/newsfirstlive-kannada/media/post_attachments/wp-content/uploads/2025/05/Manu-Santraste.jpg)
ಬೆಂಗಳೂರು: ಮೊನ್ನೆಯಷ್ಟೇ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಸಹ ನಟಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಹೀಗಾಗಿ ಸಂತ್ರಸ್ತೆ ಸಾಲು ಸಾಲು ಆರೋಪದ ಬೆನ್ನಲ್ಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮಡೆನೂರು ಮನು ಅವರನ್ನ ಅರೆಸ್ಟ್​ ಮಾಡಿ ತೀವ್ರ ವಿಚಾರಣೆ ಮಾಡಿದ್ದರು.
ಇದನ್ನೂ ಓದಿ: ತಂದೆಯ ‘ಸುಪಾರಿ’ ಆರೋಪಕ್ಕೆ ಸಖತ್ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ.. ಏನಂದ್ರು?
/newsfirstlive-kannada/media/post_attachments/wp-content/uploads/2025/05/Actor-madenuru-Manu-1.jpg)
ಆದ್ರೆ ಇದೀಗ ಸಂತ್ರಸ್ತೆ ಮತ್ತೊಂದು ಗಂಭೀರವಾದ ಆರೋಪ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್​ ಫಸ್ಟ್​ ಜೊತೆ ಸಂತ್ರಸ್ತೆ ಮಾತನಾಡಿದ್ದಾಳೆ. ಸಿನಿಮಾ ಪ್ರಚಾರದ ಗಿಮಿಕ್​ಗಾಗಿ ಈ ರೀತಿ ಮಾಡ್ತಿದ್ದಾರೆ ಅಂತ ಸಂತ್ರಸ್ತೆ ಆರೋಪಿಸಿದ್ದಾಳೆ. ಇಡೀ ಸಿನಿಮಾ ಟೀಂಗೆ ನಾನು ಕಂಪ್ಲೇಂಟ್ ಕೊಡೋದು ಗೊತ್ತಿತ್ತು.
ಏಪ್ರಿಲ್ 19ರಂದು ಬಲವಂತವಾಗಿ ಸಿನಿಮಾ ಟೀಂ ಕೆಂಗೇರಿಗೆ ಕರೆದುಕೊಂಡು ಹೋಗಿದ್ರು. ಅಲ್ಲಿಗೆ ಲೇಡಿ ಲಾಯರ್​ನ ಕೂಡ ಕರೆಸಿದ್ದರು. ಇವಳು ಹೇಗೆ ಮುಂದುವರೆದ್ರು ನಾವು ಅದನ್ನ ಸಿನಿಮಾ ಪ್ರಮೋಷನ್​ಗೆ ಬಳಸಿಕೊಳ್ಳೋಣ ಅಂತ ಸಿನಿಮಾ ತಂಡ ಪ್ಲಾನ್ ಮಾಡಿತ್ತು. ಪ್ರಚಾರಕ್ಕಾಗಿಯೇ ಮನುನನ್ನ ಅವತ್ತು ಕರೆಸಿದ್ರು ಅಂತ ನನಗೆ ಗೊತ್ತಾಗ್ತಿದೆ. ಅವನಿಗೆ ಶಿಕ್ಷೆ ಆಗಲೇ ಬೇಕು ಅಂತ ಸಂತ್ರಸ್ತೆ ಆಗ್ರಹಿಸಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us