newsfirstkannada.com

ಹಿರಿಯ ಪತ್ರಕರ್ತ ರಾಮಚಂದ್ರ ಮನಗೂಳಿ ನಿಧನ; ಗಣ್ಯರ ಸಂತಾಪ

Share :

Published March 1, 2024 at 12:32pm

  45 ವರ್ಷ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು

  ವಿಡಂಬನಾತ್ಮಕ ಲೇಖನಗಳಿಂದ ತಮ್ಮದೇ ಆದ ಛಾಪು ಮೂಡಿಸಿದ್ದರು

  ಎಲ್ಲರಿಗೂ ರಾಮ್ ಮನಗೂಳಿ ಎಂದೇ ಚಿರಪರಿಚಿತರಾಗಿದ್ದ ಪತ್ರಕರ್ತರು

ಬಾಗಲಕೋಟೆ: ಹಿರಿಯ ಪತ್ರಕರ್ತ ರಾಮಚಂದ್ರ ಮನಗೂಳಿ ಅವರು ನಿಧನರಾಗಿದ್ದಾರೆ. 64 ವರ್ಷದ ರಾಮಚಂದ್ರ ಮನಗೂಳಿ ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಹಿರಿಯ ಪತ್ರಕರ್ತರು ವಿಧಿವಶರಾಗಿದ್ದಾರೆ.

ರಾಮಚಂದ್ರ ಮನಗೂಳಿ ಅವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಅಪಾರ ಸೇವೆಯಿಂದ ಎಲ್ಲರಿಗೂ ರಾಮ್ ಮನಗೂಳಿ ಎಂದೇ ಚಿರಪರಿಚಿತರಾಗಿದ್ದರು. ಕಳೆದ 45 ವರ್ಷಗಳಿಂದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರರಾಗಿ, ಬ್ಯೂರೋ ಚೀಫ್ ಆಗಿ ರಾಮ್‌ ಮನಗೂಳಿ ಅವರು ಸೇವೆ ಸಲ್ಲಿಸಿದ್ದಾರೆ.

ರಾಮಚಂದ್ರ ಮನಗೂಳಿ ಅವರು ಅನೇಕ ವಿಡಂಬನಾತ್ಮಕ ಲೇಖನಗಳಿಂದ ಉತ್ತರ ಕರ್ನಾಟಕ ಭಾಗದ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನದ ಹೋರಾಟದಲ್ಲಿ ಭಾಗವಹಿಸುವ, ಪತ್ರಕರ್ತರಲ್ಲಿ ಸಾಮಾಜಿಕ, ಕಾಳಜಿಯನ್ನು ಬಿತ್ತಿದವ್ರು ಮನಗೂಳಿ ಅವರು.

ಹಿರಿಯ ಪತ್ರಕರ್ತರ ಅಗಲಿಕೆಗೆ ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿರಿಯ ಪತ್ರಕರ್ತ ರಾಮಚಂದ್ರ ಮನಗೂಳಿ ನಿಧನ; ಗಣ್ಯರ ಸಂತಾಪ

https://newsfirstlive.com/wp-content/uploads/2024/03/Journalist-Ramachandra-Managuli.jpg

Load More