newsfirstkannada.com

ಪಂಜಾಬಿ ಜನಪ್ರಿಯ ಗಾಯಕ ಸುರಿಂದೆರ್ ಶಿಂದಾ ನಿಧನ; ಸಿಎಂ ಭಗವಂತ್ ಮಾನ್ ಕಂಬನಿ

Share :

26-07-2023

    ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು

    ಲೂಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ನಿಧನ

    ನೆಚ್ಚಿನ ಗಾಯಕನ ಕಳೆದುಕೊಂಡು ಕಣ್ಣೀರಿಟ್ಟ ಪಂಜಾಬ್

ಜನಪ್ರಿಯ ಪಂಜಾಬಿ ಗಾಯಕ ಸುರಿಂದೆರ್ ಶಿಂದಾ (60) ಇಂದು ಬೆಳಗ್ಗೆ ಲೂಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪುಟ್ಟ್ ಜತ್ತನ್ ದೇ (Putt Jattan De), ಜಟ್ಟ್ ಜಿಯೋನಾ ಮೋರ್ಹ್ (Jatt Deona Morh) ಸೇರಿದಂತೆ ಅನೇಕ ಜನಪ್ರಿಯ ಹಾಡುಗಳಿಂದ ಖ್ಯಾತಿ ಪಡೆದಿದ್ದರು.

ಸುರೇಂದೆರ್ ಶಿಂದಾ, ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಲೂಧಿಯಾನದ ದಯಾನಂದ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸುರಿಂದೆರ್ ಶಿಂದಾ ಸಾವನ್ನಪ್ಪಿದ್ದಾರೆ.

ಪ್ರಸಿದ್ಧ ಗಾಯಕನ ಅಗಲಿಕೆಗೆ ರಾಜಕಾರಣಿ, ಸಿನಿಮಾ ಸ್ಟಾರ್​ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿ, ಸುರಿಂದೆರ್ ಶಿಂದಾ ಜೀ ಅಗಲಿಕೆಯ ಸುದ್ದಿ ತಿಳಿದು ತುಂಬಾ ನೋವು ಆಯಿತು ಎಂದು ಟ್ವೀಟ್ ಮಾಡಿದ್ದಾರೆ. ಹಾಗೆ ಅಕಾಲಿ ದಳದ ಸುಖ್​ಬಿರ್ ಸಿಂಗ್ ಬಾದಲ್ ಕೂಡ ಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಪಂಜಾಬಿ ಜನಪ್ರಿಯ ಗಾಯಕ ಸುರಿಂದೆರ್ ಶಿಂದಾ ನಿಧನ; ಸಿಎಂ ಭಗವಂತ್ ಮಾನ್ ಕಂಬನಿ

https://newsfirstlive.com/wp-content/uploads/2023/07/Surinder-Shinda.jpg

Load More