/newsfirstlive-kannada/media/post_attachments/wp-content/uploads/2025/01/Padma-Award-1.jpg)
ನವದೆಹಲಿ: 2025ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಗಿದೆ. ಕೇಂದ್ರ ಸರ್ಕಾರ ಈ ಬಾರಿ 139 ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧಾರ ಮಾಡಿದೆ. 7 ಪದ್ಮವಿಭೂಷಣ, 19 ಪದ್ಮಭೂಷಣ, 113 ಪದ್ಮಶ್ರೀ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಕರ್ನಾಟಕದ ಇಬ್ಬರು ಸಾಧಕರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಿರಿಯ ನಟ ಅನಂತ್​ನಾಗ್​ ಹಾಗೂ ಶಿಕ್ಷಣ ತಜ್ಞ ಎ.ಸೂರ್ಯಪ್ರಕಾಶ್​ಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಪ್ರಸಾರ ಭಾರತಿ ಮಾಜಿ ಅಧ್ಯಕ್ಷ, ಪತ್ರಕರ್ತ ಎ.ಸೂರ್ಯಪ್ರಕಾಶ್ ಅವರು ಹಾಸನ ಜಿಲ್ಲೆ ಅರಕಲಗೂಡಿನವರು. ಕರ್ನಾಟಕದ ಲಕ್ಷ್ಮಿನಾರಾಯಣನ್ ಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗುತ್ತಿದೆ.
ಇದನ್ನೂ ಓದಿ: ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ್​ಗೆ ಪದ್ಮಶ್ರೀ.. ಇವರಿಗೆ ಗೊಂದಳಿ ಭೀಷ್ಮ ಅಂತ ಕರೆಯುವುದೇಕೆ?
ಕರ್ನಾಟಕದ 6 ಸಾಧಕರಿಗೆ ಪದ್ಮಶ್ರೀ ಗೌರವ
1. ಬಾಗಲಕೋಟೆಯ ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ
2. ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ
3. ಕಲಬುರಗಿ ಮೂಲದ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ
4. ಕಲಾವಿದ ರಘು ಹಾಸನ್​
5. ಉದ್ಯಮಿ ಪ್ರಕಾಶ್ ಪ್ರಶಾಂತ್​
6. ಸಂಗೀತ ನಿರ್ದೇಶಕ ರಿಕ್ಕಿ ಕೇಜ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ