ಮಂಗಳೂರಿನ ಆಳ ಸಮುದ್ರದಲ್ಲಿ ಮುಳುಗಿದ ದೈತ್ಯ ಹಡಗು.. 6 ಜನ ಸಿಬ್ಬಂದಿ ಏನಾದರು..?

author-image
Ganesh
Updated On
ಮಂಗಳೂರಿನ ಆಳ ಸಮುದ್ರದಲ್ಲಿ ಮುಳುಗಿದ ದೈತ್ಯ ಹಡಗು.. 6 ಜನ ಸಿಬ್ಬಂದಿ ಏನಾದರು..?
Advertisment
  • ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಮಂಜಿ
  • ಕೋಸ್ಟ್​ ಗಾರ್ಡ್​ ಗಸ್ತು ಹಡಗು ವಿಕ್ರಂನಿಂದ ರಕ್ಷಣೆ
  • ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನೀರು ನುಗ್ಗಿ ಮುಳುಗಡೆ

ಮಂಗಳೂರು ಸಮುದ್ರ ತೀರದಿಂದ 60 ನಾಟಿಕಲ್ ಮೈಲಿ ದೂರದಲ್ಲಿರುವ ಆಳ ಸಮುದ್ರದಲ್ಲಿ ಮಂಜಿ (ಹಾಯಿ ಹಡಗು) ಮುಳುಗಡೆಯಾಗಿದೆ. ಎಂಎಸ್‌ವಿ ಸಲಾಮತ್ ಹೆಸರಿನ ಮಂಗಳೂರಿನ ಸರಕು ಸಾಗಣೆ ಮಾಡುವ ಬೃಹತ್ ಮಂಜಿ ಬೋಟ್​, ಲಕ್ಷದ್ವೀಪಕ್ಕೆ ತೆರಳ್ತಿತ್ತು.

ಹಡಗು ಮೇ 12ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು. ಮೇ 18 ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪಬೇಕಾಗಿತ್ತು. ಸಿಮೆಂಟ್ ಹಾಗೂ ಬಿಲ್ಡಿಂಗ್ ನಿರ್ಮಾಣ ಸಾಮಗ್ರಿಯನ್ನು ಹೊತ್ತೊಯ್ಯುತ್ತಿತ್ತು.
ಸಮುದ್ರ ಮಧ್ಯೆ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಹಡಗಿಗೆ ನೀರು ನುಗ್ಗಿ ಬೋಟ್ ಮುಳುಗಡೆ ಆಗಿದೆ. ಹಡಗಿನಲ್ಲಿ ಒಟ್ಟು 6 ಸಿಬ್ಬಂದಿ ಇದ್ದರು. ಅಪಾಯ ಅರಿತ ಅವರು, ಸಣ್ಣ ಡಿಂಗಿ ಬೋಟಿನಲ್ಲಿ ಎಲ್ಲಾ ಪ್ರಯಾಣಿಕರು ಪ್ರಾಣ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ದಾರುಣ ಘಟನೆ.. ಸ್ಥಳದಲ್ಲೇ ಜೀವ ಬಿಟ್ಟ ಅಮ್ಮ-ಮಗ, ಆಸ್ಪತ್ರೆಯಲ್ಲಿ ಅಪ್ಪ ನಿಧನ

publive-image

ವಿಚಾರ ತಿಳಿಯುತ್ತಿದ್ದಂತೆಯೇ ಇಂಡಿಯನ್ ಕೋಸ್ಟ್ ಗಾರ್ಡ್ ಆಳ ಸಮುದ್ರಕ್ಕೆ ತೆರಳಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನ ರಕ್ಷಣೆ ಮಾಡಿದೆ. ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್​ನ ‘ವಿಕ್ರಂ ಶಿಪ್’ ಮೂಲಕ ರಕ್ಷಣಾ ಕಾರ್ಯ. ಇಸ್ಮಾಯಿಲ್ ಶರೀಫ್, ಅಲೆಮನ್ ಅಹ್ಮದ್ ಬಾಯ್ ಗಾವ್ಡ, ಕಾಕಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಸಂ ಇಸ್ಮಾಯಿಲ್ ಮತ್ತು ಅಜ್ಮಲ್ ಅವರನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ದ್ರೋಹ ಬಗೆದವ್ರಿಗೆ ಪಾಠ; ದೇಶದ ವಿಮಾನ ನಿಲ್ದಾಣಗಳಿಂದ ಟರ್ಕಿ ಕಂಪನಿ ಕಿಕ್​ಔಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment