18 ವರ್ಷ ಸಾಕಿ ಸಲುಹಿದ ಅಮ್ಮನಿಗೆ 2ನೇ ಮದುವೆ ಮಾಡಿಸಿದ ಮಗ; ವಿಡಿಯೋ ಸಖತ್‌ ವೈರಲ್!

author-image
admin
Updated On
18 ವರ್ಷ ಸಾಕಿ ಸಲುಹಿದ ಅಮ್ಮನಿಗೆ 2ನೇ ಮದುವೆ ಮಾಡಿಸಿದ ಮಗ; ವಿಡಿಯೋ ಸಖತ್‌ ವೈರಲ್!
Advertisment
  • 18 ವರ್ಷ ತಾಯಿ ಜೊತೆಗಿದ್ದ ಮಗನಿಂದ ಬಹಳ ದೊಡ್ಡ ನಿರ್ಧಾರಕ್ಕೆ
  • ಪತಿಯನ್ನು ಕಳೆದುಕೊಂಡಿದ್ದ ತಾಯಿಗೆ ಮರು ಪ್ರೀತಿ, ಹೊಸ ಜೀವನ
  • ನಮಗಾಗಿ ಜೀವನ ಮುಡುಪಿಟ್ಟ ತಾಯಿಗಾಗಿ ಜೀವಿಸುವ ಸಮಯ

ಅಮ್ಮ ಎಂದರೆ ಯಾವ ಮಕ್ಕಳಿಗೆ ಇಷ್ಟ ಇಲ್ಲ ಹೇಳಿ. ಹೆತ್ತು ಹೊತ್ತ ತಾಯಿಯ ಋಣ ತೀರಿಸೋಕೆ ಒಂದು ಜನ್ಮವೂ ಸಾಕಾಗಲ್ಲ. ಆದರೆ ವಯಸ್ಸಾದ ಮೇಲೆ ಪ್ರೀತಿ, ಮಮಕಾರದಿಂದ ನೋಡಿಕೊಂಡ್ರೆ ಆ ತಾಯಿಗೆ ಏನೋ ಆನಂದ. ಈ ಮಾತುಗಳಿಗೆ ಸಾಕ್ಷಿಯಾಗುವಂತ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

18 ವರ್ಷ ತಾಯಿ ಜೊತೆಗಿದ್ದ ಈ ಮಗ ಬಹಳ ದೊಡ್ಡ ನಿರ್ಧಾರಕ್ಕೆ ಬಂದಿದ್ದಾನೆ. ಪತಿಯನ್ನು ಕಳೆದುಕೊಂಡಿದ್ದ ತಾಯಿಗೆ ಮರು ಪ್ರೀತಿ, ಹೊಸ ಜೀವನ ಕೊಟ್ಟಿದ್ದಾನೆ. ಅಬ್ದುಲ್ ಅಹಾದ್ ಎಂಬ ಯುವಕ ಪೋಸ್ಟ್ ಮಾಡಿರೋ ಭಾವನಾತ್ಮಕ ವಿಡಿಯೋ ನೆಟ್ಟಿಗರು ಫಿದಾ ಆಗುವಂತೆ ಮಾಡಿದೆ.

publive-image

ಪಾಕಿಸ್ತಾನದ ಲಾಹೋರ್​ನಲ್ಲಿ ಅಬ್ದುಲ್ ಅಹಾದ್ ಕುಟುಂಬ ವಾಸವಿದೆ. ಕಳೆದ 18 ವರ್ಷಗಳಿಂದ ಅಬ್ದುಲ್​ ಅಹಾದ್​ನ ತಾಯಿ ಪ್ರೀತಿಯಿಂದ ಸಾಕಿದ್ದಾರೆ. ಬದುಕಲ್ಲಿ ಏಕಾಂಗಿಯಾಗಿದ್ದ ತಾಯಿಗೆ ಮಗನೇ ಮುಂದೆ ನಿಂತು 2ನೇ ಮದುವೆ ಮಾಡಿಸಿ ಶುಭಾಶಯ ಕೋರಿದ್ದಾನೆ.

ಇದನ್ನೂ ಓದಿ: ಇಡೀ ದೇಶದಲ್ಲಿ ಕಿಟಕಿ ಇಲ್ಲದ ಮನೆ ಕಟ್ಟಲು ಆದೇಶ ಹೊರಡಿಸಿದ ಸರ್ಕಾರ; ಕಾರಣವೇನು? 

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ ಅಹಾದ್, ತಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ನಮಗಾಗಿ ಜೀವನ ಮುಡುಪಿಟ್ಟ ತಾಯಿಗಾಗಿ ಜೀವಿಸುವ ಸಮಯ ಇದು. ನಾನು ತೆಗೆದುಕೊಂಡ ಸ್ವಾರ್ಥ ರಹಿತ ನಿರ್ಧಾರ ಎಂದು ಬಣ್ಣಿಸಿದ್ದಾನೆ.

ಅಬ್ದುಲ್ ಅಹಾದ್ ಅವರು ತಾಯಿಗೆ 2ನೇ ಮದುವೆ ಮಾಡಿಸಿದ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಪಾಕಿಸ್ತಾನದ ಮೀಡಿಯಾಗಳು ಇದೊಂದು ಮನಮುಟ್ಟುವ ಘಟನೆ ಎಂದು ವರದಿ ಮಾಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment