Advertisment

ದ್ವಾರಕೀಶ್ ಆರೋಗ್ಯದಲ್ಲಿ ಏನಾಗಿತ್ತು..? ಸಾಯುವ ಕೊನೇ ಕ್ಷಣಗಳು ಹೇಗಿದ್ದವು..?

author-image
Ganesh
Updated On
ಇಂಜಿನಿಯರಿಂಗ್ ಮುಗಿಸಿದ್ದ ದ್ವಾರಕೀಶ್ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದೇಗೆ?
Advertisment
  • ಪತ್ನಿ ಸಾವನ್ನಪ್ಪಿದ ದಿನವೇ ದ್ವಾರಕೀಶ್ ನಿಧನರಾಗಿದ್ದಾರೆ
  • ಕಳಚಿದ ಕನ್ನಡದ ಹಿರಿಯ ಕೊಂಡಿ, ಗಣ್ಯರಿಂದ ಸಂತಾಪ
  • ತಂದೆಯ ಸಾವಿನ ಬಗ್ಗೆ ಮಗ ಯೋಗೀಶ್ ಹೇಳಿದ್ದೇನು?

ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್​ ಇನ್ನು ನೆನಪು ಮಾತ್ರ. ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ದ್ವಾರಕೀಶ್​ ಇಂದು ಇಹಲೋಕ ತ್ಯಜಿಸಿದ್ದಾರೆ.

Advertisment

ಏನಾಗಿತ್ತು ದ್ವಾರಕೀಶ್​​ಗೆ..?
ದ್ವಾರಕೀಶ್​ ಅವರಿಗೆ 81 ವರ್ಷವಾಗಿತ್ತು. ಅವರು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅವರ ಪುತ್ರ ನೀಡಿದ ಮಾಹಿತಿಯಂತೆ ನಿನ್ನೆಯವರೆಗೆ ಆರಾಮಾಗಿಯೇ ಇದ್ದರು. ರಾತ್ರಿ ವೇಳೆ ಲೋಸ್​ ಮೋಷನ್ ಆಗಿತ್ತು. ಪರಿಣಾಮ ರಾತ್ರಿ ಇಡೀ ನಿದ್ರೆ ಮಾಡಿರಲಿಲ್ಲ. ಅದಕ್ಕೆ ಬೆಳಗ್ಗೆ ಎದ್ದವರು, ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ಮಲಗಿದ್ದರು. 10 ಗಂಟೆಗೆ ಏಳ್ಸು ಅಂದಿದ್ದರು, ನಾನು‌ 9.45 ಎಬ್ಬಿಸಲು ಹೋದೆ, ಆದ್ರೆ ರೆಸ್ಪಾನ್ಸ್ ಇರಲಿಲ್ಲ. ಪಲ್ಸ್ ಚೆಕ್ ಮಾಡಿದೆ. ಪಲ್ಸ್ ಸಿಗಲಿಲ್ಲ. ಚೆಸ್ಟ್ ಕಂಪ್ರೇಶನ್ ಮಾಡೋಕೆ ಟ್ರೈ ಮಾಡಿದ್ವಿ. ಕೂಡಲೇ ಡಾಕ್ಟರ್​ಗೆ ಕಾಲ್ ಮಾಡಿದ್ವಿ, ಅವ್ರು ಬಂದು ಟ್ರೈ ಮಾಡಿದ್ರು. ಅಪ್ಪ ಮತ್ತೆ ಮೇಲೇಳಲೇ ಇಲ್ಲ. 10 ಗಂಟೆಗೆ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮನೆ, ಸೈಟು, ಟೆಂಪೋ ಎಲ್ಲವೂ ಕಳ್ಕೊಂಡಿದ್ದ ದ್ವಾರಕೀಶ್.. ಬಾಡಿಗೆ ಮನೆಗೆ ಶಿಫ್ಟ್ ಆಗಿ ಮತ್ತೆ ಪುಟಿದೆದ್ದಿದ್ದ ರೋಚಕ ಕಥೆ

publive-image

ವಯಸ್ಸಾದ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ದ್ವಾರಕೀಶ್​, ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ನಿನ್ನೆ ಮೊನ್ನೆಯವರೆಗೂ ಚೆನ್ನಾಗಿಯೇ ಇದ್ದರು. ಮೊನ್ನೆಯಷ್ಟೇ ನಾನು ಅವರ ಜೊತೆ ಮಾತನಾಡಿದ್ದೆ, ಏನೂ ಇಲ್ಲ ಕಣೋ. ಚೆನ್ನಾಗಿದ್ದೇನೆ ಎಂದು ಹೇಳಿದ್ದರು ಅಂತಾ ಸಂಬಂಧಿ, ಹಿರಿಯ ನಿರ್ದೇಶಕ ಭಾರ್ಗವ ನ್ಯೂಸ್​ಫಸ್ಟ್​ಗೆ ತಿಳಿಸಿದ್ದಾರೆ.

Advertisment

ದ್ವಾರಕೀಶ್ ಅವರು, ಪತ್ನಿ ಅಂಬುಜಾಕ್ಷಿ ನಿಧನರಾಗಿದ್ದ ದಿನವೇ ಸಾವನ್ನಪ್ಪಿದ್ದಾರೆ. 2021 ಏಪ್ರಿಲ್ 16 ಬೆಳಗ್ಗೆ 9:45ಕ್ಕೆ ದ್ವಾರಕೀಶ್​ ಪತ್ನಿ ಅಂಬುಜಾಕ್ಷಿ ನಿಧನರಾಗಿದ್ದರು. ಏಪ್ರಿಲ್ 16, 2024 ರಂದು ಬೆಳಗ್ಗೆ 10 ಗಂಟೆಗೆ ದ್ವಾರಕೀಶ್ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ:ಮೊನ್ನೆಯಷ್ಟೇ ಮಾತಾಡಿದ್ದೆ, ಬಾಲ್ಯದಿಂದಲೂ ಒಟ್ಟಿಗೆ ಇದ್ದೇವು -ದ್ವಾರಕೀಶ್​ ನೆನೆದು ಭಾರ್ಗವ ಕಣ್ಣೀರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment