ಲಕ್ಕಿ ಕ್ಯಾಪ್ಟನ್ ರಜತ್..! ಪಾಟೀದಾರ್ ನಾಯಕತ್ವದಲ್ಲಿ RCB ವಾತಾವರಣ ಫುಲ್ ಚೆಂಜ್..!

author-image
Ganesh
Updated On
ರಜತ್ ಪಾಟೀದಾರ್ ಯಾರು.. ಅಂದು RCB ಸೇರಲು ಅದೃಷ್ಟ ಹೇಗೆ ಒಲಿದಿತ್ತು ಗೊತ್ತಾ..?
Advertisment
  • 2 ಪಂದ್ಯದಲ್ಲಿ ಗೆಲುವು, ರಜತ್​​ಗೆ ಲಕ್ಕಿ ಕ್ಯಾಪ್ಟನ್​ ಪಟ್ಟ
  • ದೊಡ್ಡ ಫ್ರಾಂಚೈಸಿಗೆ ಸಾರಥಿ, ಒತ್ತಡದಿಂದ ದೂರ..!
  • ಬ್ರಿಲಿಯಂಟ್ ಟ್ಯಾಕ್ಟಿಕಲ್ ಕ್ಯಾಪ್ಟನ್ ಪಾಟೀದಾರ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕ ರಜತ್ ಪಾಟೀದಾರ್, ಎರಡೇ ಎರಡು ಪಂದ್ಯಗಳಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಬಲಿಷ್ಟ ಕೆಕೆಆರ್ ಮತ್ತು ಸಿಎಸ್​​ಕೆ ಮಣಿಸಿರುವ ಪಾಟೀದಾರ್ ಅದ್ಭುತವಾಗಿ ತಂಡ ಮುನ್ನಡೆಸಿದ್ದಾರೆ. ಆರ್​ಸಿಬಿ ಅಭಿಮಾನಿಗಳಂತೂ ಪಾಟೀದಾರ್ ಲಕ್ಕಿ ಕ್ಯಾಪ್ಟನ್ ಎನ್ನುತ್ತಿದ್ದಾರೆ.

ರಾಹುಲ್ ದ್ರಾವಿಡ್​​ನಿಂದ ಹಿಡಿದು ಫಾಫ್ ಡುಪ್ಲೆಸಿವರೆಗೂ ಅದೆಷ್ಟೋ ನಾಯಕರು ಆರ್​ಸಿಬಿಯನ್ನು ಮುನ್ನಡೆಸಿದ್ರು. ಆದರೆ ಯಾವ ನಾಯಕನೂ, ಆರ್​ಸಿಬಿಗೆ ಒಂದೇ ಒಂದೇ ಟೈಟಲ್ ಗೆಲ್ಲಿಸಿ ಕೊಡಲಿಲ್ಲ. ಕೆವಿನ್ ಪೀಟರ್​ಸನ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ, ಶೇನ್ ವಾಟ್ಸನ್.. ಹೀಗೆ ಘಟಾನುಘಟಿ ಆಟಗಾರರು, ಆರ್​ಸಿಬಿ ತಂಡದ ಸಾರಥ್ಯವಹಿಸಿಕೊಂಡ್ರು.

ಇದನ್ನೂ ಓದಿ: ‘ಕೊಹ್ಲಿ ವಿರುದ್ಧ ಅದೆಷ್ಟೋ ಸಲ ಬೌಲಿಂಗ್ ಮಾಡಿದ್ದೇನೆ, ಆದರೆ..’ ಪಂದ್ಯಕ್ಕೂ ಮೊದಲೇ ಸಿರಾಜ್ ಸ್ಫೋಟಕ ಹೇಳಿಕೆ

publive-image

ಕಪ್ ಗೆಲ್ಲಿಸಿಕೊಡಲು ಸಾಧ್ಯವಾಲಿಲ್ಲ. ಆದ್ರೀಗ ಬೆಂಗಳೂರು ತಂಡದ ನೂತನ ನಾಯಕ ರಜತ್ ಪಾಟೀದಾರ್, ಆರ್​ಸಿಬಿಗೆ ಕಪ್ ಗೆಲ್ಲಿಸುವ ಭರವಸೆ ಮೂಡಿಸಿದ್ದಾರೆ. ಅದು ಅವರ ನಾಯಕತ್ವದಿಂದ. ರಜತ್ ಪಾಟೀದಾರ್ ಆರ್​ಸಿಬಿಯ ಲಕ್ಕಿ ಕ್ಯಾಪ್ಟನ್ ಅಂತ ಕ್ರಿಕೆಟ್ ಪಂಡಿತರು ಬಿಂಬಿಸುತ್ತಿದ್ದಾರೆ. 2 ಪಂದ್ಯಗಳಲ್ಲೇ ಪಾಟೀದಾರ್ ನಾಯಕತ್ವಕ್ಕೆ, ದಿಗ್ಗಜರೇ ಫಿದಾ ಆಗಿದ್ದಾರೆ.

ದೊಡ್ಡ ಫ್ರಾಂಚೈಸಿಗೆ ಸಾರಥಿ, ಒತ್ತಡದಿಂದ ದೂರ!

17 ವರ್ಷಗಳಿಂದ ಆರ್​ಸಿಬಿ, ತನ್ನದೇ ಆದ ದೊಡ್ಡ ಫ್ಯಾನ್​ ಕ್ಲಬ್​ ಹೊಂದಿದೆ. ಹಾಗಾಗಿ ಆರ್​ಸಿಬಿಯಂತಹ ದೊಡ್ಡ ಫ್ರಾಂಚೈಸಿಯನ್ನ ಮುನ್ನಡೆಸೋದು ಅಷ್ಟು ಸುಲಭವಲ್ಲ. ಇದೇ ಮೊದಲ ಬಾರಿಗೆ ಆರ್​ಸಿಬಿ ತಂಡದ ಸಾರಥ್ಯವಹಿಸಿಕೊಂಡಿರುವ ಪಾಟೀದಾರ್, ಅನುಭವಿ ನಾಯಕನಂತೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಒತ್ತಡದಲ್ಲೂ ಕೂಲ್ ಅಂಡ್​​​​​​​ ಕಾಮ್ ಆಗಿ ಸಂದರ್ಭಕ್ಕೆ ತಕ್ಕಂತೆ ರಿಯಾಕ್ಟ್​ ಮಾಡ್ತಿದ್ದಾರೆ.
ಬ್ರಿಲಿಯಂಟ್ ಟ್ಯಾಕ್ಟಿಕಲ್ ಕ್ಯಾಪ್ಟನ್ ಪಾಟೀದಾರ್

ಇದನ್ನೂ ಓದಿ: GT ವಿರುದ್ಧ ಆರ್​ಸಿಬಿಗೆ ಬಿಗ್​ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!

publive-image

ಸೈಯ್ಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಪಾಟೀದಾರ್, ಮಧ್ಯಪ್ರದೇಶ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. ಇದಕ್ಕೆ ಕಾರಣ ಆನ್​​ಫೀಲ್ಡ್​ನಲ್ಲಿ ಪಾಟೀದಾರ್​​ರ ಬ್ರಿಲಿಯಂಟ್ ಟ್ಯಾಕ್ಟಿಕ್ಸ್. ಆರ್​ಸಿಬಿ ನಾಯಕನಾಗಿಯೂ ಪಾಟೀದಾರ್, ಇದೇ ಫಾರ್ಮುಲಾವನ್ನ ಮುಂದುವರೆಸುತ್ತಿದ್ದಾರೆ. ಪಂದ್ಯದ ವೇಳೆ ಸಾಲಿಡ್ ಗೇಮ್​ಪ್ಲಾನ್ ಮಾಡೋ ಆರ್​ಸಿಬಿ ಸಾರಥಿ, ತಂಡವನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.

ಡ್ರೆಸಿಂಗ್​​ ರೂಮ್​ನಲ್ಲಿ ಉತ್ತಮ ವಾತಾವರಣ..!

ರಜತ್ ಪಾಟೀದಾರ್ ಆರ್​ಸಿಬಿ ತಂಡದ ಸಾರಥ್ಯವಹಿಸಿಕೊಂಡ ಮೇಲೆ ತಂಡದ ಚರಿಷ್ಮಾನೇ ಬದಲಾಯ್ತು. ಸೀನಿಯರ್ಸ್, ಜ್ಯೂನಿಯರ್ಸ್ ಮತ್ತು ಹೊಸಬರು ಅನ್ನೋ ಕಾನ್ಸೆಪ್ಟ್ ಮಾಯಾವಾಯ್ತು. ಡ್ರೆಸಿಂಗ್​​ನಲ್ಲಿ ರೂಮ್​ನಲ್ಲಿ ಎಲ್ಲರೂ ಒಂದೇ ಅನ್ನೋ ಮಂತ್ರ ಶುರುವಾಯ್ತು. ಇದ್ರಿಂದ ಉತ್ತಮ ವಾತಾವರಣ ಸೃಷ್ಠಿಯಾಗಿದ್ದಲ್ಲದೇ ಆಟಗಾರರ ಉತ್ಸಾಹ ಕೂಡ ಹೆಚ್ಚಾಗಿದೆ.

ಕೋಚ್-ಕ್ಯಾಪ್ಟನ್ ಇಬ್ಬರ​​ ಮೈಂಡ್​​ಸೆಟ್ ಒಂದೇ..!

ನೋ ಡೌಟ್.. ಌಂಡಿ ಫ್ಲವರ್​​ ಅನುಭವಿ ಮತ್ತು ಶ್ರೇಷ್ಠ ಕೋಚ್. ಬ್ಯಾಕ್​ ಎಂಡ್​​​ನಲ್ಲಿ ಫ್ಲವರ್, ಫೈಯರ್​ ಆಗೋ ಅಂಥಾ​ ಸ್ಟ್ರಾಟಜಿಗಳನ್ನೇ ರೂಪಿಸುತ್ತಾರೆ. ಆನ್​ಫೀಲ್ಡ್​ನಲ್ಲಿ ಕ್ಯಾಪ್ಟನ್, ಕೋಚ್ ಪ್ಲಾನ್​ಗಳನ್ನ ಮಿಸ್ ಮಾಡದೆ ಎಕ್ಸಿಕ್ಯೂಟ್ ಮಾಡಿದ್ರೆ, ಫಲ ಗ್ಯಾರೆಂಟಿ. ಹಾಗೇ ಕೋಚ್ ಮತ್ತು ಕ್ಯಾಪ್ಟನ್ ಒಂದೇ ಮೈಂಡ್​ಸೆಟ್​​ನಲ್ಲಿ ಕೆಲಸ ಮಾಡಿದ್ರೆ ಸಕ್ಸಸ್​​​​​​ ಸಿಗುತ್ತೆ. ಇದಕ್ಕೆ ಫ್ಲವರ್ ಮತ್ತು ಪಾಟೀದಾರ್ ಬೆಸ್ಟ್ ಎಕ್ಸಾಂಪಲ್.

17 ವರ್ಷಗಳ ಬಳಿಕ ಚೆನ್ನೈನಲ್ಲಿ ಗೆಲುವು

ರಾಹುಲ್ ದ್ರಾವಿಡ್ ಬಿಟ್ಟರೆ ಆರ್​ಸಿಬಿಯ ಈ ಹಿಂದಿನ ನಾಯಕರಾದ ಕೆವಿನ್ ಪೀಟರ್ಸನ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ ಮತ್ತು ಶೇನ್ ವಾಟ್ಸನ್. ಚೆನ್ನೈನ ಚೆಪಾಕ್​​​​ ಪಿಚ್​ನಲ್ಲಿ ಗೆಲ್ಲಲು ಪರದಾಡಿದ್ರು. ರಜತ್ ಪಾಟೀದಾರ್ ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಚೆನ್ನೈನಲ್ಲಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 17 ವರ್ಷಗಳ ಬಳಿಕ ದಾಖಲೆ ಬರೆದ್ರು.

ಇದನ್ನೂ ಓದಿ: RCB vs GT: ಬೆಂಗಳೂರಲ್ಲೇ ಪಂದ್ಯ, ಹೆಚ್ಚು ಬಾರಿ ಗೆದ್ದ ತಂಡ ಯಾವುದು? ಕಂಪ್ಲೀಟ್​ ಮಾಹಿತಿ..!

publive-image

ಮೊದಲ 2 ಪಂದ್ಯಗಳಲ್ಲೇ ಕ್ಯಾಪ್ಟನ್​​ ಪಾಟೀದಾರ್​ ಎಲ್ಲರ ಮನ ಗೆದ್ದಿದ್ದಾರೆ. ಜೊತೆಗೆ ಆರ್​ಸಿಬಿಯ ಲಕ್ಕಿ ಕ್ಯಾಪ್ಟನ್ ಅನಿಸಿದ್ದಾರೆ. ಈ ಕೂಲ್ ಅಂಡ್ ಕಾಮ್ ಕ್ಯಾಪ್ಟನ್ ಇದೇ ಆಟ ಮುಂದುವರೆಸಿದ್ರೆ, ಆರ್​ಸಿಬಿ ಚೊಚ್ಚಲ ಟ್ರೋಫಿ ಗೆಲ್ಲೋದು ಕಷ್ಟದ ವಿಚಾರವೇನಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment