/newsfirstlive-kannada/media/post_attachments/wp-content/uploads/2025/03/veteran-actor.jpg)
ನಮ್ಮ ಭಾರತೀಯ ಚಿತ್ರರಂಗದಲ್ಲಿ ಎಂತೆಂತಹ ದಿಗ್ಗಜ ನಟರು ಬಂದು ಹೋಗಿದ್ದಾರೆ ಅಂದ್ರೆ ಅವರು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲಿಯೂ ಪ್ರಸಿದ್ಧಿ ಪಡೆದು ಸಿನಿಮಾ ಜಗತ್ತು ಮತ್ತು ಸಿನಿಮಾ ಪ್ರಿಯರು ಎಂದೂ ಮರೆಯಲಾಗದ ಸಿನಿಮಾಗಳನ್ನು ನೀಡಿದ್ದಾರೆ. ಎಂದಿಗೂ ಕೂಡ ಮರೆಯಲಾಗದ ನಟನೆಯನ್ನು ಮಾಡಿ, ಸದಾಕಾಲ ನಮ್ಮ ಮನದಲ್ಲಿ ನೆಲೆ ನಿಂತಿದ್ದಾರೆ. ಯಾವುದೇ ಪಾತ್ರವನ್ನು ಕೊಟ್ಟರೂ ನೀರು ಕುಡಿದಂತೆ ನಟಿಸಬಲ್ಲ ಅನೇಕ ಲೆಜೆಂಡರಿ ಆ್ಯಕ್ಟರ್​ಗಳನ್ನು ಈ ಭಾರತೀಯ ಸಿನಿಮಾ ನಮಗೆ ನೀಡಿದೆ ಅದರಲ್ಲಿ ಒಬ್ಬರು ಅನುಪಮ್ ಖೇರ್.
ಇದನ್ನೂ ಓದಿ:ಫುಲ್ ರಾಂಗ್ ಆದ ನಟಿ ರಾಗಿಣಿ ದ್ವಿವೇದಿ.. ಅಭಿಮಾನಿ ಕಪಾಳಕ್ಕೆ ಬಾರಿಸಿ ಕೋಪಾತಾಪ; ವಿಡಿಯೋ ಇಲ್ಲಿದೆ!
ಅನುಪಮ್ ಖೇರ್ ಅವರ ಸಿನಿಮಾ ಪ್ರಯಾಣವೇ ಒಂದು ಅದ್ಭುತ ಕಥೆ. ಅವರು ಎಂತೆಂತಹ ಪಾತ್ರಗಳನ್ನು, ಸಿನಿಮಾಗಳನ್ನು ಮಾಡಿದ್ದಾರೆ ಅಂದ್ರೆ. ಭಾರತೀಯ ಸಿನಿಮಾದ ಇತಿಹಾಸ ಪುಟಗಳಲ್ಲಿ ಅಮರವಾಗಿ ಉಳಿಯುವ ಹೆಸರಲ್ಲಿ ತಾವು ಒಬ್ಬರಾಗಿ ಹೋಗಿದ್ದಾರೆ. 69ರ ಹರೆಯದ ಈ ನಟ ಇಂದಿಗೂ ಕೂಟ ನಟನೆ ಮಾಡುತ್ತಲೇ ಇದ್ದಾರೆ. ಅವರ ನಟನೆಯನ್ನು ನೋಡುವುದೇ ಒಂದು ಆನಂದ. ಪೋಷಕ ಪಾತ್ರಧಾರಿಯಾದರೂ ಕೂಡ ಸದಾ ನೆನಪಿನಲ್ಲಿ ಉಳಿಯುವಂತಹ ಹಲವಾರು ಪಾತ್ರಗಳನ್ನು ಅನುಪಮ್ ಖೇರ್ ನಿಭಾಯಿಸಿದ್ದಾರೆ. ಇಂದಿಗೂ ಕೂಡ ಅದು ಜಾರಿಯಲ್ಲಿಟ್ಟುಕೊಂಡಿದ್ದಾರೆ. ಅದಕ್ಕೆ ದೊಡ್ಡ ಉದಾಹರಣೆ ಇತ್ತೀಚೆಗೆ ಬಿಡುಗಡೆಯಾದ ಕಂಗನಾ ರಣಾವತ್ ಅವರ ನಿರ್ದೇಶನದ ಹಾಗೂ ನಟನೆಯ ಎಮರ್ಜೆನ್ಸಿ ಸಿನಿಮಾದಲ್ಲಿ ಅನುಪಮ್ ಖೇರ್​ ಜಯಪ್ರಕಾಶ್ ನಾರಾಯಣ್ ಅವರ ಪಾತ್ರ ನಿಭಾಯಿಸಿದ ರೀತಿ.
/newsfirstlive-kannada/media/post_attachments/wp-content/uploads/2025/03/veteran-actor-1.jpg)
ಇದೇ ಮಾರ್ಚ್​ 7ಕ್ಕೆ ಅನುಪಮ್ ಖೇರ್​ ತಮ್ಮ 69ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರು ಮಾರ್ಚ್​ 7,1955ರಲ್ಲಿ ಶಿಮ್ಲಾದಲ್ಲಿ ಜನಿಸಿದರು. 1984 ರಿಂದ ‘ಸಾರಾಂಶ‘ ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ ಇವರು ಹಿಂದಿರುಗಿ ನೋಡಲೇ ಇಲ್ಲ. ಇನ್ನೂ ಒಂದು ಅಚ್ಚರಿ ಅಂದ್ರೆ ಅನುಪಮ್ ಖೇರ್ ತಮ್ಮ 29ನೇ ವಯಸ್ಸಿನಲ್ಲಿಯೇ ವೃದ್ಧ ತಂದೆಯ ಪಾತ್ರ ಮಾಡಿ ಸೈ ಎನಿಸಿಕೊಂಡವರು. ಅಂದೇ ಅವರು ಸಿನಿಮಾ ಜಗತ್ತೀನಲ್ಲಿ ಸುದೀರ್ಘ ಪಯಣ ಸಾಗಿಸಲಿದ್ದೇನೆ ಎಂಬ ಸಂದೇಶವನ್ನು ಜಗತ್ತಿಗೆ ಕೊಟ್ಟವರು.
/newsfirstlive-kannada/media/post_attachments/wp-content/uploads/2025/03/veteran-actor-4.jpg)
ಕಳೆದ 40 ವರ್ಷಗಳಿಂದ ಅವರು ಬಾಲಿವುಡ್ ಸಿನಿಮಾ ಜಗತ್ತಿನಲ್ಲಿ ನಟನೆ ಮಾಡುತ್ತಿದ್ದಾರೆ. ಭಿನ್ನ ಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರಾಮ್ ಲಖನ್, ಹಮ್​ ಆಪ್​ ಕೆ ಹೈ ಕೌನ್​, ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ, ಕುಚ್ ಕುಚ್​ ಹೋತಾ ಹೈ, ಕಹೋ ನಾ ಪ್ಯಾರ್ ಹೈ, ಎ ವೆನ್ಸ್​ಡೇ. ಕಶ್ಮೀರ್ ಫೈಲ್ ಹೇಳುತ್ತಾ ಹೋದರೆ ನಾವು ಒಟ್ಟು 500 ಹೆಚ್ಚು ಸಿನಿಮಾಗಳ ಪಟ್ಟಿಯನ್ನು ನೀಡಬೇಕಾಗುತ್ತದೆ. ತಮ್ಮ 40 ವರ್ಷದ ಸಿನಿ ಜರ್ನಿಯಲ್ಲಿ ಅನುಪಮ್ ಖೇರ್​ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/03/veteran-actor-2.jpg)
1985ರಲ್ಲಿ ಇವರು ಕಿರಣ್ ಖೇರ್ ಅವರನ್ನು ವಿವಾಹವಾದರು. ಚಂಡಿಗಢ ಲೋಕಸಭಾ ಕ್ಷೇತ್ರದಿಂದ 2014ರಲ್ಲಿ ಗೆದ್ದು ಒಂದು ಬಾರಿ ಬಿಜೆಪಿ ಸಂಸದರು ಕೂಡ ಆಗಿದ್ದರು. ಅನುಪಮ್ ಖೇರ್​ 2004ರಲ್ಲಿ ಪದ್ಮಶ್ರೀ, 2016ರಲ್ಲಿ ಪದ್ಮವಿಭೂಷಣ ಸೇರಿದಂತೆ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ಫಿಲ್ಮ್​ಫೇರ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಸದ್ಯ ಒಂದು ಸಿನಿಮಾದಲ್ಲಿ ನಟಿಸಲು ಅವರು 3 ರಿಂದ 4 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸುಮಾರು 403 ಕೋಟಿ ರೂಪಾಯಿಯ ಅಸ್ತಿ ಒಡೆಯ ಅನುಪಮ್ ಖೇರ್
69ರ ಹರೆಯದ ಈ ನಟ, ಇಂದಿಗೂ ಕೂಡ ಯಾವ ಪಾತ್ರ ನೀಡಿದರು ಸರಳವಾಗಿ ಅಭಿನಯಿಸುವ ಚೈತನ್ಯವನ್ನಿಟ್ಟುಕೊಂಡಿದ್ದಾರೆ. ಸುಮಾರು 40 ವರ್ಷಗಳ ಸಿನಿ ಜರ್ನಿಯಲ್ಲಿ ನೂರಾರು ಏಳುಬೀಳುಗಳನ್ನು ನೋಡಿರುವ ಅನುಪಮ್​ ಖೇರ್​, ದೇಶ ಕಂಡ ಅತ್ಯದ್ಭುತ ನಟರಲ್ಲಿ ಒಬ್ಬರು ಅಂದ್ರೆ ಅತಿಶೋಕ್ತಿಯಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us