ಕೋಟ ಶ್ರೀನಿವಾಸ ರಾವ್ ನಿಧನ.. ‘ನಮ್ಮ ಬಸವ’ ಸೇರಿ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು..

author-image
Ganesh
Updated On
ಕೋಟ ಶ್ರೀನಿವಾಸ ರಾವ್ ನಿಧನ.. ‘ನಮ್ಮ ಬಸವ’ ಸೇರಿ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು..
Advertisment
  • ತೆಲುಗು ಹಿರಿಯ ನಟ ಕೋಟ ಶ್ರೀನಿವಾಸ ರಾವ್(83) ನಿಧನ
  • ಹೈದರಾಬಾದ್​ನ ನಿವಾಸದಲ್ಲಿ ಕೋಟ ಶ್ರೀನಿವಾಸರಾವ್ ನಿಧನ
  • ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸರಾವ್

ತೆಲುಗು ಸಿನಿಮಾ ರಂಗದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಖ್ಯಾತ ಹಿರಿಯ ನಟ ಕೋಟ ಶ್ರೀನಿವಾಸ ರಾವ್ (Veteran Telugu film actor Kota Srinivasa Rao) ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 83 ವಯಸ್ಸಾಗಿತ್ತು. ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.

ವೃದ್ಧಾಪ್ಯದ ಕಾರಣ ನಡೆಯಲು ಸಾಧ್ಯವಾಗದಿದ್ದರೂ, 2023ವರೆಗೂ ನಟನಾ ಬದುಕಿನಲ್ಲಿ ಸಕ್ರಿಯರಾಗಿದ್ದರು. 2023 ರಲ್ಲಿ ‘ಸುವರ್ಣ ಸುಂದರಿ’ (Suvarna Sundari) ಎಂಬ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಕೋಟಾ ಶ್ರೀನಿವಾಸ ರಾವ್, 4 ದಶಕಗಳ ಚಲನಚಿತ್ರ ಜೀವನದಲ್ಲಿ ಅನೇಕ ಅಪ್ರತಿಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೋಟಾ ನಿಧನದಿಂದ ಚಲನಚಿತ್ರೋದ್ಯಮ ಶೋಕದಲ್ಲಿದೆ. ಅವರ ನಿಧನಕ್ಕೆ ರಾಜಕೀಯ ನಾಯಕರು ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ವಿಶ್ವಕ್ಕೆ ದೊಡ್ಡ ಮೆಸೇಜ್​ ಕೊಡಲಿದೆ ಭಾರತ.. ಶೀಘ್ರದಲ್ಲೇ ಹೈಪರ್ಸಾನಿಕ್ ಮಿಸೈಲ್ ವಿಷ್ಣುವಿನ ಪರೀಕ್ಷೆ!

ಶ್ರೀನಿವಾಸ ರಾವ್ ಜುಲೈ 10, 1942 ರಂದು ಆಂಧ್ರಪ್ರದೇಶದ ಕಂಕಿಪಡುವಿನಲ್ಲಿ ಜನಿಸಿದ್ದರು. ತಂದೆ ಸೀತಾರಾಮಾಂಜನೇಯುಲು ವೈದ್ಯರಾಗಿದ್ದರು. ಬಾಲ್ಯದಲ್ಲಿ ತಂದೆಯಂತೆ ವೈದ್ಯನಾಗಬೇಕೆಂದು ಬಯಸಿದ್ದರೂ, ಶಾಲಾ ದಿನಗಳಲ್ಲಿ ನಾಟಕಗಳಿಗೆ ಕಾಲಿಟ್ಟಿದ್ದರಿಂದ ನಟನೆಯ ಬಗ್ಗೆ ಆಸಕ್ತಿ ಬೆಳೆಯಿತು. ಪದವಿ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಪಡೆದು ನಟನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡರು. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದ ನಮ್ಮ ಬಸವ, ರಕ್ತ ಕಣ್ಣೀರು ಚಿತ್ರಗಳಲ್ಲಿ ನಟಿಸಿದ್ದರು. ಕೋಟಾ ಶ್ರೀನಿವಾಸ್ ಕೇವಲ ನಟರಲ್ಲ, ರಾಜಕೀಯಕ್ಕೂ ಪ್ರವೇಶಿಸಿದ್ದಾರೆ. ಶ್ರೀನಿವಾಸ ರಾವ್ 1999 ರಿಂದ 2004 ರವರೆಗೆ ವಿಜಯವಾಡ ಪೂರ್ವ ಶಾಸಕರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥದಲ್ಲಿ ಭೀಕರ ಅಪಘಾತ; ಸ್ಥಳದಲ್ಲೇ ಮೂವರು ನಿಧನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment