/newsfirstlive-kannada/media/post_attachments/wp-content/uploads/2025/04/Dhanakar.jpg)
ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವೆ ಹೊಸ ಸಂಘರ್ಷ ಶುರುವಾಗಿದೆ. ರಾಜ್ಯಪಾಲರು ಫಟಾ ಫಟ್ ಅಂತಾ ಕೆಲಸ ಮಾಡ್ತಿಲ್ಲ ಅಂತಾ ನ್ಯಾಯಾಂಗ ಗುಟುರು ಹಾಕಿದ್ರೆ, ನ್ಯಾಯಾಂಗದ ಕಾರ್ಯ ವೈಖರಿಗಳ ವಿರುದ್ಧ ಸಾಲು ಸಾಲು ಪ್ರಶ್ನೆಗಳನ್ನ ಮಾಡಿ ಉಪರಾಷ್ಟ್ರಪತಿಗಳು ಮುಗಿಬಿದ್ದಿದ್ದಾರೆ.
ನ್ಯಾಯಾಂಗದ ಕಾರ್ಯವೈಖರಿಗಳೇಕೆ ಪ್ರಶ್ನೆಗೊಳಗಾಗುತ್ತಿಲ್ಲ ಎಂದು ಪ್ರಶ್ನೆ
ಉಪರಾಷ್ಟ್ರಪತಿ ಜಗದೀಪ್ ಧನಕರ್, ನ್ಯಾಯಾಂಗವನ್ನ ಬಹಿರಂಗವಾಗಿ ಟೀಕಿಸಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಸುಧಾರಣೆಗಳ ಅಗತ್ಯತೆ ಬಗ್ಗೆ ಹೇಳಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಕಾರ್ಯವೈಖರಿಯನ್ನ ಉಪರಾಷ್ಟ್ರಪತಿ ಪ್ರಶ್ನಿಸಿದ್ದು, ಭಾರತದ ಇತಿಹಾಸದಲ್ಲಿ ಮೊದಲು. ರಾಷ್ಟ್ರಪತಿಗೆ ನಿರ್ದೇಶಿಸುವುದನ್ನ ಒಪ್ಪಲು ಸಾಧ್ಯವಿಲ್ಲ ಅಂತ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ.
ಉಪರಾಷ್ಟ್ರಪತಿ ಹೇಳಿದ್ದೇನು?
- ಆರೋಪ 01 : ಕೋರ್ಟ್ಗಳು ಯಾವತ್ತು ಸೂಪರ್ ಪಾರ್ಲಿಮೆಂಟ್ ಆಗಬಾರದು
- ಆರೋಪ 02 : ರಾಷ್ಟ್ರಪತಿಗಳಿಗೆ ನ್ಯಾಯಾಂಗ ನಿರ್ದೇಶನ ನೀಡಲು ಸಾಧ್ಯವೇ ಇಲ್ಲ
- ಆರೋಪ 03 : ಸುಪ್ರೀಂಕೋರ್ಟ್ ಯಾವ ಆಧಾರದಲ್ಲಿ ರಾಷ್ಟ್ರಪತಿಗೆ ನಿರ್ದೇಶಿಸುತ್ತೆ?
- ಆರೋಪ 04 : ಜಡ್ಜ್ ಮನೆಯಲ್ಲಿ ಸಿಕ್ಕ ಕಂತೆ ಕಂತೆ ಹಣದ ಬಗ್ಗೆ FIR ಯಾಕೆ ಆಗಿಲ್ಲ?
- ಆರೋಪ 05 : ಕಾರ್ಯಾಂಗದಲ್ಲಿ ನ್ಯಾಯಾಂಗದ ಪ್ರವೇಶ ಆತಂಕಕಾರಿ ಬೆಳವಣಿಗೆ
ರಾಷ್ಟ್ರಪತಿಗಳಿಗೆ ತೀರ್ಪಿನ ಮೂಲಕ ನಿರ್ದೇಶನವಿದೆಯಾ? ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನು ನಡೆಯುತ್ತಿದೆ? ನಾವು ಅತ್ಯಂತ ಸೂಕ್ಷ್ಮವಾಗಿರಬೇಕು. ಯಾರಾದರೂ ವಿಮರ್ಶೆಯನ್ನು ಸಲ್ಲಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆಯಲ್ಲ. ಈ ದಿನಕ್ಕಾಗಿ ನಾವು ಎಂದಿಗೂ ಪ್ರಜಾಪ್ರಭುತ್ವಕ್ಕಾಗಿ ಚೌಕಾಸಿ ಮಾಡಿಲ್ಲ-ಜಗದೀಪ್ ಧನಕರ್, ಉಪರಾಷ್ಟ್ರಪತಿ
ಉಪರಾಷ್ಟ್ರಪತಿ ಜಗದೀಪ್ ಧನಕರ್ ಇಷ್ಟೆಲ್ಲಾ ಕಿಡಿಕಾರೋದಕ್ಕೆ ಕಾರಣ ಕಳೆದ ವಾರ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು.
ಇದನ್ನೂ ಓದಿ: ವಿಸ್ಫೋಟಕ ಬ್ಯಾಟರ್ಗಳಿದ್ದರೂ ಅಲ್ಪ ಮೊತ್ತದ ಟಾರ್ಗೆಟ್ ಕೊಟ್ಟ SRH.. ಎಷ್ಟು ರನ್?
ಮಸೂದೆಗಳಿಗೆ ಅಂಕಿತ ಹಾಕದ ರಾಜ್ಯಪಾಲರು, ರಾಷ್ಟ್ರಪತಿಗೆ ಕಳಿಸಿದ್ರು. ಹಲವು ಮಸೂದೆಗಳು ರಾಷ್ಟ್ರಪತಿ ಬಳಿ ಪೆಂಡಿಂಗ್ ಇವೆ. ಈ ಕಾರ್ಯ ವೈಖರಿ ಪ್ರಶ್ನಿಸಿ ತಮಿಳುನಾಡು ಸರ್ಕಾರ, ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅದ್ರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ರಾಜ್ಯಪಾಲರ ಕರ್ತವ್ಯಗಳನ್ನ ಸ್ಪಷ್ಟವಾಗಿ ಹೇಳಿತ್ತು. ಅಲ್ಲದೆ, ರಾಜ್ಯಪಾಲರಿಂದ ತಮ್ಮ ಅವಗಾಹನೆಗೆ ಬಂದ ಮಸೂದೆಗಳನ್ನ ಮೂರು ತಿಂಗಳೊಳಗೆ ರಾಷ್ಟ್ರಪತಿಗಳು ಅಂಕಿತ ಹಾಕಬೇಕು ಎಂದಿತ್ತು. ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಕೋಲ್ಡ್ ವಾರ ಮುಂದುವರೆದಿದೆ. ಈ ಬೆಳವಣಿಗೆ ಸಾಂವಿಧಾನಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಿದ್ದು, ಸಾರ್ವಜನಿಕ ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ: ಆರಂಭದಲ್ಲೇ ಮಾತಿನ ಜಟಾಪಟಿ, ಜಾತಿಗಣತಿ ಸಭೆ ಫೇಲ್.. ಸಂಪುಟ ಚರ್ಚೆಯ ಇನ್ಸೈಡ್ ಸ್ಟೋರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ