ಸರ್ಕಾರಿ ನೌಕರನಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ಪತಿ.. ಇದೆಂಥ ಪರಿಸ್ಥಿತಿ..?

author-image
Veena Gangani
Updated On
ಸರ್ಕಾರಿ ನೌಕರನಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ಪತಿ.. ಇದೆಂಥ ಪರಿಸ್ಥಿತಿ..?
Advertisment
  • ಬಿಲ್ ಪಡೆಯಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಸಿಬ್ಬಂದಿ
  • ಸಾಲ ಮಾಡಿ ಮನೆ ನಿರ್ಮಾಣ ಆರಂಭಿಸಿದ್ದ ಮಹಾಂತೇಶ
  • ಹಾವೇರಿ ತಾಲೂಕು ಬೆಳವಿಗೆ ಗ್ರಾಮದಲ್ಲಿ ನಡೆದ ಘಟನೆ

ಹಾವೇರಿ: ಒಂದು ಸುಂದರವಾದ ಮನೆ ಕಟ್ಟಬೇಕು ಅನ್ನೋದು ಹಲವರ ಆಲೋಚನೆಯಾಗಿರುತ್ತದೆ. ಆದ್ರೆ ಈಗಿನ ಕಾಲದಲ್ಲಿ ಮನೆ ಕಟ್ಟಬೇಕು ಅಂದ್ರೆ ಕೋಟಿ ಕೋಟಿ ದುಡ್ಡು ಇದ್ದರು ಸಾಕಾಗೋದಿಲ್ಲ. ಅದರಲ್ಲೂ ವಸತಿ ಯೋಜನೆಯಡಿ ಮನೆ ನಿರ್ಮಿಸಿಬೇಕು ಎಂದರೆ ಒಂದು ಸವಾಲಿನ ಕೆಲಸವೇ ಸರಿ.

ಇಲ್ಲೋಬ್ಬ ಸರ್ಕಾರಿ ನೌಕರನಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ಘಟನೆ ಬೆಳವಿಗೆ ಗ್ರಾಮದಲ್ಲಿ ನಡೆದಿದೆ. ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಮಂಜೂರಾತಿ ಸಿಕ್ಕಿತ್ತು. ಮಹಾಂತೇಶ ಅವರು ಸಾಲ ಮಾಡಿ ಮನೆ ನಿರ್ಮಾಣ ಆರಂಭಿಸಿದ್ದರು.

ಇದನ್ನೂ ಓದಿ:ಅಂತಿಂಥ ಹೆಣ್ಣು ಇವಳಲ್ಲ..! ರೈಲು ಹಳಿ ಮೇಲೆ ಕಾರು ಓಡಿಸಿ ದಿಗಿಲು ಹುಟ್ಟಿಸಿದ ಲೇಡಿ -VIDEO

ಆದರೆ, ಬ್ಯಾಂಕ್ ಖಾತೆಗೆ ಯಾವುದೇ ಬಿಲ್‌ ಬಂದಿರಲಿಲ್ಲ. ಹೀಗಾಗಿ ಬಿಲ್‌ಗಾಗಿ ತಹಶೀಲ್ದಾರ್ ಕಚೇರಿಗೆ ಹೋಗಿದ್ದಾರೆ.
ಈ ವೇಳೆ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮದನ್ ಮೋಹನ್ ಲಂಚ ನೀಡುವಂತೆ ಕೇಳಿದ್ದಾನೆ. ಹೀಗಾಗಿ ಮಹಾಂತೇಶ ಪತ್ನಿಯ ಮಾಂಗಲ್ಯ ಸರ ಅಡವಿಟ್ಟು 20 ಸಾವಿರ ನೀಡಿದ್ದಾನೆ. ಆದಾಗ್ಯೂ ಇದುವರೆಗೆ ಬಿಲ್ ಮಂಜೂರಾಗಿಲ್ಲ.

[caption id="attachment_129158" align="alignnone" width="800"]publive-image ತಹಶೀಲ್ದಾರ್ ಶರಣಮ್ಮ[/caption]

ಹೀಗಾಗಿ ಈ ಬಗ್ಗೆ ತಹಶೀಲ್ದಾರ್ ಶರಣಮ್ಮ ಜೊತೆ ಅಳಲು ತೋಡಿಕೊಂಡಿದ್ದಾನೆ. ಸದ್ಯ ಸಂತ್ರಸ್ತನ ದೂರಿಗೆ ಸ್ಪಂದಿಸಿದ ತಹಶೀಲ್ದಾರ್ ಶರಣಮ್ಮ, ಹಣ ನೀಡಿರುವ ದಾಖಲೆಗಳನ್ನು ನನಗೆ ನೀಡಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸ್ತೀವಿ ಎಂದು ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment