ನೋಡ ನೋಡ್ತಿದ್ದಂತೆ ಭಸ್ಮಾಸುರನಂತೆ ನುಗ್ಗಿ ಬಂದ ಕಾರು.. ಭಯಾನಕ ವಿಡಿಯೋ ಸೆರೆ!

author-image
admin
Updated On
ನೋಡ ನೋಡ್ತಿದ್ದಂತೆ ಭಸ್ಮಾಸುರನಂತೆ ನುಗ್ಗಿ ಬಂದ ಕಾರು.. ಭಯಾನಕ ವಿಡಿಯೋ ಸೆರೆ!
Advertisment
  • ಬೆಂಕಿಯಲ್ಲಿ ಬೇಯುತ್ತಿದ್ದ ಕಾರು ಡ್ರೈವರ್ ಇಲ್ಲದೆ ಚಲಿಸಿದ್ದು ಹೇಗೆ?
  • ಕಾರು ಚಲಿಸುತ್ತಿದ್ದಂತೆ ದಿಕ್ಕಾಪಾಲಾಗಿ ಓಡಿ ಹೋಗಿರುವ ಜನರು
  • ಬೆಂಕಿ ಬಿದ್ದ ಕಾರಿನ ಹ್ಯಾಂಡ್ ಬ್ರೇಕ್ ಕೂಡ ಫೇಲ್ ಆಗಿ ಅನಾಹುತ!

ಜೈಪುರ: ಡ್ರೈವರ್‌ ಇಲ್ಲದ ಕಾರು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವಾಗಲೇ ನುಗ್ಗಿ ಬಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕಾರು ಚಲಿಸುತ್ತಿದ್ದಂತೆ ಜನ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.

ಜೈಪುರದ ಹೆದ್ದಾರಿಯಲ್ಲಿ ಕ್ಷಣ ಮಾತ್ರದಲ್ಲಿ ಕಾರು ಧಗಧಗ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಡ್ರೈವರ್ ತಕ್ಷಣವೇ ಕೆಳಗಡೆ ಇಳಿದಿದ್ದಾನೆ. ಡ್ರೈವರ್ ಕೆಳಗೆ ಇಳಿಯುತ್ತಿದ್ದಂತೆ ಬೆಂಕಿಯಲ್ಲಿ ಬೇಯುತ್ತಿದ್ದ ಕಾರು ಮುಂದಕ್ಕೆ ಚಲಿಸಿದೆ.

ಇದನ್ನೂ ಓದಿ: ಗೀತಾ ಜಯಂತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ! ಆಮೇಲೆ ಆಗಿದ್ದೇನು? 

ಹೊತ್ತಿ ಉರಿಯುತ್ತಿರೋವಾಗಲೇ ಕಾರು ಚಲಿಸಿದ್ದು, ಭಸ್ಮಾಸುರನಂತೆ ಕಂಡು ಬಂದಿದೆ. ಕಾರು ಚಲಿಸ್ತಿದ್ದಂತೆ ರಸ್ತೆಯಲ್ಲಿ ನಿಂತಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಒಬ್ಬ ದ್ವಿಚಕ್ರ ವಾಹನ ಸವಾರ ಬೈಕ್‌ ಬಿಟ್ಟು ಅಪಾಯದಿಂದ ಪಾರಾಗಲು ಪಕ್ಕಕ್ಕೆ ಹಾರಿದ್ದಾನೆ.


">October 13, 2024

ಬೆಂಕಿಯಲ್ಲಿ ಬೇಯುತ್ತಿದ್ದ ಕಾರು ಸ್ವಲ್ಪ ದೂರ ಹಾಗೇ ಮುಂದಕ್ಕೆ ಹೋಗಿ ಮತ್ತೆ ಡಿವೈಡರ್‌ಗೆ ಗುದ್ದಿ ನಿಂತಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರ ಮೊಬೈಲ್​ನಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ.

ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರಿನ ಮಾಲೀಕನನ್ನು ಮುಖೇಶ್ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಆದರೆ ಮುಖೇಶ್ ಅವರು ಈ ಕಾರಿನಲ್ಲಿ ಇರಲಿಲ್ಲ. ಮುಖೇಶ್ ಅವರ ಸ್ನೇಹಿತ ಜಿತೇಂದ್ರ ಜಂಗಿದ್ ಅವರು ಡ್ರೈವ್ ಮಾಡುತ್ತಿದ್ದ ಈ ಅನಾಹುತ ನಡೆದಿದೆ.


">October 13, 2024

ಜಿತೇಂದ್ರ ಅವರು ಕಾರು ಚಲಾಯಿಸುತ್ತಿರುವಾಗಲೇ ಕಾರಿನ ಬಾನೆಟ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಡಿವೈಡರ್‌ಗೆ ಗುದ್ದಿ ಕಾರು ನಿಲ್ಲಿಸಿದ ಇವರು ತಕ್ಷಣವೇ ಕಾರಿನಿಂದ ಹೊರಗೆ ಬಂದಿದ್ದಾರೆ. ಬೆಂಕಿ ಬಿದ್ದ ಗಾಬರಿಯಲ್ಲಿ ಹೊರಗೆ ಬಂದವರಿಗೆ ಬೆಂಕಿ ಬಿದ್ದ ಕಾರು ಮುಂದೆ ಹೋಗಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಬೆಂಕಿ ಬಿದ್ದ ಕಾರಿನ ಹ್ಯಾಂಡ್ ಬ್ರೇಕ್ ಕೂಡ ಫೇಲ್ ಆಗಿ ಮುಂದಕ್ಕೆ ಚಲಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment