ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಅಭಿನಯ ಸರಸ್ವತಿ B ಸರೋಜಾ ದೇವಿ ಅಂತ್ಯಸಂಸ್ಕಾರ

author-image
Bheemappa
Updated On
ನಿಧನಕ್ಕೂ ಮುನ್ನ ಬೆಳಗ್ಗೆ ನಟಿ ಸರೋಜಾ ದೇವಿಗೆ ಆಗಿದ್ದೇನು..? ಕೊನೆಯ ಕ್ಷಣ ಹೇಗಿತ್ತು..?
Advertisment
  • ಹಿರಿಯ ನಟಿಯ ಅಗಲಿಕೆಗೆ ಕಂಬನಿ ಮಿಡಿದಿದ್ದ ಕನ್ನಡ ಚಿತ್ರರಂಗ
  • ಹುಟ್ಟೂರಿನ ತಾಯಿ ಸಮಾಧಿ ಪಕ್ಕ ಸರೋಜಾ ದೇವಿ ಅಂತ್ಯಕ್ರಿಯೆ
  • ಅಂತಿಮ ದರ್ಶನ ಪಡೆದುಕೊಂಡ ಸಿಎಂ ಸಿದ್ದರಾಮಯ್ಯ, ಡಿಸಿಎಂ

ಚಂದನವನದ ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾ ದೇವಿ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಿನಲ್ಲಿ ಇಂದು ನೆರವೇರಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ, ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ.

ಬೆಂಗಳೂರಿನಿಂದ ದಶವಾರ ಗ್ರಾಮಕ್ಕೆ ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು. ಬಳಿಕ ಗ್ರಾಮದಲ್ಲಿ ಹೂವಿನ ಪಲ್ಲಕ್ಕಿಯಲ್ಲಿ ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ಮೆರವಣಿ ಮೂಲಕ ತೋಟಕ್ಕೆ ತರಲಾಯಿತು. ಬಳಿಕ ಕುಟುಂಬಸ್ಥರು ಅಂತಿಮ ಸಂಸ್ಕಾರ ನೆರವೇರಿಸಿದರು. ಅವರ ತಾಯಿಯ ಸಮಾಧಿ ಪಕ್ಕವೇ ಸಕಲ ಸರ್ಕಾರಿ ಗೌರವದೊಂದಿಗೆ, ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು.

ಇದನ್ನೂ ಓದಿ:ಗಗನಯಾನಿ ಶುಭಾಂಶು ಶುಕ್ಲಾ ಅವರು ಭೂಮಿಗೆ ಇಳಿಯುತ್ತಿದ್ದಂತೆ ತಾಯಿ ಕಣ್ಣೀರು..!

publive-image

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಬಿ.ಸರೋಜಾ ದೇವಿ (87) ಅವರು ಜುಲೈ 14 ಅಂದರೆ ಸೋಮವಾರದಂದು ಮಲ್ಲೇಶ್ವರಂನ ಅವರ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ನಟಿಯ ಅಗಲಿಕೆಗೆ ಚಿತ್ರರಂಗದ ಶಿವರಾಜ್​ ಕುಮಾರ್, ಜಗ್ಗೇಶ್, ತಾರಾ, ಉಪೇಂದ್ರ ಸೇರಿದಂತೆ ನಟ, ನಟಿಯರು, ಪೋಷಕ ನಟರು ಅಂತಿಮ ದರ್ಶನ ಪಡೆದುಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ಸೇರಿದಂತೆ ರಾಜ್ಯಕೀಯ ಗಣ್ಯರು ಕೂಡ ಅಂತಿಮ ದರ್ಶನ ಪಡೆದುಕೊಂಡಿದ್ದರು.

ಬೆಳಗ್ಗೆ ಮಾತನಾಡಿದ್ದ ಸರೋಜಾ ದೇವಿ ಅವರ ಮಗ ಗೌತಮ್‌, ಅಪ್ಪನ ಸಮಾಧಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬುದು ಅಮ್ಮ ಆಸೆ ಆಗಿತ್ತು. ಆದರೆ ಆ ಸ್ಥಳ ಈಗ ಲೇಔಟ್, ಅಪಾರ್ಟ್​​ಮೆಂಟ್​ಗಳು ಆಗಿವೆ. ಇದರಿಂದ ಅಲ್ಲಿ ಅಂತ್ಯಸಂಸ್ಕಾರ ಮಾಡಲು ಆಗಲ್ಲ. ದಶವಾರ ಊರು ಅಮ್ಮ ಹುಟ್ಟಿದ ಊರು. ಅಮ್ಮನ ತಾಯಿಯನ್ನು ಅಲ್ಲೇ ಮಣ್ಣು ಮಾಡಲಾಗಿದೆ. ಅವರ ತಾಯಿಯ ಪಕ್ಕದಲ್ಲೇ ಸರೋಜಾ ದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ ಅಂತ ಮೊದಲೇ ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment