/newsfirstlive-kannada/media/post_attachments/wp-content/uploads/2024/11/Donald-Trump-US-Election-2024.jpg)
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆದ್ದು ಬೀಗಿದ್ದಾರೆ. ಗೆಲುವು ಖಚಿತವಾಗುತ್ತಿದ್ದಂತೆ ವಿಕ್ಟರಿ ಭಾಷಣ ಮಾಡಿರುವ ಟ್ರಂಪ್ ಅವರು ಅಮೆರಿಕಾವನ್ನು ಮತ್ತೊಮ್ಮೆ ಗ್ರೇಟ್ ಆಗಿಸುವೆ ಅನ್ನೋ ಶಪಥ ಮಾಡಿದ್ದಾರೆ.
ಅಮೆರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿದ್ದು, ವಿಶ್ವದ ಗಣ್ಯಾತಿಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯದ ಜೊತೆಗೆ ಅಮೆರಿಕಾ-ಭಾರತದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಗೆದ್ದಿದ್ದು ಹೇಗೆ?
ಸದ್ಯದ ಮತ ಎಣಿಕೆಯ ಪ್ರಕಾರ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು 267 ಸ್ಥಾನಗಳನ್ನು ಪಡೆದಿದ್ದಾರೆ. ಅಧಿಕೃತ ಮ್ಯಾಜಿಕ್ ನಂಬರ್‌ಗೆ ಕೇವಲ 3 ಸ್ಥಾನಗಳಷ್ಟೇ ಬಾಕಿ ಉಳಿದಿದೆ.
ಫಾಕ್ಸ್ ನ್ಯೂಸ್ ಪ್ರಕಾರ ಡೋನಾಲ್ಡ್ ಟ್ರಂಪ್ ಅವರಿಗೆ ಎಲೆಕ್ಟ್ರೋರಲ್ ಕಾಲೇಜ್ ವೋಟ್‌ಗಳ ಪೈಕಿ 277 ವೋಟ್ ಲಭ್ಯವಾಗಿದೆ ಎನ್ನಲಾಗಿದೆ. ಟ್ರಂಪ್ ಅವರ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರಿಗೆ 224 ಮತಗಳು ಮಾತ್ರ ಲಭ್ಯವಾಗಿದೆ.
ಇದನ್ನೂ ಓದಿ: ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಡೊನಾಲ್ಡ್ ಟ್ರಂಪ್ಗೆ ಭರ್ಜರಿ ಗೆಲುವು
ಡೊನಾಲ್ಡ್ ಟ್ರಂಪ್ ಅವರು ಸ್ವಿಂಗ್ ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದೆ.
ವಿಕ್ಟರಿ ಭಾಷಣದಲ್ಲಿ ಹೇಳಿದ್ದೇನು?
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸನಿಹಕ್ಕೆ ಬಂದ ಡೊನಾಲ್ಡ್ ಟ್ರಂಪ್ ಅವರು ವಿಕ್ಟರಿ ಭಾಷಣವನ್ನು ಮಾಡಿದ್ದಾರೆ. ಇದು ಅಮೆರಿಕಾ ಜನರ ಗೆಲುವು. ಈ ಗೆಲುವು ನಿಮಗೆ ಬಹಳ ಸಂತೋಷ, ಹೆಮ್ಮೆ ಉಂಟಾಗಲಿದೆ. ನಾವು ಇತಿಹಾಸ ನಿರ್ಮಿಸಿದ್ದೇವೆ ಎಂದು ಅಮೆರಿಕಾದ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅಮೆರಿಕಾ ಇತಿಹಾಸದಲ್ಲೇ ಇದು ಅತ್ಯಂತ ಮಹತ್ವದ ಗೆಲುವಾಗಿದೆ. ಸ್ವಿಂಗ್ ರಾಜ್ಯಗಳಲ್ಲೂ ನಮಗೆ ಗೆಲುವು ಸಿಗುತ್ತಿದೆ. ಸೆನೆಟ್‌ನಲ್ಲೂ ನಮ್ಮ ನಿಯಂತ್ರಣ ವಾಪಸ್ ಬಂದಿದೆ. ನನ್ನ ಪ್ರತಿಯೊಂದು ಕ್ಷಣವನ್ನೂ ಅಮೆರಿಕಾಗಾಗಿ ಜೀವಿಸುವೆ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಉಪಾಧ್ಯಕ್ಷ ಅಭ್ಯರ್ಥಿ ಜೆ.ಡಿ ವ್ಯಾನಸ್ ಆಯ್ಕೆಯೂ ಬಹುತೇಕ ಖಚಿತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ