Pushpalatha: ಕಳಚಿದ ಮತ್ತೊಂದು ಹಿರಿಯ ಕೊಂಡಿ.. ಖ್ಯಾತ ನಟಿ ಪುಷ್ಪಲತಾ ನಿಧನ

author-image
Ganesh
Updated On
Pushpalatha: ಕಳಚಿದ ಮತ್ತೊಂದು ಹಿರಿಯ ಕೊಂಡಿ.. ಖ್ಯಾತ ನಟಿ ಪುಷ್ಪಲತಾ ನಿಧನ
Advertisment
  • ಬಹುಭಾಷಾ ನಟಿ ಪುಷ್ಪಲತಾ 87 ವರ್ಷದಲ್ಲಿ ನಿಧನ
  • 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಪುಷ್ಪಲತಾ
  • ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ

ತಮಿಳು ನಟ ಎವಿಎಂ ರಾಜನ್ (A.V.M. Rajan) ಅವರ ಪತ್ನಿ, ಹಿರಿಯ ನಟಿ ಪುಷ್ಪಲತಾ (Pushpalatha) ನಿಧನರಾಗಿದ್ದಾರೆ. 87 ವರ್ಷದ ನಟಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಚೆನ್ನೈನ ಟಿ. ನಗರದ ತಿರುಮಲ ಪಿಳ್ಳೈ ರಸ್ತೆಯಲ್ಲಿರುವ ನಿವಾಸದಲ್ಲಿದ್ದ ನಟಿಗೆ ಏಕಾಏಕಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಭಿಕ್ಷುಕನಿಗೆ RS 10 ಕೊಟ್ಟು ಲಾಕ್ ಆದ ಬೈಕ್ ಸವಾರ.. ಒಂದು ವರ್ಷ ಜೈಲು ಶಿಕ್ಷೆ..!

publive-image

ಪುಷ್ಪಲತಾ ಅವರು 1958 ರಲ್ಲಿ ಬಿಡುಗಡೆಯಾದ ‘ಸೆಂಗೊಟ್ಟೈ ಸಿಂಗಂ’ (Sengottai Singam) ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. 1961ರಲ್ಲಿ ಗುನಾಟ್ಟು ತಂಗಮ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಟ ಎವಿಎಂ ರಾಜನ್ ಜೊತೆ ನಾನುಮ್ ಒರು ಪೆಣ್ (Naanum Oru Penn) ಚಿತ್ರದಲ್ಲಿ ನಟಿಸಿದ್ದರು. ಈ ಅವಧಿಯಲ್ಲಿ ಇಬ್ಬರು ಸ್ನೇಹಿತರಾಗಿದ್ದರು. ನಂತರ ಮದುವೆಯಾದರು. ಇಬ್ಬರು ಮಕ್ಕಳಿದ್ದಾರೆ.

ಪುಷ್ಪಲತಾ ಅನೇಕ ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಪೆದ್ದಕೊಡುಕು (Pedda Koduku), ಅನ್ನದಮ್ಮುಲ್ ಅಫಿಲಿಯೇಶನ್, ಯುಗಪುರುಷುಡು, ರಾಜಪುತ್ರ ರಹಸ್ಯಂ, ಶ್ರೀರಾಮ ಪಟ್ಟಾಭಿಷೇಕಂ, ಮತ್ತು ಕೊಂಡವೀಟಿ ಸಿಂಹಂ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಮಾತ್ರವಲ್ಲ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸೇರಿ ಒಟ್ಟು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ: ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ.. iPhone 16 ಮೇಲೆ ಭಾರೀ ಆಫರ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment