newsfirstkannada.com

VIDEO: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಬಾಯಲ್ಲಿ ರಕ್ತ ಬರುವಂತೆ ಹಲ್ಲೆ; ಕಾರಣವೇನು..?

Share :

Published February 7, 2024 at 8:51am

  ದುಷ್ಕರ್ಮಿಗಳು ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಭಾರತೀಯ

  ದಯವಿಟ್ಟು ಕಾಪಾಡಿ ಎಂದು ವಿಡಿಯೋದಲ್ಲಿ ಅಂಗಲಾಚಿದ ವಿದ್ಯಾರ್ಥಿ

  ರಾತ್ರಿ ಮನೆಗೆ ಹೋಗುವಾಗ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು

ಅಮೆರಿಕದ ಚಿಕಾಗೋದಲ್ಲಿ ದುಷ್ಕರ್ಮಿಗಳು ಭಾರತದ ಹೈದರಾಬಾದ್ ಮೂಲದ ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ರಕ್ತದ ಸುರಿಯುತ್ತಿದ್ದರು ದಯವಿಟ್ಟು ನನ್ನನ್ನು ಕಾಪಾಡಿ ಎಂದು ವಿಡಿಯೋದಲ್ಲಿ ಅಂಗಲಾಚಿದ್ದಾನೆ.

ಸೈಯದ್ ಮಜಾಹಿರ್ ಅಲಿ ದರೋಡೆಕೋರರಿಂದ ತೀವ್ರವಾಗಿ ಗಾಯೊಂಡಿರುವ ವಿದ್ಯಾರ್ಥಿ. ಸದ್ಯ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈದರಾಬಾದ್‌ನಲ್ಲಿರುವ ಅವರ ಕುಟುಂಬ, ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಅವರಿಗೆ ಪತ್ರ ಬರೆದಿದ್ದು ಯುಎಸ್‌ಗೆ ತೆರಳಲು ಅವಕಾಶ ನೀಡಿ ಎಂದು ಆತನ ಪತ್ನಿ ಸೈಯದಾ ರುಕುಲಿಯಾ ಫಾತಿಮಾ ರಿಜ್ವಿ ಒತ್ತಾಯಿಸಿದ್ದಾರೆ.

ಅಮೇರಿಕದ ಚಿಕಾಗೋದಲ್ಲಿರುವ ನನ್ನ ಗಂಡನ ಸುರಕ್ಷತೆ ಬಗ್ಗೆ ನನಗೆ ತುಂಬಾ ಭಯವಾಗುತ್ತಿದೆ. ಗಾಯಗೊಂಡಿರುವ ನನ್ನ ಗಂಡನಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಹಾಯ ಮಾಡಿ. ಸಾಧ್ಯವಾದರೆ ನನ್ನ ಮಕ್ಕಳೊಂದಿಗೆ ಅಮೆರಿಕಕ್ಕೆ ತೆರಳಲು ಅವಕಾಶ ಮಾಡಿಕೊಡಿ ಎಂದು ಪತ್ನಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಅಲಿ ಅವರು ಮಾಸ್ಟರ್ಸ್ ಮಾಡುತ್ತಿದ್ದಾರೆ. ಚಿಕಾಗೋದ ಬೀದಿಯಲ್ಲಿ ಅವರ ಮೇಲೆ ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಯ ಹುಟ್ಟಿಸುವಂತೆ ದೃಶ್ಯ ಇದೆ.

ನಾನು ಮನೆಗೆ ವಾಪಸ್ ಆಗಿದ್ದಾಗ 4 ಜನ ಸೇರಿ ನನ್ನ ಮೇಲೆ ದಾಳಿ ಮಾಡಿ, ಪಂಚ್ ಮಾಡಿದ್ದಾರೆ. ಹೇಗೆಂದರೆ ಹಾಗೇ ಒದ್ದು, ಹೊಡೆದಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ ವಿಡಿಯೋದಲ್ಲಿ ರಕ್ಷಣೆಗಾಗಿ ಅಲಿ ಅಂಗಲಾಚಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಬಾಯಲ್ಲಿ ರಕ್ತ ಬರುವಂತೆ ಹಲ್ಲೆ; ಕಾರಣವೇನು..?

https://newsfirstlive.com/wp-content/uploads/2024/02/US_ATTACK.jpg

Load More