newsfirstkannada.com

ರೀಲ್ಸ್ ಹುಚ್ಚರೇ ಹುಷಾರ್.. ನಾನು ನಂದಿನಿ ಖ್ಯಾತಿಯ ವಿಕಾಸ್‌ಗೆ ಸಂಕಷ್ಟ! ಅಸಲಿಗೆ ಆಗಿದ್ದೇನು?

Share :

Published July 11, 2024 at 6:01pm

  ವಿಭಿನ್ನ ರೀಲ್ಸ್​ಗಳನ್ನು​ ಶೇರ್​ ಮಾಡಿ ಸುದ್ದಿಯಲ್ಲಿ ಇರುತ್ತಿದ್ದ ವಿಕ್ಕಿಪೀಡಿಯಾ

  ಮತ್ತೆ ಈ ರೀತಿಯ ವಿಡಿಯೋ ಮಾಡದಂತೆ ಸೂಚನೆ ಕೊಟ್ಟ ಪೊಲೀಸರು

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಆ ವಿಡಿಯೋ

ಬೆಂಗಳೂರು: ಈ ಸೋಷಿಯಲ್ ಮೀಡಿಯಾ ಅನ್ನೋದೇ ಹಾಗೇ. ಏನಾದರೂ ಇಷ್ಟ ಆಯ್ತು ಅಂದ್ರೆ ವೈರಸ್​ ಥರಾ ಎಲ್ಲಿ ನೋಡಿದರೂ ಅದರದ್ದೇ ಹಾವಳಿ ಇರುತ್ತೆ. ಅದರಲ್ಲೂ ರೀಲ್ಸ್​ ಮಾಡೋರಿಗೆ ಹಬ್ಬನೇ ಹಬ್ಬ. ಯಾವುದೇ ರೀಲ್ಸ್​ ನೋಡಿದರೂ ನಮಗೆ ಕೇಳೋಕೆ, ನೋಡೋಕೆ ಸಿಗೋದು ಒಂದೇ ಒಂದು ‘ನಾನು ನಂದಿನಿ ಬೆಂಗಳೂರು ಬಂದಿನಿ’ ಅನ್ನೋ ವೈರಲ್ ಸಾಂಗ್. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು ಈ ರೀಲ್ಸ್.

ಇದನ್ನೂ ಓದಿ: ‘ನಾನು ನಂದಿನಿ ಸ್ಟೇಷನ್​​ಗೆ ಹೋಗಿ ಬಂದಿನಿ’ ರೀಲ್ಸ್​ನಿಂದಲೇ ಫಜೀತಿಗೆ ಸಿಲುಕಿದ ವಿಕ್ಕಿಪೀಡಿಯಾ ವಿಕಾಸ್!

ಈ ರೀಲ್​​ ವೈರಲ್​ ಬಳಿಕ ಸಾಕಷ್ಟು ಜನರು ಯಾರಪ್ಪ ‘ನಾನು ನಂದಿನಿ ಬೆಂಗಳೂರಿಗ್ ಬಂದಿನಿ’ ಹಾಡು ಹಾಡಿದ್ದು ಅಂತ ಸಿಕ್ಕಾಪಟ್ಟೆ ಸರ್ಚ್ ಮಾಡಿದ್ರು. ಆ ಬಳಿಕವೇ ಗೊತ್ತಾಗಿದ್ದು ‘ನಾನು ನಂದಿನಿ’ ಕ್ರಿಯೇಟರ್ ಯಾರು ಅಂತ. ಹೌದು, ನಾನು ನಂದಿನಿ ಹಾಡಿನಿಂದ ದೇಶಾದ್ಯಂತ ಸದ್ದು ಮಾಡಿದ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್. ನಾನು ನಂದಿನಿ ಹಾಡಿನ ಮೂಲಕ ಎಲ್ಲೆಲ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಈ ಹಾಡಿಗೆ ಅದೆಷ್ಟೋ ಮಂದಿ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಹವಾ ಮೂಡಿಸಿದ್ದರು.

ಇದನ್ನೂ ಓದಿ: ಕರಿಮಣಿ ಮಾಲೀಕ ಬೆನ್ನಲ್ಲೇ ಹೊಸ ರೀಲ್ಸ್​ ಮಾಡಿದ ವಿಕಾಸ್.. ‘ ನೀರಿಲ್ಲ ನೀರಿಲ್ಲ’ ಫುಲ್​ ಟ್ರೆಂಡಿಂಗ್​!

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವಿಕ್ಕಿಪೀಡಿಯಾ ವಿಕಾಸ್ ಅವರು ಹೊಸ ಹೊಸ ವಿಡಿಯೋಗಳನ್ನ ಪ್ರೊಡ್ಯೂಸ್ ಮಾಡ್ತಾ ಇರ್ತಾರೆ. ಕಾಂಟ್ರವರ್ಸಿ, ಟ್ರೆಂಡಿಂಗ್, ಪೊಲಿಟಿಕಲ್ ಡ್ರಾಮಾ ಹೀಗೆ ಸೊಸೈಟಿಯಲ್ಲಿ ಏನೇ ಡೆವಲಪ್​ಮೆಂಟ್​ ಆದ್ರು ತಮ್ಮದೇ ಸ್ಟೈಲ್​ನಲ್ಲಿ ಅದಕ್ಕೊಂದು ವಿಶೇಷವಾದ ಕಂಟೆಂಟ್​​ ಕ್ರಿಯೇಟ್ ಮಾಡೋದು ವಿಕಿಪೀಡಿಯ ಹವ್ಯಾಸ. ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಜನರು ನೀರಿನ ಮೊರೆ ಹೋಗಿದ್ದಾಗ ಕರಿಮಣಿ ಮಾಲೀಕ ಹಾಡಿಗೆ ಓನಲ್ಲ ನೀರಿಲ್ಲ ಎಂದು ರೀಲ್ಸ್​ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರೀಲ್ಸ್​ವೊಂದನ್ನು ಶೇರ್ ಮಾಡಿಕೊಂಡು ವಿಕ್ಕಿಪೀಡಿಯಾ ವಿಕಾಸ್ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಇದನ್ನೂ ಓದಿ: ಇಂದು ವಿಶ್ವ ಜನಸಂಖ್ಯಾ ದಿನಾಚರಣೆ.. 35ನೇ ವರ್ಷಕ್ಕೆ  10ನೇ ಮಗುವಿಗೆ ಜನ್ಮ ನೀಡಿದ ತಾಯಿ!

ಹೌದು, ಭಿನ್ನ ವಿಭಿನ್ನ ರೀಲ್ಸ್​ಗಳನ್ನು​ ಶೇರ್ ಮಾಡಿ ಸಖತ್​ ಸುದ್ದಿಯಲ್ಲಿ ಇರುತ್ತಿದ್ದ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್​ಗೆ ಪೊಲೀಸರು ಖಡಕ್ ವಾರ್ನಿಂಗ್​ ಕೊಟ್ಟಿದ್ದಾರೆ. ವಿಕ್ಕಿಪೀಡಿಯಾ ವಿಕಾಸ್ ಡ್ರಗ್ಸ್ (ಮಾದಕ ವಸ್ತು ವ್ಯಸನ) ವಿಚಾರಕ್ಕೆ ಸಂಬಂಧಿಸಿದಂತ ರೀಲ್ಸ್​ವೊಂದನ್ನು ಶೇರ್ ಮಾಡಿಕೊಂಡಿದ್ದರು. ಇದೇ ರೀಲ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಹೀಗೆ ವೈರಲ್​ ಆದ ವಿಡಿಯೋವನ್ನು ನೋಡಿದ ಪೊಲೀಸರು ವಿಕ್ಕಿಪೀಡಿಯಾ ವಿಕಾಸ್​ ಬೈಯಪ್ಪನಹಳ್ಳಿ ಪೊಲೀಸ್​ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವಿಕ್ಕಿಪೀಡಿಯಾ ವಿಕಾಸ್​ ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಮತ್ತೆ ಎಂದು ಈ ರೀತಿಯ ವಿಡಿಯೋ ಮಾಡದಂತೆ ಸೂಚನೆ ಕೊಟ್ಟಿದ್ದಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೀಲ್ಸ್ ಹುಚ್ಚರೇ ಹುಷಾರ್.. ನಾನು ನಂದಿನಿ ಖ್ಯಾತಿಯ ವಿಕಾಸ್‌ಗೆ ಸಂಕಷ್ಟ! ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/07/Vicky-Pedia3.jpg

Load More