವರ್ಷಗಳಲ್ಲಿ ಮಂದಿರವನ್ನು ಹಂತ ಹಂತವಾಗಿ ಹೇಗಿ ನಿರ್ಮಾಣವಾಯ್ತು ಎಂಬ ಮಾಹಿತಿ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಒಟ್ಟಾರೆ 2.7 ಎಕರೆ ವಿಸ್ತೀರ್ಣ ಇರುವ ದೇವಸ್ಥಾನದ ಆವರಣದಲ್ಲಿ 2021ರ ಜನವರಿರಿಂದ ದೇಗುಲ ನಿರ್ಮಾಣದ ಸ್ಥಳಲ್ಲಿ ಬುನಾದಿಗಾಗಿ ಮಣ್ಣು ಅಗೆಯಲಾಯ್ತು. 2021ರ ಮಾರ್ಚ್​ನಲ್ಲಿ ಮಣ್ಣು ತೆಗೆಯುವ ಕಾರ್ಯ ಮುಕ್ತಾಯ ಆಯಿತು. ಸುಮಾರು 15 ಮೀ. ಆಳದವರೆಗೆ ಮಣ್ಣು ತೆಗೆಯಲಾಗಿತ್ತು. 2021ರ ಏಪ್ರಿಲ್​ ತಿಂಗಳಿಂದ ಬುನಾದಿ ಸ್ಥಳಕ್ಕೆ ತಯಾರಿಸಲಾದ ಮಣ್ಣು ತುಂಬಿಸಲು ಆರಂಭ ಮಾಡಲಾಯ್ತು. 12- 14 ಮೀ.ವರೆಗೆ ತಯಾರಿಸಲಾದ ಮಣ್ಣು ತುಂಬಲಾಯ್ತು. 3 ಪದರಗಳಲ್ಲಿ 1.5 ಮೀಟರ್‌ ದಪ್ಪನೆಯ ಲೋಹ ರಹಿತ ಕಾಂಕ್ರೀಟ್ ಬಳಕೆ ಮಾಡಲಾಗಿದೆ.

2021ರ ಸೆಪ್ಟಂಬರ್​ನಿಂದ ಮಂದಿರದ ಕಟ್ಟಡಕ್ಕೆ ಬಲವಾದ ನೆಲಗಟ್ಟು ಹಾಕುವ ಕಾರ್ಯ ಆರಂಭ. ದಕ್ಷಿಣ ಭಾರತದಿಂದ 6.3 ಮೀ. ದಪ್ಪನೆಯ ಗಟ್ಟಿಮುಟ್ಟಾದ ಗ್ರಾನೈಟ್ ಕಲ್ಲು ತರಿಸಿ ಹಾಕಲಾಗಿದೆ. 2022ರ ಜನವರಿಯಲ್ಲಿ ದೇಗುಲದ ಸಾಲು ಸ್ತಂಭಗಳನ್ನು ಅಳವಡಿಸುವ ಕಾರ್ಯ ಶುರುವಾಯ್ತು. ನೆಲ ಮಹಡಿಯಲ್ಲಿ 160 ಸ್ತಂಭ, ಮೊದಲ ಮಹಡಿಯಲ್ಲಿ 132. ಎರಡನೇ ಮಹಡಿಯಲ್ಲಿ 74 ಸ್ತಂಭಗಳನ್ನು ಅಳವಡಿಸಲಾಯ್ತು. 2023ರ ಆಗಸ್ಟ್​ ವೇಳೆಗೆ ​ಟೆರಸ್ ಭಾಗ ಮತ್ತು ನೆಲಮಹಡಿ ಕಾಮಗಾರಿ ಪೂರ್ಣವಾಯ್ತು.
ಸುಮಾರು 57 ಸಾವಿರ ಚದರ ಅಡಿಯಲ್ಲಿ 3 ಮಹಡಿಗಳ ಮಂದಿರ ನಿರ್ಮಾಣ ಮಾಡಲಾಗುತ್ತಿದೆ.

ಇದರಲ್ಲಿ ಈಗಾಗಲೇ ಕೆಳಮಹಡಿ ಪೂರ್ಣಗೊಂಡು, ಇವತ್ತು ಮಂದಿರವನ್ನು ಲೋಕಾರ್ಪಣೆ ಮಾಡಲಾಗಿದೆ. ಮಂದಿರ ನಿರ್ಮಾಣಕ್ಕೆ ಯಾವುದೇ ಕಬ್ಬಿಣ ಅಥವಾ ಉಕ್ಕು ಬಳಸಿಲ್ಲ. ಉತ್ತಮ ಗುಣಮಟ್ಟದ ಗ್ರಾನೈಟ್, ಸ್ಯಾಂಡ್ ಸ್ಟೋನ್, ಮಾರ್ಬಲ್‌ ಬಳಕೆ ಮಾಡಲಾಗಿದೆ. ಕಟ್ಟಡವು ಸಾವಿರಾರು ವರ್ಷ ಬಾಳಿಕೆ ಬರಬೇಕೆಂದು ಈ ರೀತಿ ನಿರ್ಮಾಣ ಮಾಡಲಾಗಿದೆ. ಸದ್ಯ 2 ಮತ್ತು 3ನೇ ಮಹಡಿಯಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಒಳಭಾಗದಲ್ಲಿ ಕೆತ್ತನೆ ಕೆಲಸಗಳು ಬಾಕಿ ಇವೆ. ಇನ್ನು ಗೋಪುರ ನಿರ್ಮಾಣವೂ ಆಗಿಲ್ಲ.. ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆ, ತಾತ್ಕಾಲಿಕವಾದ ಗೋಪುರವನ್ನು ಕಟ್ಟಲಾಗಿದೆ. ಇನ್ನು ಕೆಲವು ವರ್ಷಗಳ ಕಾಲ ನಿರ್ಮಾಣ ಕಾಮಗಾರಿ ನಡೆಯಲಿದೆ. ಅದೇನೆ ಇರಲಿ.. 500 ವರ್ಷಗಳಿಂದ ಭಾರತೀಯರ ಕಾಯುತ್ತಿದ್ದ ಮಂದಿರವೊಂದು ತಲೆ ಎತ್ತಿ ನಿಂತಿದ್ದು ಸಂತಸದ ವಿಷಯ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4 ವರ್ಷದಲ್ಲಿ ಹಂತ ಹಂತವಾಗಿ ತಲೆ ಎತ್ತಿದ ರಾಮ ಮಂದಿರ; ಪೂರ್ಣಗೊಳ್ಳಲು ಎಷ್ಟು ವರ್ಷ ಬೇಕು?

https://newsfirstlive.com/wp-content/uploads/2024/01/AYODHYA-4-1.jpg

Load More